Advertisement

ಸೆಮಿಫೈನಲ್‌ನಲ್ಲಿ ಕಳಪೆ ನಿರ್ವಹಣೆ: ನಾಯಕ ಫಿಂಚ್‌

12:05 AM Jul 13, 2019 | Team Udayavani |

ಬರ್ಮಿಂಗ್‌ಹ್ಯಾಮ್: ಕಳೆದೊಂದು ವರ್ಷದಲ್ಲಿ ತಂಡದ ಏಳಿಗೆಯಿಂದ ನನಗೆ ಅತೀವ ಹೆಮ್ಮೆಯಾಗುತ್ತಿದೆ. ಆದರೆ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ನಮ್ಮ ನಿರ್ವಹಣೆ ಅತ್ಯಂತ ಕಳಪೆ ಮಟ್ಟದಲ್ಲಿತ್ತು ಎಂದು ಆಸ್ಟ್ರೇಲಿಯ ತಂಡದ ನಾಯಕ ಆರನ್‌ ಫಿಂಚ್‌ ಹೇಳಿದ್ದಾರೆ.

Advertisement

ಸೆಮಿಫೈನಲ್‌ನಲ್ಲಿ 8 ವಿಕೆಟ್‌ಗಳಿಂದ ಸೋತ ಆಸ್ಟ್ರೇಲಿಯ ತಂಡವು ಪ್ರಶಸ್ತಿಯನ್ನು ತನ್ನಲ್ಲಿ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ವೈಫ‌ಲ್ಯ ಅನುಭವಿಸಿತು. ನಾವಿಲ್ಲಿಗೆ ಪ್ರಶಸ್ತಿ ಗೆಲ್ಲಲು ಬಂದಿದ್ದೆವು. ಆದರೆ ನಮ್ಮ ಹೋರಾಟ ಸೆಮಿಫೈನಲ್‌ನಲ್ಲಿ ಕಳಪೆ ಮಟ್ಟದಲ್ಲಿ ಅಂತ್ಯಗೊಂಡಿರುವುದು ನಿರಾಶೆಯಾಗಿದೆ. ಇದು ಈ ಕೂಟದಲ್ಲಿ ನಮ್ಮ ಕಳಪೆ ನಿರ್ವಹಣೆಯಾಗಿದೆ ಎಂದವರು ಅಭಿಪ್ರಾಯಪಟ್ಟರು.

ಕಳೆದ 12 ತಿಂಗಳಲ್ಲಿ ಆಸ್ಟ್ರೇಲಿಯ ಅತ್ಯಂತ ಕಠಿನ ದಿನಗಳನ್ನು ಎದುರಿಸಿತ್ತು. ಅದರಲ್ಲಿಯೂ ಸ್ಟೀವನ್‌ ಸ್ಮಿತ್‌ ಮತ್ತು ಡೇವಿಡ್‌ ವಾರ್ನರ್‌ ಅವರಿಗೆ ಒಂದು ವರ್ಷ ನಿಷೇಧ ಹೇರಿದ ಬಳಿಕ ಆಸ್ಟ್ರೇಲಿಯ ಎದುರಾಳಿ ತಂಡದೆದುರು ಮೇಲುಗೈ ಸಾಧಿಸಲು ಒದ್ದಾಟ ನಡೆಸಿತ್ತು.


Advertisement

Udayavani is now on Telegram. Click here to join our channel and stay updated with the latest news.

Next