Advertisement

ತುಳು ಭಾಷೆಗಾಗಿ ‘ಪೋಸ್ಟ್‌ ಕಾರ್ಡ್‌ ಚಳವಳಿ’

07:15 AM Dec 23, 2018 | Karthik A |

ಬೆಂಗಳೂರು: ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವಂತೆ ಆಗ್ರಹಿಸಿ ಜನವರಿ ತಿಂಗಳಲ್ಲಿ ‘ಪೋಸ್ಟ್‌ ಕಾರ್ಡ್‌ ಚಳವಳಿ’ ಅಭಿಯಾನ ಹಮ್ಮಿಕೊಳ್ಳಲು ತುಳು ಎಂಟನೇ ಪರಿಚ್ಛೇದ ಹೋರಾಟ ಸಮಿತಿ ನಿರ್ಧರಿಸಿದೆ.

Advertisement

ಪಂಚ ದ್ರಾವಿಡ ಭಾಷೆಗಳಲ್ಲಿ ಒಂದು ಎಂದು ಗುರುತಿಸಲ್ಪಟ್ಟಿರುವ ತುಳು ಭಾಷೆ ರಾಜಾಶ್ರಯವಿಲ್ಲದೆ ನಿರ್ಲಕ್ಷಿಸಲ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದಾಗಿರುವ ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಬೇಕು, ಭಾಷೆಯನ್ನು ಉಳಿಸುವಂತೆ ಆಗ್ರಹಿಸಿ ರಾಜ್ಯದ ಸಂಸದರ ಮತ್ತು ಶಾಸಕರ ಮನೆ ಹಾಗೂ ಕಾರ್ಯಾಲಯದ ವಿಳಾಸಕ್ಕೆ ಪತ್ರ ಬರೆಯಲಾಗುವುದು ಎಂದು ಸಮಿತಿ ಸಂಚಾಲಕ ಉದಯ ಧರ್ಮಸ್ಥಳ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ತುಳು ಭಾಷೆಯ ಪರವಾಗಿ ಇತ್ತೀಚೆಗೆ ಸಂಸತ್ತಿನಲ್ಲಿ ಧ್ವನಿ ಎತ್ತಿದ ಕಾಸರಗೋಡು ಸಂಸದ ಪಿ.ಕರುಣಾಕರನ್‌ ಅವರಿಗೆ ಧನ್ಯವಾದ ಹೇಳಿದ ಅವರು, ತುಳುವಿಗೂ ಒಂದು ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಬೇಕು. ತುಳು ವಿಶ್ವವಿದ್ಯಾಲಯ ಸ್ಥಾಪಿಸಬೇಕು. ಹಾಗೆಯೇ ತುಳು ಲಿಪಿಯ ಅಭಿವೃದ್ಧಿಗೆ ಸರಕಾರ ಪ್ರೋತ್ಸಾಹ ನೀಡಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next