Advertisement

ಪೋಪ್‌- ಶಿಯಾ ಧರ್ಮಗುರು ಭೇಟಿ : ಐತಿಹಾಸಿಕ ಇರಾಕ್‌ ಭೇಟಿಯಲ್ಲಿ ಮತ್ತೂಂದು ಚರಿತ್ರಾರ್ಹ ನಡೆ

11:05 PM Mar 06, 2021 | Team Udayavani |

ಪ್ಲೇನ್ಸ್‌ ಆಫ್ ಉರ್‌ (ಇರಾಕ್‌): ಇರಾಕ್‌ಗೆ ಮೂರು ದಿನಗಳ ಐತಿಹಾಸಿಕ ಭೇಟಿ ನೀಡಿರುವ ಕ್ರೈಸ್ತ ಪರಮೋತ್ಛ ಧರ್ಮಗುರು ಪೋಪ್‌ ಫ್ರಾನ್ಸಿಸ್‌, ಶನಿವಾರದಂದು ಇರಾಕ್‌ನ ಶಿಯಾ ಮುಸ್ಲಿಮರ ಪಂಗಡದ ಗುರುವಾದ ಅಯಾತೊಲ್ಲಾ ಅಲಿ ಅಲ್‌-ಸಿಸ್ತಾನಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

Advertisement

ದಕ್ಷಿಣ ಇರಾಕ್‌ನಲ್ಲಿರುವ ಪುಣ್ಯಕ್ಷೇತ್ರ ನಜಾಫ್ನಲ್ಲಿ ಇಬ್ಬರೂ ಭೇಟಿಯಾಗಿ ಕೆಲವು ಗಂಟೆಗಳ ಕಾಲ ಮಾತುಕತೆ ನಡೆಸಿದರು. ಇದೇ ವೇಳೆ, ಇರಾಕ್‌ನಲ್ಲಿರುವ ಮುಸ್ಲಿಮರಿಗೆ ಇರುವ ಸ್ವಾತಂತ್ರ್ಯ ಹಾಗೂ ಹಕ್ಕುಗಳು ಅಲ್ಲಿನ ಕ್ರೈಸ್ತರಿಗೂ ಸಮಾನವಾಗಿ ಸಿಗುವಂತೆ ಮಾಡಬೇಕೆಂದು ಪೋಪ್‌ ಅವರು ಅಯಾತೊಲ್ಲಾ ಅವರಿಗೆ ಮನವಿ ಸಲ್ಲಿಸಿದ್ದಾರೆ. ಇದೇ ವೇಳೆ, ಇರಾಕ್‌ನಲ್ಲಿ ಅಲ್ಪಸಂಖ್ಯಾತರಾಗಿರುವ ಕ್ರೈಸ್ತರ ಪರವಾಗಿ ದನಿಯೆತ್ತಿದ್ದಕ್ಕೆ ಅಯಾತೊಲ್ಲಾ ಅವರನ್ನು ಅಭಿನಂದಿಸಿದರು.

ಇದನ್ನೂ ಓದಿ: ಡಿ.ಜೆ. – ಕೆ.ಜೆ. ಹಳ್ಳಿ ಪ್ರಕರಣ: 29 ಮಂದಿ ಆರೋಪಿಗಳ ಬಿಡುಗಡೆ

ಕ್ರೈಸ್ತ ಪರಮೋತ್ಛ ಗುರುವೊಬ್ಬರು, ಮುಸ್ಲಿಂ ಪಂಗಡದ ಧರ್ಮಗುರುವೊಬ್ಬರನ್ನು ಇರಾಕ್‌ನಲ್ಲಿ ಭೇಟಿ ಮಾಡಿದ್ದು ಇದೇ ಮೊದಲಾಗಿದ್ದು, ಭಯೋತ್ಪಾದನೆಯಿಂದ ತತ್ತರಿಸಿರುವ ಇರಾಕ್‌ ದೇಶವನ್ನು ಕ್ರೈಸ್ತ ಸಮುದಾಯದ ಬೆಂಬಲದಿಂದ ಪುನರ್‌ ನಿರ್ಮಿಸುವ ದೃಷ್ಟಿಕೋನದಡಿ ಇವರಿಬ್ಬರ ಭೇಟಿ ಅತ್ಯಂತ ಮಹತ್ವವಾದದ್ದು ಎಂದು ಈ ಭೇಟಿಯನ್ನು ಬಣ್ಣಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next