Advertisement

ಮೂರು ಗಂಟೆಗಳಲ್ಲಿ ಪೋಸ್ಟ್‌ ಡಿಲೀಟ್‌!

12:30 AM Mar 22, 2019 | |

ಹೊಸದಿಲ್ಲಿ: ಸೋಷಿಯಲ್‌ ಮೀಡಿಯಾಗಳಲ್ಲಿ ಆಕ್ಷೇಪಾರ್ಹ ಪೋಸ್ಟ್‌ ಗಳನ್ನು ಪ್ರಕಟಿಸಿದಲ್ಲಿ ಅದನ್ನು ತ್ವರಿತವಾಗಿ ವಿಶ್ಲೇಷಿಸಿ ತೆಗೆದುಹಾಕುವ ಪ್ರಕ್ರಿಯೆಗೆ ಸೋಷಿಯಲ್‌ ಮೀಡಿಯಾ ಸಂಸ್ಥೆಗಳು ಜಾರಿಗೊಳಿಸಿವೆ. 

Advertisement

ಮತದಾನಕ್ಕೂ ಮೊದಲಿನ 48 ಗಂಟೆಗಳಲ್ಲಿ ನೀತಿ ಸಂಹಿತೆ ಉಲ್ಲಂಘಿಸುವ ವಿಷಯಗಳನ್ನು ಮೂರು ಗಂಟೆಗಳಲ್ಲಿ ಪರಿಶೀಲಿಸಿ ತೆಗೆದುಹಾಕಲಾಗುತ್ತದೆ.  ಜಾಲತಾಣಗಳಲ್ಲಿನ ಮಾಹಿತಿ ಅಪ್‌ಲೋಡ್‌, ಶೇರಿಂಗ್‌ ಬಗ್ಗೆ ನಿಯಂತ್ರಣ ಹೇರಬೇಕು ಎಂಬ ಸೂಚನೆ ಹಿನ್ನೆಲೆಯಲ್ಲಿ  ಫೇಸ್‌ಬುಕ್‌, ವಾಟ್ಸ್‌ ಆ್ಯಪ್‌, ಟ್ವಿಟರ್‌, ಗೂಗಲ್‌, ಶೇರ್‌ ಚಾಟ್‌, ಟಿಕ್‌ಟಾಕ್‌ ಸೇರಿದಂತೆ ಇತರ ಸೋಷಿಯಲ್‌ ಮೀಡಿಯಾ ಸಂಸ್ಥೆಗಳು ಈ ನಿರ್ಧಾರ ಪ್ರಕಟಿಸಿವೆ.

ಆಕ್ಷೇಪಾರ್ಹ ಕಂಟೆಂಟ್‌ ಕಂಡು ಬಂದಲ್ಲಿ ಇದರ ಬಗ್ಗೆ ಚುನಾವಣಾ ಆಯೋಗ ಸಂಬಂಧಿತ ಸೋಷಿಯಲ್‌ ಮೀಡಿಯಾ ಸಂಸ್ಥೆಗಳಿಗೆ ಸೂಚನೆ ನೀಡಲಿದೆ. ಇದನ್ನು ಮೂರು ಗಂಟೆಗಳಲ್ಲಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ. ಸೋಷಿಯಲ್‌ ಮೀಡಿಯಾಗಳಿಗೆ 48 ಗಂಟೆಗಳಲ್ಲಿ ಮಾಧ್ಯಮಗಳಿಗೆ ವಿಧಿಸಿದಂತಹ ನೀತಿ ಸಂಹಿತೆಯನ್ನೇ ಜಾರಿಗೊಳಿಸಬೇಕು ಎಂಬ ಆಗ್ರಹ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಈ ಸಂಬಂಧ ನೀತಿ ಸಂಹಿತೆಯನ್ನು ಪ್ರತ್ಯೇಕವಾಗಿ ರೂಪಿಸಲಾಗಿದ್ದು, ಇದಕ್ಕೆ ಎಲ್ಲ ಸೋಷಿಯಲ್‌ ಮೀಡಿಯಾ ವೆಬ್‌ಸೈಟ್‌ಗಳು ಚುನಾವಣೆಯಲ್ಲಿ ಪಾರ ದರ್ಶಕತೆ ಪಕ್ಷಪಾತತ ನದಿಂದ ಬದ್ಧವಾಗಬೇಕಿದೆ. ಇನ್ನೊಂ ದೆಡೆ ಜಾಹೀರಾತುಗಳಿಗೆ ಸಂಬಂಧಿಸಿ ದಂತೆ ಈಗಾಗಲೇ ಕಠಿಣ ನೀತಿಯನ್ನು ಅಳವಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next