ಗಂಜಿಮಠ ಮುತ್ತೂರಿನ ಜಯರಾಮ್ ಅವರ ಮನೆಯ ಬಾವಿಗೆ ಎರಡು ತಿಂಗಳ ಹಿಂದೆ ಮಳೆಕೊಯ್ಲು ವ್ಯವಸ್ಥೆ ಮಾಡಲಾಗಿದೆ. ಇದೀಗ ಬಾವಿಯಲ್ಲಿ ನೀರು ಹೆಚ್ಚಳವಾಗಿದ್ದು, ಮನೆ ಮಂದಿ ತಿಳಿನೀರನ್ನು ನೋಡಿ ಖುಷಿಗೊಂಡಿದ್ದಾರೆ.
Advertisement
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರ ಮಾರ್ಗದರ್ಶನದೊಂದಿಗೆ ಈ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಮನೆಯ ಬಾವಿಯ ಬದಿಯಲ್ಲಿ ಡ್ರಮ್ ಇಟ್ಟು ಅದರ ಮೇಲೆ ಜಲ್ಲಿ, ಮರಳು ಹಾಕಿ ಛಾವಣಿ ನೀರನ್ನು ಅದಕ್ಕೆ ಬೀಳುವಂತೆ ನೋಡಿಕೊಳ್ಳಲಾಗಿದೆ. ಬಳಿಕ ಶುದ್ಧವಾದ ತಿಳಿನೀರನ್ನು ಬಾವಿಗೆ ಬೀಳುವಂತೆ ವ್ಯವಸ್ಥೆ ಮಾಡಲಾಗಿದೆ.
ಗೌರಿ ಮಠ ಬೀದಿಯಲ್ಲಿರುವ ಜೆ. ಪಾಂಡುರಂಗ ನಾಯಕ್ ಅವರ ಮನೆಯ ಬಾವಿಗೆ ಎರಡು ತಿಂಗಳ ಹಿಂದೆ ಮಳೆಕೊಯ್ಲು ವ್ಯವಸ್ಥೆ ಮಾಡಿಕೊಂಡಿದ್ದಾರೆ. ಮಳೆಕೊಯ್ಲು ವ್ಯವಸ್ಥೆ ಮಾಡಿದ ಅನಂತರ ಬಾವಿಯಲ್ಲಿ ತಿಳಿಯಾದ ನೀರಿರುವುದನ್ನು ಗಮನಿಸಿದೆ ಎಂದು ಹೇಳುತ್ತಾರೆ ಪಾಂಡುರಂಗ ನಾಯಕ್.
Related Articles
Advertisement
ನಾಳೆ ನಲ್ಮೆಮಾರ್‌ನಲ್ಲಿ ಮಳೆಕೊಯ್ಲು ಮಾಹಿತಿಬಂಟ್ವಾಳ ಲಯನ್ಸ್ ಕ್ಲಬ್ ಮತ್ತು ಮೊಡಂಕಾಪು ಕಾರ್ಮೆಲ್ ಕಾಲೇಜು ಎನೆಸ್ಸೆಸ್ ಘಟದ ವತಿಯಿಂದ ಮಳೆ ನೀರಿಂಗಿಸುವಿಕೆ ಪ್ರಾತ್ಯಕ್ಷಿಕೆ ಸೆ. 16ರಂದು ಬೆಳಗ್ಗೆ 9.45ಕ್ಕೆ ನಲ್ಮೆಮಾರ್ ಹಿ.ಪ್ರಾ. ಶಾಲೆಯಲ್ಲಿ ನಡೆಯಲಿದೆ. ನೀವೂ ಅಳವಡಿಸಿ, ವಾಟ್ಸಪ್ ಮಾಡಿ
ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಈಗ ಕಾರ್ಯೋನ್ಮುಖರಾಗಿ ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆ, ಸಂಘ- ಸಂಸ್ಥೆ, ಧಾರ್ಮಿಕ
ಕೇಂದ್ರಗಳಲ್ಲಿ ಅಳವಡಿಸುತ್ತಿದ್ದಾರೆ. “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಿತರಾಗಿ ನೀವೂ ನಿಮ್ಮ ಮನೆ, ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಂಡಿದ್ದರೆ ಫೋಟೋ ಸಮೇತ ನಮಗೆ ವಿವರವನ್ನು ವಾಟ್ಸಪ್ ಮಾಡಿ. ಅವುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ. 9900567000