Advertisement

ಮುಂದಿನ ವರ್ಷ ಪಿಒಪಿ ಮೂರ್ತಿ ಸಂಪೂರ್ಣ ನಿಷೇಧ

12:39 PM Aug 29, 2017 | |

ಧಾರವಾಡ: ಪರಿಸರ ಹಾಗೂ ಜಲಮೂಲಗಳಿಗೆ ಹಾನಿ ಉಂಟು ಮಾಡುವ ಪಿಒಪಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಗಜಾನನ ಮಂಡಳಿಗಳು ಮುಂದಾಗದೇ ಪರಿಸರ ಸ್ನೇಹಿ ಆಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹೇಳಿದರು. 

Advertisement

ನಗರದ ಕವಿಸಂನಲ್ಲಿ ಸೋಮವಾರ ಸಂಜೆ ಸಾರ್ವಜನಿಕ ಗಣೇಶೋತ್ಸವ ಮಹಾಮಂಡಳದ ವತಿಯಿಂದ ಹಮ್ಮಿಕೊಂಡಿದ್ದ ಗಣೇಶ ಮಂಡಳಿಗಳಿಗೆ ಬಹುಮಾನ, ಶಾರದಾ-ಶಾಲ್ಮಲಾ ಪ್ರಶಸ್ತಿ ಪ್ರದಾನ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಈ ಸಲವೇ ಪಿಒಪಿ ಮೂರ್ತಿ ನಿಷೇಧ ಮಾಡಿದ್ದರೂ ಸಹ ಗಜಾನನ ಮಂಡಳಿಗಳ ಮನವಿ ಮೇರೆಗೆ ಸಡಲಿಕೆ ಮಾಡಿದ್ದು, ಆದರೆ ಇದು ಮುಂದಿನ ವರ್ಷಕ್ಕೆ ಮುಂದುವರೆಯದು. ಗಜಾನನ ಮಂಡಳಿಗಳು ತಾವೇ ಪರಿಸರ ಉಳಿಸುವ ನಿಟ್ಟಿನಲ್ಲಿ ಪರಿಸರ ಸ್ನೇಹಿ ಗಣಪ ಪ್ರತಿಷ್ಠಾಪನೆ ಮಾಡಬೇಕು.

ಈ ವರ್ಷದಿಂದಲೇ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿ ಪ್ರತಿಷ್ಠಾಪಿಸುವಂತೆ ಜಿಲ್ಲಾಡಳಿತ ನಿರ್ಧರಿಸಿತ್ತು. ಆದರೆ, ಗಣೇಶ ಮೂರ್ತಿ ಮಾರಾಟಗಾರರು ಜಿಲ್ಲಾಡಳಿತದ ನಿರ್ಧಾರಕ್ಕೂ  ಮುನ್ನವೇ ಪಿಒಪಿ ಗಣೇಶನನ್ನು ಖರೀದಿಸಿದ್ದರಿಂದ ಅವರಿಗೆ ಆರ್ಥಿಕ ಹಾನಿಯಾಗಬಾರದು ಎಂದು ಕೆಲವೆಡೆ ಪಿಒಪಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಅನುಮತಿ ನೀಡಲಾಗಿದೆ ಎಂದರು. 

ಪ್ರತಿ ವರ್ಷವೂ ಪರಿಸರ ಸ್ನೇಹಿ ಹಾಗೂ ಯಾವುದೇ ಅಬ್ಬರ ವಿಲ್ಲದ ಬೇಗನೆ ಗಣೇಶನನ್ನು ವಿಸರ್ಜನೆ ಮಾಡುವ ಉತ್ಸವ ಮಂಡಳಿಗೆ ಬಹುಮಾನ ವಿತರಿಸುವ ಕೆಲಸವನ್ನು ಸಾರ್ವಜನಿಕ ಗಣೇಶೋತ್ಸವ ಮಹಾಮಂಡಳಿ ಮಾಡಬೇಕು. ಯಾವುದೇ ಕೋಮು-ಗಲಭೆಗೆ ಅವಕಾಶ ನೀಡದೇ. ಹಿಂದೂ-ಮುಸ್ಲಿಂ-ಕ್ರೈಸ್ತ ಸೇರಿದಂತೆ ಎಲ್ಲ ಸಮುದಾಯದವರು ಒಟ್ಟಾಗಿ ಶಾಂತಿ ಹಾಗೂ ಸೌಹಾರ್ದದಿಂದ ಗೌರಿ-ಗಣೇಶ ಹಬ್ಬವನ್ನು ಆಚರಿಸಬೇಕು ಎಂದು ಹೇಳಿದರು.

