Advertisement

ವೆಬ್‌ಸೈಟ್‌ನಲ್ಲಿ ನಟಿಯರ ಅಶ್ಲೀಲ ಫೋಟೋ ಅಪ್‌ಲೋಡ್‌: ಕಾಮುಕ ಸೆರೆ

09:46 AM Oct 09, 2017 | |

ಬೆಂಗಳೂರು: ಟಾಲಿವುಡ್‌ ನಟಿಯರ ಫೋಟೋ ಹಾಗೂ ವಿಡಿಯೋವನ್ನು ಅಶ್ಲೀಲವಾಗಿ ವೆಬ್‌ಸೈಟ್‌ಗಳಿಗೆ ಅಪ್‌ಲೋಡ್‌ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಹೈದ್ರಾಬಾದ್‌ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

Advertisement

ಬಂಧಿತ ಕಾಮುಕ ವ್ಯಕ್ತಿ ದಾಸರಿ ಪ್ರದೀಪ ಎಂದು ತಿಳಿದು ಬಂದಿದ್ದು, 30 ವೆಬ್‌ ಸೈಟ್‌ಗಳಿಗೆ ಫೋಟೋ, ವಿಡಿಯೋ ಮಾತ್ರವಲ್ಲದೇ ನಟಿಯರ ಬಗ್ಗೆ ಅಸಭ್ಯವಾದ ಬರವಣೆಯನ್ನು ಅಪ್‌ಲೋಡ್‌ ಮಾಡುತ್ತಿದ್ದನು ಎಂದು ತಿಳಿದು ಬಂದಿದೆ.

ನಟಿಯರ ದೂರಿನ ಮೇರೆಗೆ ಎಚ್ಚೆತ್ತ ಹೈದ್ರಾಬಾದ್ ಸೈಬರ್ ಕ್ರೈಂ ಪೊಲೀಸರು ನಿನ್ನೆ ಮಧ್ಯಾಹ್ನ ಬೆಂಗಳೂರಿಗೆ ಆಗಮಿಸಿ ಆರೋಪಿ ಪ್ರದೀಪನನ್ನು ವಶಕ್ಕೆ ಪಡೆದಿದ್ದು ಇಂದು ಹೈದ್ರಾಬಾದ್‌  ಕೋರ್ಟ್‌ ಹಾಜರುಪಡಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next