Advertisement
ನಗರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಂದ ಹಲವು ದೂರುಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಸಚಿವರು ಸೋಮವಾರ ಖುದ್ದು ವೀಕ್ಷಣೆಗೆ ಆಗಮಿಸಿ ನಗರದಲ್ಲಿ ಸಂಚಾರ ನಡೆಸಿದಾಗ ಸಮಸ್ಯೆಗಳ ದರ್ಶನವಾಯಿತು.
Related Articles
Advertisement
ನಗರದಲ್ಲಿ ನಡೆಯುತ್ತಿರುವ ಉಳಿದ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು ಎಂದು ಸೂಚಿಸಿದ ಅವರು, ಕಳಪೆ ಕೆಲಸ ಮಾಡಿ ನಾಗರಿಕರ ಆಕ್ರೋಶಕ್ಕೆ ತುತ್ತಾಗದಿರಿ, ನಿಮಗೆ ಅದಕ್ಕಿಂತ ಕೆಲಸವೇನಿದೆ ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೃಷ್ಣಬೈರೇಗೌಡ, ಕೋಲಾರವು ಇಷ್ಟು ಬೆಳೆದಿದ್ದರೂ ಬೇರೆ ಪಟ್ಟಣಗಳಿಗೆ ಹೋಲಿಸಿದರೆ ಅಭಿವೃದ್ಧಿಯಾಗಿಲ್ಲ. ಜಿಲ್ಲಾ ಕೇಂದ್ರದಂತೆ ಇಲ್ಲದಿರುವುದು ದುರದೃಷ್ಠಕರ. ಇದರಲ್ಲಿ, ಅಧಿಕಾರಿಗಳು, ಜನಪ್ರತಿನಿಧಿಗಳ ತಪ್ಪು ಇದೆ ಎಲ್ಲವನ್ನು ಬಗೆಹರಿಸಿ ಸುಧಾರಣೆ ಮಾಡಲಾಗುವುದು ಎಂದು ಹೇಳಿದರು.
ಯರಗೋಳ್ ಯೋಜನೆಯಡಿ ಕುಡಿಯುವ ನೀರನ್ನು ಒಂದು ವರ್ಷದ ಒಳಗಾಗಿ ನೀಡಲು ಆರಂಭ ಮಾಡಲು ತೀರ್ಮಾನಿಸಲಾಗಿದೆ ಎಂದು ಕೃಷ್ಣಬೈರೇಗೌಡ ತಿಳಿಸಿದರು.
ಕೋಲಾರ ನಗರದಲ್ಲಿ 4 ಓವರ್‌ಹೆಡ್ ಟ್ಯಾಂಕ್ ಮತ್ತು 6 ಕಿಮೀ ಪೈಪ್‌ಲೈನ್ ಕೆಲಸ ಬಾಕಿ ಇದ್ದು, 6 ತಿಂಗಳ ಒಳಗೆ ಪೂರ್ಣಗೊಳಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು. ಅಲ್ಲದೆ ಕೋಲಾರಮ್ಮ ಕೆರೆಗೆ ವರ್ಷದೊಳಗೆ ಕೆ.ಸಿ.ವ್ಯಾಲಿ ನೀರು ಹರಿಯಲಿದ್ದು, ಪುನಶ್ಚೇತನಗೊಳಿಸಿ ಸುತ್ತಲೂ ವಾಕಿಂಗ್ ಟ್ರಾಕ್ ನಿರ್ಮಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದರು.