Advertisement

ಬಿಎಲ್‌ಡಿಇಯಿಂದ ಪೊರ್ಟೆಬಲ್‌ ಮಷಿನ್‌ ಆವಿಷ್ಕಾರ

05:41 PM Apr 14, 2020 | mahesh |

ವಿಜಯಪುರ: ಕೋವಿಡ್-19 ಕಾಯಿಲೆ ಹಿನ್ನೆಲೆಯಲ್ಲಿ ಬಿಎಲ್‌ಡಿಇ ಬಿ.ಎಂ. ಪಾಟೀಲ್‌ ವೈದ್ಯಕೀಯ ಕಾಲೇಜು-ಆಸ್ಪತ್ರೆಯಿಂದ ವಚನ ಪಿತಾಮಹ
ಡಾ| ಫ.ಗುಹಳಕಟ್ಟಿ ಇಂಜನಿಯರಿಂಗ್‌ ಕಾಲೇಜು ಸಹಯೋಗದಲ್ಲಿ ಕೋ-ಅಲ್ಟ್ರಾ ಸಲ್ಯೂಶನ್‌-20 ವಿವಿಧೋದ್ಧೇಶದ ಪೊರ್ಟೆಬಲ್‌ ಮಷಿನ್‌ನ್ನು ಆವಿಷ್ಕರಿಸಲಾಗಿದೆ. ಸದರಿ ಯಂತ್ರ ರೋಗ ನಿಗ್ರಹದಲ್ಲಿ ಆಸ್ಪತ್ರೆ, ವೈದ್ಯರು ಮಾತ್ರವಲ್ಲ ಮನೆ-ಮನೆಗೂ ಸದರಿ ಯಂತ್ರ ಉಪಯೋಗಕ್ಕೆ ಬರಲಿದೆ.

Advertisement

ಈ ಕುರಿತು ಪ್ರಕಟಣೆ ನೀಡಿರುವ ಬಿಎಲ್‌ಡಿಇ ಸಂಸ್ಥೆ,  ಡಾ| ಸುರೇಖಾ ಕಲ್ಯಾಣಪ್ಪಗೋಳ, ಡಾ| ಗಿರೀಶ ಭದ್ರಗೊಂಡ, ಡಾ| ಜಯಲಕ್ಷ್ಮೀ ಗೋನಾಳ, ಡಾ| ಸ್ಮಿತಾ ಮಂಗಲಗಿ ಅವರಿದ್ದ ತಂಡವು ರೋಗ ತಡೆಗಟ್ಟುವಿಕೆ ಹಾಗೂ ಮುಂಜಾಗ್ರತಾ ಮಾತ್ರವಲ್ಲದೇ ಕೊರೊನಾದಂತಹ ವೈರಸ್‌ಗಳನ್ನು ಅಲ್ಟ್ರಾವೆಲೈಟ್‌ ಕಿರಣಗಳ ಮೂಲಕ ನಾಶಪಡಿಸಬಹುದು, ಇಲ್ಲವೇ ನಿಷ್ಕ್ರಿಯಗೊಳ್ಳುತ್ತವೆ ಎಂದು ತಿಳಿಸಲಾಗಿದೆ.

ಅಲ್ಟ್ರಾ ವೈಲೆಟ್‌ ಕಿರಣಗಳನ್ನು ಬಳಸಿ, ಆಸ್ಪತ್ರೆಗಳಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಿದ ವೈದ್ಯರು ಹಾಗೂ ಇತರೆ ಸಿಬ್ಬಂದಿ ತಮ್ಮ ಸ್ಟೇಥಸ್ಕೋಪ್‌, ಬಿ.ಪಿ.ಯಂತ್ರ, ಆಸ್ಪತ್ರೆ ದಾಖಲೆಗಳು, ಪೆನ್ನು, ಕೀ ಚೈನ್‌, ಪರ್ಸ್‌, ಚಪ್ಪಲಿಗಳು, ಮೊಬೈಲ್‌, ಲ್ಯಾಪ್‌ಟಾಪ್‌ಗ್ಳು ಸೇರಿದಂತೆ ಮರುಬಳಕೆ ವಸ್ತ್ರಗಳು ಮತ್ತು ಕವಚಗಳನ್ನು ಈ ಯಂತ್ರದ ಸಹಾಯದಿಂದ ಸಂಪೂರ್ಣ ಶುಚಿ ಮಾಡಲು ಸಾಧ್ಯವಿದೆ ಎಂದು ವಿವರಿಸಿದ್ದಾರೆ. ಅಲ್ಲದೇ ಮನೆಗಳಲ್ಲಿಯೂ ಸಹ ಹೊರಗಡೆಯಿಂದ ತರಿಸುವ ಹಾಲು, ತರಕಾರಿ, ದಿನಸಿ ಹಾಗೂ ಇತರೆ ಸಾಮಗ್ರಿಗಳನ್ನು ಸಹ ಈ ಯಂತ್ರದ ಮೂಲಕ ಶುಚಿತ್ವಗೊಳಿಸಬಹುದಾಗಿದೆ. ಯಾರಾದರು ವ್ಯಕ್ತಿಗಳು ಈ ಯಂತ್ರದ ಮುಂದೆ ನಿಂತರೆ ಅದು ಸ್ವಯಂ ಚಾಲಿತವಾಗಿ ತೆರೆದು, ಸ್ವಯಂ ಚಾಲಿತವಾಗಿ ಮುಚ್ಚುವುದು ವಿಶೇಷವಾಗಿದೆ. ಇದರಲ್ಲಿ ಇಡುವ ವಸ್ತುಗಳು 3-5ನಿಮಿಷಗಳಲ್ಲಿ ಸಂಪೂರ್ಣ ಶುಚಿತ್ವಗೊಳ್ಳುವವು.

ಬಿಎಲ್‌ಡಿಇ ವೈದ್ಯರ ತಂಡದ ಈ ಸಾಧನೆಗೆ ಮಾಜಿ ಸಚಿವ, ಸಂಸ್ಥೆಯ ಅಧ್ಯಕ್ಷ ಎಂ.ಬಿ.ಪಾಟೀಲ್‌ ಶ್ಲಾಘನೆ ವ್ಯಕ್ತಪಡಿಸಿದ್ದು, ಕೊವಿಡ್‌-19 ಕೊರೊನಾ ಕಾಯಿಲೆ ಕಷ್ಟಕರ ಸಂದರ್ಭದಲ್ಲಿ ಇಂತಹ ಆವಿಷ್ಕಾರಗಳು ಹಲವರಿಗೆ ವಿಶೇಷವಾಗಿ ವೈದ್ಯರಿಗೆ ನೆರವಾಗುವುದಾಗಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next