Advertisement

ಗುಂಡಿಗೆ ಇದ್ರೆ ಗುಂಡಿ ರಸ್ತೆಗೆ ಬನ್ನಿ

12:41 PM Jul 28, 2019 | Suhan S |

ಬೇತಮಂಗಲ: ಹಳ್ಳಿಗಳ ರಸ್ತೆ ಅಭಿವೃದ್ಧಿಗೆ ಸರ್ಕಾರ ವಿವಿಧ ಯೋಜನೆಗಳಡಿಯಲ್ಲಿ ಕೋಟ್ಯಂತರ ರೂ. ಬಿಡುಗಡೆ ಮಾಡುತ್ತಿದೆಯಾದ್ರೂ ಸಮರ್ಪಕವಾಗಿ ಬಳಕೆ ಮಾಡುವಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ವಿಫ‌ಲವಾಗಿದ್ದಾರೆ ಎಂಬುದಕ್ಕೆ ಗ್ರಾಮದ ಹೊಸಬಡಾವಣೆಯ ಕೋಲಾರ-ಕೆಜಿಎಫ್ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯೇ ಸಾಕ್ಷಿ.

Advertisement

1.3 ಕಿ.ಮೀ. ಇರುವ ರಸ್ತೆಗೆ ಡಾಂಬರೀಕರಣ ಮಾಡಿ 18 ವರ್ಷ ಕಳೆದಿವೆ. ಗ್ರಾಮವಷ್ಟೇ ಅಲ್ಲದೆ, ಕೋಲಾರ ಕಡೆಯಿಂದ ಕೆಜಿಎಫ್ನ ನೂರಾರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಈ ರಸ್ತೆ ಸಂಪರ್ಕ ಸೇತುವೆಯಾಗಿದೆ. 2004ರ ಜಾತಿ ಗಣತಿ ಪ್ರಕಾರ ಕೇವಲ 5 ಸಾವಿರ ಜನಸಂಖ್ಯೆ ಹೊಂದಿದ್ದ ಬೇತಮಂಗಲ ಗ್ರಾಮವು ಇದೀಗ 15 ಸಾವಿರಕ್ಕೂ ಹೆಚ್ಚು ಜನರನ್ನು ಹೊಂದಿದೆ. ಆದ್ರೆ ಸರಿಯಾದ ರಸ್ತೆಗಳಿಲ್ಲ.

ಪ್ರವಾಸಿಗರಿಗೂ ಬೇಸರ: ಗ್ರಾಮದ ಪಾಲಾರ್‌ ಕೆರೆಯಿಂದ ಕೆಜಿಎಫ್ ನಗರಕ್ಕೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ. 1400ಕ್ಕೂ ಹೆಚ್ಚು ಎಕರೆ ಪ್ರದೇಶ ಹೊಂದಿರುವ ಪಾಲಾರ್‌ ಕೆರೆ ಮತ್ತು ಬ್ರಿಟೀಷರ ಕಾಲದಲ್ಲಿ ನಿರ್ಮಿತಗೊಂಡಿದ್ದ ಅತಿಥಿ ಗೃಹ ಇದೆ. ಆದರೆ, ಇದನ್ನು ನೋಡಲು ಬರುವ ಜನರಿಗೆ ಈ ಹದಗೆಟ್ಟ ರಸ್ತೆ ಅಡ್ಡಿಯಾಗಿದೆ.

ಭರವಸೆಗೆ ಸೀಮಿತ: ಈ ಹೊಸಬಡಾವಣೆಯ ರಸ್ತೆ ಲೋಕೋಪಯೋಗಿ ಇಲಾಖೆಗೆ ಸೇರುತ್ತೆ. ಒಮ್ಮೆ ಮಾತ್ರ ಡಾಂಬರೀಕರಣ ಮಾಡಿ ನಂತರ ಮರೆತೇ ಬಿಟ್ರಾ. ಕ್ಷೇತ್ರದಲ್ಲಿ ಈವರೆಗೂ ಗೆದ್ದ ಶಾಸಕರು ಕೇವಲ ದುರಸ್ತಿಯ ಭರವಸೆ ಕೊಡುತ್ತಾರೆ ಹೊರೆತು, ಈವರೆಗೂ ಕೆಲಸವಾಗಿಲ್ಲ.

ರಸ್ತೆ ತುಂಬಾ ಗುಂಡಿ: ಸ್ಮಶಾನ, ಪಶುಆಸ್ಪತ್ರೆ, ಶುದ್ಧ ಕುಡಿಯುವ ನೀರಿ ಘಟಕ, ಶಾಲಾ ಕಾಲೇಜುಗಳು ಈ ರಸ್ತೆಯಲ್ಲಿ ಬರುವ ಕಾರಣ ಕೂಲಿ ಕಾರ್ಮಿಕರು ರೈತರು ಹಾಗೂ ಶಾಲಾ ಮಕ್ಕಳು ಈ ರಸ್ತೆಯನ್ನೇ ಬಳಸುತ್ತಾರೆ. ರಸ್ತೆಯ ಡಾಂಬರು ಕಿತ್ತು ಹೋಗಿ ಜಲ್ಲಿ ಕಲ್ಲುಗಳು ರಸ್ತೆಯಲ್ಲಿ ತುಂಬಿವೆ. ಅಲ್ಲಲ್ಲಿ, ಕಡಿದಾದ ಗುಂಡಿಗಳು ಬಿದ್ದಿವೆ. ಮೊಣಕಾಲುದ್ದ ಬಿದ್ದಿರುವ ಗುಂಡಿಗಳು ವಾಹನ ಸವಾರರ ಪಾಲಿಗೆ ಮೃತ್ಯುಕೂಪವಾಗಿವೆ. ಸ್ವಲ್ಪ ಮಳೆಯಾದ್ರೆ ರಸ್ತೆ ಕೆಸರು ಗದ್ದೆಯಾಗುತ್ತದೆ.

Advertisement

ಬೇತಮಂಗಲ ಗ್ರಾಮವು ಈ ಹಿಂದೆ ವಿಧಾನಸಭಾ ಕ್ಷೇತ್ರವಾಗಿತ್ತು. ನಂತರ ತಾಲೂಕು ವಿಂಗಡಣೆಯಾಗಿ ಬೇತಮಂಗಲ ಕೇವಲ ಗ್ರಾಮವಾಗಿ ಉಳಿದಿದೆ. ಸರ್ಕಾರವು ಕೋಟ್ಯಂತರ ರೂ. ಅನುದಾನ ನೀಡಿದರೂ ಅವಶ್ಯಕ ಭಾಗಗಳಲ್ಲಿ ರಸ್ತೆ ಅಭಿವೃದ್ಧಿ ಪಡಿಸದಿರುವುದು ದುರ್ದೈವ.

 

● ಆರ್‌.ಪುರುಷೋತ್ತಮರೆಡ್ಡಿ

Advertisement

Udayavani is now on Telegram. Click here to join our channel and stay updated with the latest news.

Next