ಜಪಾನ್ : ಜಗತ್ತಿನಲ್ಲಿ ತಂತ್ರಜ್ಞಾನ ಎಷ್ಟು ಮುಂದುವರೆಯುತ್ತಿದೆಯೋ ಅಷ್ಟೇ ಜನರು ಮೋಸ ಹೋಗುತ್ತಿದ್ದಾರೆ. ಅದರಲ್ಲೂ ಸದ್ಯ ತರಹೇವಾರಿ ಮೊಬೈಲ್ ಅಪ್ಲಿಕೇಷನ್ ಗಳು ಬಂದಿದ್ದು ಏನನ್ನು ಬೇಕಾದರೂ ಮಾಡುವ ಕಾಲ ಬಂದು ನಮ್ಮ ಕಾಲ ಬದಿಯಲ್ಲಿ ನಿಂತಿದೆ. ಸಾಮಾಜಿಕ ಜಾಲತಾಣದಲ್ಲಿ ಇದರಿಂದ ಮೋಸಗಳು ನಡೆಯುತ್ತಿದ್ದು, ಆಗಾಗ ಸುದ್ದಿಯಾಗುತ್ತಿವೆ. ಇದೀಗ ಅಂತಹದ್ದೇ ಒಂದು ಘಟನೆ ಜಪಾನಿನಲ್ಲಿ ನಡೆದಿದೆ.
ಹುಡುಗಿಯ ಮುಖವಾಡವನ್ನು ಹಾಕಿಕೊಂಡು ಜನರನ್ನು ಮರುಳು ಮಾಡಿದ್ದ 50 ವರ್ಷದ ಬೈಕರ್ ಅಸಲಿ ಮುಖ ಹೊರಬಿದ್ದಿದೆ. ಅಜುಸಾಗಾಕುಯುಕಿ ಹೆಸರಿನ ಟ್ವಿಟ್ಟರ್ ನಲ್ಲಿ ಪ್ರತೀ ದಿನವು ಹುಡುಗಿ ಮುಖವಾಡ ಹಾಕಿರುವ ವ್ಯಕ್ತಿ ಬೈಕ್ ಜೊತೆಗಿನ ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದ. ಹೀಗೆ ಮಾಡಿ ಮಾಡಿ ಬರೋಬ್ಬರಿ 10,000 ಫಾಲೋವರ್ಸ್ ಅನ್ನು ಹೊಂದಿದ್ದಾನೆ.
ತಾನು ಹುಡುಗಿಯ ಮುಖವನ್ನು ತನ್ನ ಮುಖಕ್ಕೆ ಹಾಕಲು ಫೋಟೋಶಾಪ್ ಮತ್ತು ಫೇಸ್ ಫೇಸ್ ಅಪ್ಲಿಕೇಶನ್ ಅನ್ನು ಬಳಕೆ ಮಾಡುತ್ತಿದ್ದನಂತೆ. ಆದ್ರೆ ಇತ್ತೀಚೆಗೆ ತಿಳಿಯದೇ ಪೋಸ್ಟ್ ಮಾಡಿದ್ದ ಒಂದು ಫೋಟೋದಿಂದ ಅವನ ಅಸಲಿಯತ್ತು ಗೊತ್ತಾಗಿದೆ.
ಬೈಕ್ ನಲ್ಲಿ ಹೋಗುತ್ತಿರುವ ಫೋಟೋವನ್ನು ಆ ವ್ಯಕ್ತಿಯು ಶೇರ್ ಮಾಡಿದ್ದು, ಬೈಕ್ ಕನ್ನಡಿಯಲ್ಲಿ ನಿಜವಾದ ಮುಖ ಗೊತ್ತಾಗಿದೆ. ಈ ಫೋಟೋ ಹೊರ ಬೀಳುತ್ತಿದ್ದಂತೆ ನೆಟ್ಟಿಗರು ಆ ಜಪಾನ್ ವ್ಯಕ್ತಿಯನ್ನು ತರಾಟೆ ತೆಗೆದುಕೊಂಡಿದ್ದಾರೆ.
ಇದಾದ ಮೇಲೆ 50 ವರ್ಷ ಆ ವ್ಯಕ್ತಿ ಮಾತನಾಡಿದ್ದು, ವಯಸ್ಸಾದ ನನ್ನ ಮುಖವನ್ನು ಸೋಷಿಯಲ್ ಮೀಡಿಯಾದಲ್ಲಿ ನೋಡಲು ಯಾರೂ ಇಷ್ಟ ಪಡುವುದಿಲ್ಲ. ಆದ್ರಿಂದ ಹುಡುಗಿಯ ಫೋಟೋ ಹಾಕಿದೆ ಎಂದಿದ್ದಾರೆ.