Advertisement

Bahrain: ಪ್ಯಾಲೆಸ್ತೀನ್‌ ವಿರುದ್ಧ ಪೋಸ್ಟ್‌: ಭಾರತೀಯ ಮೂಲದ ವೈದ್ಯನ ವಜಾ

10:54 PM Oct 20, 2023 | Team Udayavani |

ಮನಾಮಾ: ಪ್ಯಾಲೆಸ್ತೀನ್‌ ವಿರುದ್ಧ ಪೋಸ್ಟ್‌ಗಳನ್ನು ಹಾಕಿದ ಪರಿಣಾಮ ಬಹರೇನ್‌ನಲ್ಲಿರುವ ರಾಯಲ್‌ ಬಹರೇನ್‌ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಮೂಲದ ವೈದ್ಯರೊಬ್ಬರನ್ನು ಕೆಲಸದಿಂದ ತೆಗೆದುಹಾಕಲಾಗಿದೆ.

Advertisement

ಗಾಜಾಪಟ್ಟಿಯಲ್ಲಿ ಪ್ಯಾಲೆಸ್ತೀನ್‌ ಉಗ್ರ ಸಂಘಟನೆ ಮತ್ತು ಇಸ್ರೇಲ್‌ ಸೇನೆ ನಡುವೆ ಯುದ್ಧ ನಡೆಯುತ್ತಿದೆ. ಇಸ್ರೇಲ್‌ ಬೆಂಬಲಿಸಿ ಭಾರತೀಯ ಮೂಲದ ಡಾ. ಸುನೀಲ್‌ ರಾವ್‌ ಸರಣಿ ಟ್ವೀಟ್‌ಗಳನ್ನು ಮಾಡಿದ್ದರು. ಈ ಟ್ವೀಟ್‌ಗಳ ಬಗ್ಗೆ ಟ್ವಿಟರ್‌ ಬಳಕೆದಾರರೊಬ್ಬರು ಬಹರೇನಿ ಅಧಿಕಾರಿಗಳ ಗಮನಕ್ಕೆ ತಂದಿದ್ದರು.

“ನಮ್ಮ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಾ. ಸುನೀಲ್‌ ರಾವ್‌ ಅವರು ಸಾಮಾಜಿಕ ಜಾಲತಾಣದಲ್ಲಿ ನಮ್ಮ ಸಮಾಜಕ್ಕೆ ಆಕ್ರಮಣಕಾರಿ ಎಂಬಂತಹ ಪೋಸ್ಟ್‌ಗಳನ್ನು ಮಾಡಿರುವುದು ಗಮನಕ್ಕೆ ಬಂದಿದೆ. ಅವರು ಟ್ವೀಟ್‌ಗಳು ವೈಯಕ್ತಿಕವಾದದ್ದು. ಅದಕ್ಕೂ ಆಸ್ಪತ್ರೆಗೂ ಸಂಬಂಧವಿಲ್ಲ. ಆಸ್ಪತ್ರೆಯ ನಿಯಮಗಳನ್ನು ಉಲ್ಲಂ ಸಿದ ಕಾರಣಕ್ಕಾಗಿ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ’ ಎಂದು ರಾಯಲ್‌ ಬಹರೇನ್‌ ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next