ಶಹಾಬಾದ: ನಗರದ ಬಸವೇಶ್ವರ ವೃತ್ತದಿಂದ ಜೇವರ್ಗಿ ವೃತ್ತದವ ವರೆಗಿನ ಸುಮಾರು ಒಂದು ಕಿ.ಮೀ ರಾಜ್ಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು, ಈ ಭಾಗದಲ್ಲಿ ಸಂಚರಿಸುವ ಪ್ರಯಾಣಿಕರು ಹೈರಾಣಾಗುವಂತೆ ಆಗಿದೆ. ರಸ್ತೆಗಳ ಅಭಿವೃದ್ಧಿಗಾಗಿ ಸರ್ಕಾರದಿಂದ ನಗರೋತ್ಥಾನದ ಮೂರನೇ ಹಂತದಲ್ಲಿ ಸಾಕಷ್ಟು ಅನುದಾನ ಬಿಡುಗಡೆಯಾದರೂ ಕಾಮಗಾರಿ ಕಳಪೆ ಆಗಿರುವುದಕ್ಕೆ ನಗರದ ಬಸವೇಶ್ವರ ವೃತ್ತದಿಂದ ಜೇವರ್ಗಿ ವೃತ್ತದವರೆಗಿನ ರಾಜ್ಯ ಹೆದ್ದಾರಿಯ ರಸ್ತೆ ಕಾಮಗಾರಿಯೇ ಸಾಕ್ಷಿ.
ಇಲ್ಲಿನ ಅ ಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷéದಿಂದಾಗಿ ಬಸವೇಶ್ವರ ವೃತ್ತದಿಂದ ಜೇವರ್ಗಿ ವೃತ್ತದ ವರೆಗಿನ ರಾಜ್ಯ ಹೆದ್ದಾರಿಯ ರಸ್ತೆ ಅಗಲೀಕರಣ ಮತ್ತು ಡಿವೈಡರ್ ಕಾಮಗಾರಿಗೆ ನಗರೋತ್ಥಾನದ ಮೂರನೇ ಹಂತದಲ್ಲಿ ಕೋಟ್ಯಂತರ ರೂ. ವ್ಯಯಿಸಿದರೂ ರಸ್ತೆ ಮಾತ್ರ ಹರಿದು ಚಿಂದಿಯಾಗಿದೆ. ಹೆದ್ದಾರಿಯ ಹೆಜ್ಜೆ-ಹೆಜ್ಜೆಗೂ ತೆಗ್ಗುಗಳು ಬಿದ್ದಿವೆ. ಪ್ಯಾಚ್‌ವರ್ಕ್ ಮಾಡುತ್ತಿದ್ದರೂ ನಿಲ್ಲುತ್ತಿಲ್ಲ. ಅ ಧಿಕಾರಿಗಳ ಗಮನಕ್ಕೂ ತಾರದೇ ಕಾಮಗಾರಿ ನಡೆಯುತ್ತಿದೆ. ಈ ಕುರಿತು ಹಲವಾರು ಬಾರಿ ನೋಟಿಸ್ ನೀಡಿದರೂ ಗುತ್ತಿಗೆದಾರ ಕ್ಯಾರೇ ಎನ್ನುತ್ತಿಲ್ಲ.
ಕಳಪೆ ಕಾಮಗಾರಿ ಮಾಡಿದರೂ ಬಿಲ್ ಪಾವತಿ ಮಾಡಲಾಗಿದೆ. ಮತ್ತೆ ಇದೇ ರಸ್ತೆಗೆ ಎರಡು ಕೋಟಿ ಹದಿನೇಳು ಲಕ್ಷ ರೂ. ಹೆಚ್ಚುವರಿ ಅನುದಾನ ಒದಗಿಸಲಾಗಿದೆ. ಆದರೂ ಕಾಮಗಾರಿ ಸಂಪೂರ್ಣ ಕಳಪೆ ಮಟ್ಟದ್ದಾಗಿದೆ. ಕಳಪೆ ಕಾಮಗಾರಿಯಿಂದ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಬಿರುಕು ಮೂಡಿವೆ. ಡಿವೈಡರ್ ಮೇಲಿನ ಪದರು ಕಳಚಿ ಹೋಗಿದೆ. ನೂರಾರು ಸಂಖ್ಯೆಯಲ್ಲಿ ಸಿಮೆಂಟ್, ಫರ್ಸಿ ಹೊತ್ತೂಯ್ಯುವ ಲಾರಿಗಳು, ಟ್ಯಾಂಕರ್‌ಗಳು ಇದೇ ರಸ್ತೆಯಿಂದ ಹೋಗುತ್ತವೆ.
ತೆರಿಗೆ ಕಟ್ಟಿದ ಸಾರ್ವಜನಿಕರು ಉತ್ತಮ ರಸ್ತೆಯಿಲ್ಲದೇ ನಿತ್ಯ ಜನರು ಸಂಕಷ್ಟ ಪಡುವಂತಾಗಿದೆ. ಬಸವೇಶ್ವರ ವೃತ್ತದಿಂದ ದುರ್ಗಾ ವೈನ್ ಶಾಪ್ ವರೆಗೆ ಹಾಗೂ ಗಿಸಾಡಿ ಗಲ್ಲಿಯಲ್ಲಿ ಮಾಡಿದ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆ ಮಟ್ಟದ್ದಾಗಿದೆ. ಈಗಾಗಲೇ ಜಿಲ್ಲಾ ನಗರಾಭಿವೃದ್ಧಿ ಕೋಶದ (ಡಿಸ್ಟಿಕ್ಟ್ ಅರ್ಬನ್ ಡೆವಲಪ್‌ಮೆಂಟ್ ಸೆಲ್) ಪ್ರೊಜೆಕ್ಟ್ ಡೈರೆಕ್ಟರ್, ಇಇ, ಎಇಇ ಭೇಟಿ ನೀಡಿ ಪರಿಶೀಲಿಸಿದ್ದು, ಕಳಪೆ ಮಟ್ಟದ ಡಾಂಬರೀಕರಣ ತೆಗೆದು ಮತ್ತೆ ಡಾಂಬರೀಕರಣ ಮಾಡಲು ತಿಳಿಸಿದ್ದಾರೆ. ಆದರೂ ಗುತ್ತಿಗೆದಾರರು ಡಾಂಬರೀಕರಣ ಮಾಡಲು ಮುಂದಾಗುತ್ತಿಲ್ಲ ಎಂದು ಅಧಿಕಾರಿಗಳು ದೂರಿದ್ದಾರೆ.