ಕಾಗವಾಡ: ಡಿ. 5ರಂದು ನಡೆಯಲಿರುವ ಕಾಗವಾಡ ವಿಧಾನಸಭಾ ಮತಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ಅಭ್ಯರ್ಥಿಯಾಗಿ ಸ್ಪರ್ಧಿಸಿ 50 ಸಾವಿರ ಅ ಧಿಕ ಮತಗಳ ಅಂತರದಿಂದ ಗೆಲುವು ಸಾಧಿ ಸುವುದಾಗಿ ಕಾಂಗ್ರೆಸ್ ಅಭ್ಯರ್ಥಿರಾಜು ಕಾಗೆ ಹೇಳಿದರು.
ರವಿವಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿ, ಕಳೆದ 20 ವರ್ಷಗಳಿಂದ ನಾನು ನಾಲ್ಕು ಬಾರಿ ಶಾಸಕನಾಗಿ ಈ ಕ್ಷೇತ್ರದಲ್ಲಿ ಹಲವಾರು ಜನಪರ ಕಾರ್ಯಗಳನ್ನು ಮಾಡಿದ್ದೇನೆ. ಆ ಕಾಮಗಾರಿಗಳು ನನಗೆ ಶ್ರೀರಕ್ಷೆಯಾಗಲಿವೆ ಎಂದರು.
ಯಡಿಯೂರಪ್ಪನವರು ಮುಖ್ಯಮಮತ್ರಿಯಾಗುವ ಏಕೈಕ ಉದ್ದೇಶಕ್ಕಾಗಿ ರಾಜ್ಯದ ಹಿತವನ್ನು ಬಲಿಕೊಟ್ಟಿದ್ದಾರೆ. ತಮ್ಮ ಸ್ವಾರ್ಥಕ್ಕಾಗಿ 17 ಜನ ಶಾಸಕರು ತಮ್ಮ ಲಾಭಕ್ಕಾಗಿ ರಾಜ್ಯದ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿ ಬಿಎಸ್‌ವೈ ಅವರನ್ನು ಮುಖ್ಯಮಂತ್ರಿನ್ನಾಗಿ ಮಾಡಿದ್ದಾರೆ. ಅನರ್ಹರು ಸುಪ್ರಿಂಕೋರ್ಟ್‌ನಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಗೆಲುವು ಸಾಧಿ ಸಿರಬಹುದು.ಆದರೆ ಜನತಾ ನ್ಯಾಯಾಲಯದಲ್ಲಿ ಅನರ್ಹರು ಅನರ್ಹರೇ ಎಂದು ಕುಟುಕಿದರು.
ಮತದಾರರಿಗೆ ಮೋಸ ಮಾಡಿದ ರಾಜಕಾರಣಿ ಯಾವತ್ತು ಗೆಲುಸು ಸಾಧಿ ಸಲಾರದು ಎನ್ನುವುದಕ್ಕೆ ಇಂದು ಸೇರಿದ ಜನ ಸಮುಹವೇ ಸಾಕ್ಷಿ. ನಾನು ಕಳೆದ 20 ವರ್ಷಗಳಲ್ಲಿ ಎಂದು ಜಾತಿ ರಾಜಕಾರಣ, ದ್ವೇಷದ ರಾಜಕಾರಣ ಮಾಡಿಲ್ಲ ಎಂದರು.
ಮಾಜಿ ಶಾಸಕ ಮೋಹನರಾವ್ ಶಹಾ ಮಾತನಾಡಿ, ರಾಜ್ಯದಲ್ಲಿ ಪ್ರವಾಹ ಬಂದು 4 ತಿಂಗಳುಗಳು ಗತಿಸಿದರೂ ಕೂಡ ಇನ್ನುವರೆಗೆ ಕೇಂದ್ರ ಸರ್ಕಾರ ಸಂತ್ರಸ್ತರಿಗೆ ಬಿಡಿಗಾಸು ನೀಡಿಲ್ಲ. ಇದೇನಾ ಕೇಂದ್ರದ ಬಿಜೆಪಿ ಸರ್ಕಾರದ ಸಾಧನೆ ಎಂದು ಪ್ರಶ್ನಿಸಿದರು.
ಬ್ಲಾಕ್‌ಅಧ್ಯಕ್ಷ ವಿಜಯಕುಮಾರ ಅಕಿವಾಟೆ, ಕಾಂಗ್ರೆಸ್ ಮುಖಂಡರಾದ ಪಟ್ಟಣ ಪಂಚಾಯತ್ ಉಪಾಧ್ಯಕ್ಷರವೀಂದ್ರಗಾಣಿಗೇರ, ಕೆಪಿಸಿಸಿ ಸದಸ್ಯಚಂದ್ರಕಾಂತ ಇಮ್ಮಡಿ, ಮುಖಂಡ ಸುರೇಶಥೋರುಸೆ, ದಲಿತ ಮುಖಂಡರಾದ ಸಂಜಯ ತಳವಲಕರ, ದೋಂಡಿರಾಮ್ ಸುತಾರ, ಮುಖಂಡ ಮಾತನಾಡಿದರು.
ಈ ವೇಳೆ ಮುಖಂಡರಾದ ಶಿದಗೌಡ ಪಾಟೀಲ, ಅಣ್ಣಾಸಾಬ ಸಾಂಗಲಿ, ಬಸಗೌಡ ಪಾಟೀಲ, ಶಶಿಕಾಂತ ಕಾಂಬಳೆ, ಸುಭಾಷಖುರಾಡೆ, ಶಭಿನಾಬಾನು ಹುಕ್ಕೇರಿ, ಸುನಂದಾ ನಾಯಿಕ, ಗಜಾನನಯರಂಡೋಲಿ, ಜ್ಯೋತಗೌಡ ಪಾಟೀಲ ಇತರರರು ಇದ್ದರು.