Advertisement

ಪೊಲೀಸ್‌ಗೆ ಪಾಸಿಟಿವ್‌: ದೇವದುರ್ಗ ಠಾಣೆ ಸೀಲ್‌ಡೌನ್‌

06:26 AM Jun 03, 2020 | Suhan S |

ದೇವದುರ್ಗ: ತಾಲೂಕಿನ ಜಾಲಹಳ್ಳಿ ಮೊರಾರ್ಜಿ ವಸತಿ ನಿಲಯ ಕ್ವಾರಂಟೈನ್‌ ನಲ್ಲಿ ಕರ್ತವ್ಯಕ್ಕೆ ನಿಯೋಜನೆಯಾಗಿದ್ದ ಸಂಚಾರಿ ಠಾಣೆ ಪೊಲೀಸ್‌ ಸಿಬ್ಬಂದಿಗೆ ಕೋವಿಡ್ ಪಾಸಿಟಿವ್‌ ದೃಢಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಮಂಗಳವಾರ ದೇವದುರ್ಗ ಪೊಲೀಸ್‌ ಠಾಣೆ ಸೀಲ್‌ ಡೌನ್‌ ಮಾಡಲಾಗಿದೆ.

Advertisement

ಪೊಲೀಸ್‌ ವಾಸುತ್ತಿದ್ದ ಪಟ್ಟಣದ ಶಾಂತಿನಗರ ವಾರ್ಡ್‌ ಲಾಕ್‌ಡೌನ್‌ ಮಾಡಲಾಗಿದೆ. 25 ಜನ ಪೊಲೀಸ್‌ ಸಿಬ್ಬಂದಿಯನ್ನು ಕ್ವಾರಂಟೈನ್‌ ಮಾಡಲಾಗುತ್ತದೆ. ದೇವದುರ್ಗ ಠಾಣೆ ವ್ಯಾಪ್ತಿಗೆ ಬರುವಂತ ಯಾವುದೇ ದೂರುಗಳನ್ನು ಏಳು ದಿನದ ವರೆಗೆ ತಾತ್ಕಲಿಕವಾಗಿ ತಾಲೂಕಿನ ಜಾಲಹಳ್ಳಿ ಪೊಲೀಸ್‌ ಠಾಣೆಗೆ ಸಲ್ಲಿಸಲು ಸೂಚಿಸಲಾಗಿದೆ ಎಂದು ಡಿವೈಎಸ್‌ಪಿ ಎಸ್‌.ಎಸ್‌.ಹುಲ್ಲೂರು ತಿಳಿಸಿದ್ದಾರೆ.

ಪಾಸಿಟಿವ್‌ ಪ್ರಕರಣ ಕಂಡುಬಂದ ಪೊಲೀಸ್‌ ಸಿಬ್ಬಂದಿ ಜತೆಗೆ ಪ್ರಥಮ ಹಾಗೂ ದ್ವಿತೀಯ ಸಂಪರ್ಕದಲ್ಲಿರುವನ್ನು ಪತ್ತೆ ಮಾಡಲಾಗುತ್ತಿದೆ. ಏಳು ದಿನವರೆಗೆ ಠಾಣೆ ವ್ಯಾಪ್ತಿಯ ಸುತ್ತಲೂ  ಮುಂಜಾಗೃತಾ ಕ್ರಮವಹಿಸಲು ಪುರಸಭೆ ಮುಖ್ಯಾಧಿಕಾರಿಗೆ ಸೂಚನೆ ನೀಡಲಾಗಿದೆ. ಕಂಟೇನ್ಮೆಂಟ್‌ ಝೋನ್‌ ಎಂದು ಪರಿಗಣಿಸಲಾಗಿದ್ದು, ಹೆಚ್ಚಿನ ಗಮನಹರಿಸಲು ಸೂಚನೆ ನೀಡಲಾಗಿದೆ. ಶಾಂತಿನಗರದಲ್ಲಿ ವಾಸಿಸುತ್ತಿರುವ ಪೊಲೀಸ್‌ ಸಿಬ್ಬಂದಿಗೆ ಪಾಸಿಟಿವ್‌ ಪ್ರಕರಣ ದೃಢ ಪಡುತ್ತಿದ್ದಂತೆಯೇ ಅಲ್ಲಿನ ನಿವಾಸಿಗಳು ತೀರಾ ಆತಂಕ ಪಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಪಿಎಸ್‌ಐ ರಂಗಯ್ಯ, ಮುಖ್ಯಾಧಿಕಾರಿ ಶರಣಪ್ಪ ಸೇರಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next