ರಾಮನಗರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬಕಲ್ಯಾಣ ಇಲಾಖೆ, ಜಿಲ್ಲಾ ಆರ್.ಸಿ.ಎಚ್‌ಅಧಿಕಾರಿಗಳ ಕಚೇರಿ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ರಾಮನಗರವಿವಿಧ ಅಭಿವೃದ್ಧಿ ಇಲಾಖೆಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಆಶ್ರಯದಲ್ಲಿನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾ ಮಟ್ಟದ ವಿಶ್ವಜನಸಂಖ್ಯಾ ದಿನಾಚರಣೆ ಜಾಗೃತಿ ಜಾಥಾಕಾರ್ಯಕ್ರಮ ನಡೆಯಿತು.
ಜಾಥಾ ಉದ್ಘಾಟಿಸಿದ ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಪದ್ಮ ಮಾತನಾಡಿ,ವಿಶ್ವದಲ್ಲಿ ಈಗಾಗಲೇ ತೀವ್ರಗತಿಯಲ್ಲಿ ಜನಸಂಖ್ಯೆ ಏರಿಕೆಯಿಂದಾಗಿ ಬಡತನ,ನಿರುದ್ಯೋಗ,ವಸತಿ,ಆಹಾರ,ಆರೋಗ್ಯ,ಶಿಕ್ಷಣ, ನೈಸರ್ಗಿಕ ವಿಕೋಪಗಳಂತಹಹಲವಾರು ಗಂಭೀರ ಸಮಸ್ಯೆಗಳನ್ನುಎದುರಿಸುತ್ತಿದ್ದೇವೆ.
ಜನಸಂಖ್ಯೆ ಏರಿಕೆ ತಡೆಯದಿ¨ರೆ ª ಇನ್ನುಹೆಚ್ಚಿನ ಗಂಭೀರ ಪರಿಸ್ಥಿತಿಗಳ ಸಾಧ್ಯತೆ ಇದೆ. ಎಲ್ಲರು ತಮ್ಮ ಜಾತಿ,ಮತ, ಧರ್ಮ, ಸಂಪ್ರದಾಯಗಳನ್ನು ಪಕ್ಕಕ್ಕಿಟ್ಟು, ವೈಜ್ಞಾನಿಕ ಮತ್ತು ವಾಸ್ತವಿಕಸಂಗತಿಗಳನ್ನು ಅರಿತುಕೊಂಡುಕುಟುಂಬಕಲ್ಯಾಣ ಯೋಜನೆಯ ತಾತ್ಕಾಲಿಕ ಮತ್ತುಶಾಶ್ವತ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಆರೋಗ್ಯ ಇಲಾಖೆಯ ತರಬೇತಿಶಾಲೆಯ ಪ್ರಾಂಶುಪಾಲರಾದ ಡಾ.ಮಂಜುಳಾ ಕರಪತ್ರ ಬಿಡುಗಡೆ ಮಾಡಿಮಾತನಾಡಿ, ವಿಶ್ವ ಜನಸಂಖ್ಯಾದಿನಾಚರಣೆ ಮುಖ್ಯ ಉದ್ದೇಶವೆಂದರೆಜನಸಂಖ್ಯಾ ಸ್ಫೋಟದಿಂದ ಉಂಟಾಗುವದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆನಿರಂತರವಾಗಿ ಅರಿವು ಮೂಡಿಸುವುದುಎಂದರು. ಡಿ.ಎಲ….ಒ ಡಾ.ಮಂಜುನಾಥ್, ಡಿ.ಟಿ.ಒ ಡಾ.ಕುಮಾರ್,ಟಿ.ಎಚ್.ಒ ಡಾ. ಶಶಿಕಲಾ, ಜಿಲ್ಲಾಆರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್.ಗಂಗಾಧರ್, ಮೇಲ್ವಿಚಾರಕರಾದ ಶಂಭುಲಿಂಗಯ್ಯ, ದಾಸ±, ಆ³ ರೋಗ್ಯ ಸಿಬ್ಬಂದಿ,ಆಶಾ ಕಾರ್ಯಕರ್ತೆಯರು ಹಾಜರಿದ್ದರು.