ಸಿಂಧನೂರು: ಕೊರೊನಾ ಪಾಸಿಟಿವ್ ಇದ್ದಸುಮಾರು 10 ಮಹಿಳೆಯರಿಗೆ ಸರಳ ಹೆರಿಗೆಮಾಡಿಸುವ ಮೂಲಕ ಇಲ್ಲಿನ ದಾದಿಯರು(ನರ್ಸ್)ಗಳು ಮಾದರಿ ಹೆಜ್ಜೆ ಇಟ್ಟಿದ್ದಾರೆ.ನಗರದ100 ಬೆಡ್‌ಗಳ ಸಾರ್ವಜನಿಕ ಆಸ್ಪತ್ರೆಯಹೆರಿಗೆ ವಿಭಾಗದ ಸಿಬ್ಬಂದಿ ಧೈರ್ಯ ತೋರಿದಪರಿಣಾಮ ತಾಯಿಹಾಗೂ ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೋವಿಡ್ ವಾರ್ಡ್ ಇರುವಕಾರಣಕ್ಕೆ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಸಿಬ್ಬಂದಿನಮಗೆ ಬೇರೆಆಡಳಿತಾತ್ಮಕಕಚೇರಿ ಒದಗಿಸಿಎಂಬ ಬೇಡಿಕೆ ಸಹ ಇಟ್ಟಿದ್ದಾರೆ! ಹೆರಿಗೆ ವಿಭಾಗದ ಸಿಬ್ಬಂದಿ ಮಾತ್ರ ಪಾಸಿಟಿವ್ ಪ್ರಕರಣಗಳನ್ನು ಪಿಪಿಇಕಿಟ್ ಹಾಗೂ ಸುರಕ್ಷತಾ ಕವಚಗಳ ಮೂಲಕಧೈರ್ಯವಾಗಿ ನೆರವಿಗೆ ನಿಂತಿದ್ದಾರೆ.
ತಿಂಗಳಲ್ಲಿ 10ಹೆರಿಗೆ: ಪಾಸಿಟಿವ್ ಪ್ರಕರಣಗೊತ್ತಾದತಕ್ಷಣವೇ ಅವರಿಂದ ಮಾರು ದೂರ ಸರಿಯುವುದುಸಾಮಾನ್ಯ. ಗರ್ಭಿಣಿತಾಯಿಯರನ್ನುಮಾತನಾಡಿಸಿ,ಅವರಿಗೆ ಧೈರ್ಯ ತುಂಬಿ ಇಲ್ಲಿನ ನರ್ಸ್ ಅನ್ನಪೂರ್ಣ ಅವರು ತಾಯಿ, ಮಗುವನ್ನು ಉಳಿಸುವಕೆಲಸಕ್ಕೆ ಕೈ ಹಾಕುತ್ತಿದ್ದಂತೆ ಇತರೆ ಸಿಬ್ಬಂದಿಯೂ ಕೈಜೋಡಿಸಿದ್ದಾರೆ.
ಸುಮಿತ್ರಾ, ನಿರ್ಮಲಾ ಎನ್ನುವನರ್ಸ್ ಕೂಡ ಪಾಸಿಟಿವ್ ಬಂದ ಗರ್ಭಿಣಿಯರಿಗೆಸುರಕ್ಷಿತ ಹೆರಿಗೆ ಮಾಡಿಸಿ ಸೈ ಎನಿಸಿಕೊಂಡಿದ್ದಾರೆ.ಆರೋಗ್ಯ ಇಲಾಖೆಯ ಮಾರ್ಗಸೂಚಿ ಪ್ರಕಾರ, ಎಲ್ಲಸುರಕ್ಷತಾ ಕವಚ ಧರಿಸಿ, ಇಂತಹ ಸೇವೆ ಸಲ್ಲಿಸಿದಪರಿಣಾಮ ಕಳೆದ ಒಂದು ತಿಂಗಳಲ್ಲಿ 10 ಜನಕೊರೊನಾ ಪಾಸಿಟಿವ್ ಇದ್ದ ಗರ್ಭಿಣಿಯರುಸುರಕ್ಷಿತ ಹೆರಿಗೆಯೊಂದಿಗೆ ಮನೆ ಮರಳಿದ್ದಾರೆ.
ಭಯ ಬಿದ್ದವರೂ ಅನೇಕ: ಹೆರಿಗೆಗೆ ದಾಖಲಾದಮಹಿಳೆಕೊರೊನಾ ಪಾಸಿಟಿವ್ ಎಂದು ಗೊತ್ತಾದಾಗಅನೇಕರು ಆಸ್ಪತ್ರೆಯಲ್ಲೇ ಭಯಬಿದ್ದಿದ್ದಾರೆ. ಆದರೆ,ಅವರ ಹೆರಿಗೆಯನ್ನು ಮಾಡಿಸದೆ ಹೋದರೆ ತಾಯಿಹಾಗೂ ಮಗುವಿನ ಜೀವಕ್ಕೆ ಆಪತ್ತು ಎಂಬಸೂಕ್ಷ ¾ತೆಯನ್ನು ಗ್ರಹಿಸಿ ದಾದಿಯರು ನೆರವಿಗೆಧಾವಿಸಿದ್ದಾರೆ. ಇಂದಿರಾನಗರ, ಧನಗರವಾಡಿ,ಶ್ರೀಪುರಂ ಜಂಕ್ಷನ್ ಸೇರಿ ನಾನಾ ಕಡೆಯಿಂದಬಂದಿದ್ದ ಕೊರೊನಾ ಪಾಸಿಟಿವ್ ಆಗಿದ್ದಗರ್ಭಿಣಿಯರು ಸುರಕ್ಷಿತ ಹೆರಿಗೆ ಬಳಿಕ ತಮ್ಮಮಗುವಿನೊಂದಿಗೆ ಮನೆ ಸೇರಿದ್ದಾರೆ. ಇಲ್ಲಿನಸಾರ್ವಜನಿಕ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವಮೂವರು ದಾದಿಯರು (ನರ್ಸ್‌ಗಳು) ತೋರಿದಧೈರ್ಯ ವೈದ್ಯರಿಗೂ ಸ್ಫೂರ್ತಿಯಾಗಿದೆ.
ಯಮನಪ್ಪ ಪವಾರ