Advertisement

ಪ್ರಶಸ್ತಿ ಪ್ರದಾನ: ಶಾರದಾ-ಶಾಲ್ಮಲಾ ಪ್ರಶಸ್ತಿಯನ್ನು  ಪಿ.ವಿ. ಹಿರೇಮಠ (ಪರಿಸರ), ಡಾ| ಪಿ.ಎಸ್‌. ಶಿವಕುಮಾರಗೌಡ (ತಾಂತ್ರಿಕ ಸಂಶೋಧನೆ), ರಜನಿದಾಸ್‌, ವೀಣಾ ಬಸನಗೌಡ, ಡಾ| ಎಂ.ಎನ್‌. ಹಂಚಿನಮನಿ (ಶಿಕ್ಷಣ), ಡಾ| ಷಡಕ್ಷರಯ್ಯ (ಇತಿಹಾಸ), ಡಾ| ಕಿರಣ ಸಾಣಿಕೊಪ್ಪ (ವೈದ್ಯಕೀಯ,) ಮನೋಹರ ಲಕ್ಕುಂಡಿ, ರವಿ ಹಂದಿಗೋಳ (ಸಮಾಜ ಸೇವೆ), ಪ್ರಭು ಹಂಚಿನಾಳ (ರಂಗಭೂಮಿ), 

ಎಸ್‌.ಜಿಸಣ್ಣಕ್ಕಿ (ಹೋರಾಟ), ಗೀತಾ ಕಟ್ಟಿಮನಿ (ಶಿಕ್ಷಣ), ರಜನಿ ಗುರ್ಲಹೊಸೂರ (ಸಂಗೀತ) ಅವರಿಗೆ ಪ್ರದಾನ ಮಾಡಲಾಯಿತು. ಇದೇ ವೇಳೆ ಉತ್ತಮ ಅಲಂಕಾರ ಮಾಡಿದ 10 ಗಣೇಶ ಮಂಡಳಿಗಳಿಗೆ, ಉತ್ತಮ ಮೂರ್ತಿಗಳಿಗೆ-10 ಹಾಗೂ 50 ಗಣೇಶ ಮಂಡಳಿಗಳಿಗೆ ವಿಶೇಷ ಪುರಸ್ಕಾರ ಬಹುಮಾನ ವಿತರಿಸಲಾಯಿತು.

ಪಾಲಿಕೆ ವಿರೋಧ ಪಕ್ಷದ ನಾಯಕ ಸುಭಾಸ ಶಿಂಧೆ, ಪಾಲಿಕೆ ಸದಸ್ಯರಾದ ದೀಪಕ ಚಿಂಚೋರೆ, ಯಾಸೀನ್‌ ಹಾವೇರಿಪೇಟ್‌, ಅಂಜುಮನ್‌ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್‌ ತಮಟಗಾರ, ಮಹೇಶ ಶೆಟ್ಟಿ, ದಾನಪ್ಪ ಕಬ್ಬೇರ, ರಾಬರ್ಟ್‌ ದದ್ದಾಪುರಿ, ಮುತ್ತುರಾಜ ಮಾಕಡವಾಲೆ, ಶಿವಶಂಕರ ಹಂಪಣ್ಣವರ, ಜಿಲ್ಲಾ ಧಿಕಾರಿ ಡಾ| ಎಸ್‌.ಬಿ. ಬೊಮ್ಮನಹಳ್ಳಿ, 

ಸಾರ್ವಜನಿಕ ಗಣೇಶೋತ್ಸವ ಮಹಾಮಂಡಳದ ಅಧ್ಯಕ್ಷ ಪ್ರಕಾಶ ಘಾಟಗೆ, ಕಾರ್ಯಾಧ್ಯಕ್ಷ ವಸಂತ ಅರ್ಕಾಚಾರ ಹಾಗೂ ಪ್ರಧಾನ ಕಾರ್ಯದರ್ಶಿ ಆನಂದ ಜಾಧವ ಇದ್ದರು. ಕೊನೆಗೆ ಹಾಸ್ಯ ಕಲಾವಿದರಾದ ಮಹಾದೇವ ಸತ್ತೀಗೇರಿ, ರûಾ ಜೋಶಿ, ರಮೇಶ ಗೋಕಾಕ, ಬಾಗೇಶ ಮುರಡಿ ಅವರಿಂದ ಹಾಸ್ಯ ಹಾಗೂ ಸಂಜು ಅವರಿಂದ ಜಾಧೂಗಾರ ಕಾರ್ಯಕ್ರಮ ನಡೆಯಿತು. 

Advertisement

Udayavani is now on Telegram. Click here to join our channel and stay updated with the latest news.

Next