ಹೊಸದಿಲ್ಲಿ: ಖ್ಯಾತ ಜಾದೂಗಾರ ಓಂ ಪ್ರಕಾಶ್ ಶರ್ಮಾ ಅಲಿಯಾಸ್ ಓಪಿ ಶರ್ಮಾ ಶನಿವಾರ ನಿಧನರಾದರು. ಕಿಡ್ನಿ ವೈಫಲ್ಯದಿಂದ ಅವರು ಕೊನೆಯುಸಿರೆಳದರು ಎಂದು ವರದಿಯಾಗಿದೆ.
ಉತ್ತರ ಪ್ರದೇಶದ ಕಾನ್ಪುರ ನಿವಾಸಿಯಾದ ಓಪಿ ಶರ್ಮಾ ಅವರು ಪತ್ನಿ, ಪುತ್ರಿ ಮತ್ತು ಮೂವರು ಪುತ್ರರನ್ನು ಅಗಲಿದ್ದಾರೆ.
ಕಣ್ಕಟ್ಟು ವಿದ್ಯೆಯಲ್ಲಿ ಅಂತಾರರಾಷ್ಟ್ರೀಯ ಮನ್ನಣೆಯನ್ನು ಪಡೆದಿದ್ದ ಓಪಿ ಶರ್ಮಾ ಕಾನ್ಪುರದ ಬರ್ರಾದಲ್ಲಿರುವ ಭೂತ ಬಂಗಲೆಯಲ್ಲಿ ನೆಲೆಸಿದ್ದರು. ಅವರು ಕಾರ್ಯಕ್ರಮಗಳ ಟಿಕೆಟ್ ಗಳು ಕ್ಷಣಮಾತ್ರದಲ್ಲಿ ಬಿಕರಿಯಾಗುತ್ತಿತ್ತು. ಒಂದು ವರದಿಯ ಪ್ರಕಾರ ಓಪಿ ಶರ್ಮಾ 34 ಸಾವಿರಕ್ಕೂ ಹೆಚ್ಚು ಶೋ ಗಳನ್ನು ನಡೆಸಿದ್ದರು.
ಇದನ್ನೂ ಓದಿ:ಬಸನಗೌಡ ಯತ್ನಾಳ್ ಮತ್ತು ಅರವಿಂದ ಬೆಲ್ಲದ ಪಕ್ಷದ ನಾಯಕರಲ್ಲ: ಉಸ್ತುವಾರಿ ಅರುಣ್ ಸಿಂಗ್
ಓಪಿ ಶರ್ಮಾ ಅವರ ಜನಪ್ರಿಯತೆಯನ್ನು ಗಮನದಲ್ಲಿಟ್ಟುಕೊಂಡು ಸಮಾಜವಾದಿ ಪಕ್ಷವು 2002 ರಲ್ಲಿ ಗೋವಿಂದ್ ನಗರದಿಂದ ವಿಧಾನಸಭಾ ಚುನಾವಣೆಗೆ ಟಿಕೆಟ್ ನೀಡಿತು. ಆದರೆ, 2019ರಲ್ಲಿ ಅವರು ಬಿಜೆಪಿ ಸೇರಿದ್ದರು.