Advertisement

ಮರಾಠಿಯ ಜನಪ್ರಿಯ ಲಾವಣಿ ರಾಣಿ ಸುಲೋಚನಾ ಇನ್ನಿಲ್ಲ

08:21 PM Dec 10, 2022 | Team Udayavani |

ಮುಂಬೈ: ಮರಾಠಿಯ ಜನಪ್ರಿಯ ಲಾವಣಿ ಹಾಡುಗಾರ್ತಿ, ನಟಿ ಸುಲೋಚನಾ ಚವಾಣ್‌ (92) ಶನಿವಾರ ನಿಧನರಾಗಿದ್ದಾರೆ. ಅವರು ಕೆಲ ದಿನಗಳಿಂದ ಈಚೆಗೆ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಪುತ್ರ ವಿಜಯ ಚೌಹಾಣ್‌ ತಿಳಿಸಿದ್ದಾರೆ.

Advertisement

ಮಹಾರಾಷ್ಟ್ರದ ಸಾಂಪ್ರದಾಯಿಕ ಲಾವಣಿ ಪದಗಳನ್ನು ಹಾಡುವ ಕೆಲವೇ ಕೆಲವರಲ್ಲಿ ಅವರು ಒಬ್ಬರಾಗಿದ್ದರು. ಅವರಿಗೆ ಲಾವಣಿ ರಾಣಿ ಎಂಬ ಬಿರುದೂ ಇತ್ತು. ಅವರ ಸಾಧನೆಗಾಗಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಜ್ಯಪಾಲ ಭಗತ್‌ ಸಿಂಗ್‌ ಕೋಶಿಯಾರಿ, ಮುಖ್ಯಮಂತ್ರಿ ಏಕನಾಥ ಶಿಂಧೆ ಸೇರಿದಂತೆ ಪ್ರಮುಖರು ಶೋಕ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next