Advertisement

ಸಂಪೂರ್ಣ ಲಾಕ್‌ಡೌನ್‌ ಯಶಸ್ವಿ, ಪಾಸಿಟಿವಿಟಿ ದರ ಶೇ.10ಕ್ಕೆ ಇಳಿಕೆ : ಉಡುಪಿ ಜಿಲ್ಲಾಧಿಕಾರಿ

07:32 PM Jun 08, 2021 | Team Udayavani |

ಉಡುಪಿ: ಜಿಲ್ಲೆಯಲ್ಲಿನ 40 ಗ್ರಾ.ಪಂ.ಗಳ ಸಂಪೂರ್ಣ ಲಾಕ್‌ಡೌನ್‌ ಕೊರೊನಾ ಹತೋಟಿಗೆ ತರುವಲ್ಲಿ ಅದ್ಭುತವಾಗಿ ಕೆಲಸ ಮಾಡಿದೆ. ಕೋವಿಡ್‌ ಪಾಸಿಟಿವಿಟಿ ಪ್ರಮಾಣ ಶೇ.10ಕ್ಕಿಂತ ಕಡಿಮೆಯಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ತಿಳಿಸಿದರು.

Advertisement

ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊರೊನಾ ಪಾಸಿಟಿವ್‌ ಬಂದ್‌ ಮನೆಗಳನ್ನು ಸೀಲ್‌ಡೌನ್‌ ಮಾಡಲಾಗುತ್ತಿದೆ. ಇದರಿಂದ ಜನರು ಪಾಸಿಟಿವ್‌ ಬಂದವರಿಂದ ದೂರ ಉಳಿಯಲು ಸಾಧ್ಯವಾಗುತ್ತಿದೆ. ನಿತ್ಯ 3ರಿಂದ 4 ಸಾವಿರ ಜನರ ಗಂಟಲ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. 50ಕ್ಕಿಂತ ಹೆಚ್ಚು ಕೊರೊನಾ ಪ್ರಕರಣಗಳಿರುವ 16 ಗ್ರಾ.ಪಂ.ಗಳಲ್ಲಿ ಜೂ.9ರಿಂದ ಜೂ.13ರ ವರೆಗೆ ಸಂಪೂರ್ಣ ಲಾಕ್‌ಡೌನ್‌ ವಿಧಿಸಲಾಗುತ್ತದೆ ಎಂದು ಹೇಳಿದರು.

ಕೊರೊನಾ ಪ್ರಕರಣಗಳು ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಕೊರೊನಾ ಹೆಚ್ಚಾಗುತ್ತಿರುವ ಗ್ರಾ.ಪಂ. ಹಾಗೂ ವಾರ್ಡ್‌ಗಳ ಅವಲೋಕನ ಮಾಡಲಾಗಿದೆ. ಪ್ರತಿ ಪಂಚಾಯಿತಿಗೆ ಅಧಿಕಾರಿಗಳು ಭೇಟಿ ನೀಡಿ ಕೊರೊನಾ ನಿರ್ವಹಣೆಯ ಕುರಿತು ಮಾಹಿತಿ ನೀಡಲಾಗುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ :ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಪಾಸಿಟವ್‌ ಪ್ರಮಾಣ ಇಳಿಕೆ : ಇಂದು 204 ಪ್ರಕರಣ ದಾಖಲು

ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ಆಸ್ಪತ್ರೆಯ ಬೆಡ್‌ಗಾಗಿ ಕರೆ ಬರುವುದು ಕಡಿಮೆಯಾಗಿದೆ. 1,200 ಆಮ್ಲಜನಕ ಬೆಡ್‌ನ‌ಲ್ಲಿ ಕೇವಲ 300 ಬೆಡ್‌ ಬಳಕೆ ಮಾಡಲಾಗಿದೆ. ಜಿಲ್ಲೆಯಲ್ಲಿ ಆಕ್ಸಿಜನ್‌ ಉತ್ಪಾದನೆಯತ್ತ ಗಮನ ಹರಿಸಲಾಗುತ್ತಿದೆ ಎಂದರು.

Advertisement

ಮಕ್ಕಳ ತಜ್ಞರೊಂದಿಗೆ ಸಭೆ
ಮೂರನೇ ಅಲೆಗೆ ಮಕ್ಕಳು ತುತ್ತಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲೆಯ ಮಕ್ಕಳ ತಜ್ಞರೊಂದಿಗೆ ಸಭೆ ಮಾಡಲಾಗಿದೆ. ದಾನಿಗಳು, ಸಿಎಸ್‌ಆರ್‌ ಫ‌ಂಡ್‌ ಹಾಗೂ ಸರಕಾರದ ನೆರವಿನಿಂದ ಮಕ್ಕಳ ಚಿಕಿತ್ಸೆಗೆ ಅಗತ್ಯವಿರುವ ಸಿದ್ಧ ಮಾಡಲಾಗುತ್ತದೆ. ಈಗಾಗಲೇ ಜಿಲ್ಲೆಯಲ್ಲಿ 3,500 ಮಕ್ಕಳು ಕೊರೊನಾಗೆ ತುತ್ತಾಗಿದ್ದು, ಯಾರಿಗೂ ತೊಂದರೆಯಾಗಿಲ್ಲ. ಮಕ್ಕಳಿಗಾಗಿ ವಿಶೇಷ ಕೋವಿಡ್‌ ಕೇರ್‌ ಸೆಂಟರ್‌ ತೆರೆಯಲಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next