Advertisement

ಸಿಆರ್‌ಎಫ್‌ ರಸ್ತೆಗಳ ಅಧ್ವಾನ

02:10 PM Jan 06, 2021 | Team Udayavani |

ಹುಬ್ಬಳ್ಳಿ: ನೂರಾರು ಕೋಟಿ ರೂಪಾಯಿ ವೆಚ್ಚದ ಕೇಂದ್ರ ರಸ್ತೆ ನಿ  (ಸಿಆರ್‌ಎಫ್‌) ಯೋಜನೆಯಡಿ ನಿರ್ಮಾಣವಾಗುತ್ತಿರುವಹಾಗೂ ಪೂರ್ಣಗೊಂಡಿರುವ ಕಾಂಕ್ರೀಟ್‌ರಸ್ತೆಗಳ ಅಂತಿಮ ಹಂತದ ಕೆಲಸಗಳಿಗೆ ತೀವ್ರ ನಿರ್ಲಕ್ಷ್ಯ ತೋರುತ್ತಿದ್ದು, ಯೋಜನೆಯಮೂಲ ಉದ್ದೇಶ ಈಡೇರದೆ ಅನುಕೂಲಕ್ಕಿಂತಅನಾನುಕೂಲಗಳೇ ಹೆಚ್ಚು ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಮಹಾನಗರದ ರಸ್ತೆಗಳ ಅಭಿವೃದ್ಧಿಗೆ ಸ್ಥಳೀಯ ಜನಪ್ರತಿನಿಧಿಗಳು ಕೇಂದ್ರ ರಸ್ತೆ ನಿಧಿ ಯೋಜನೆಯಡಿ ಕೋಟ್ಯಂತರ ರೂಪಾಯಿ ಮಂಜೂರು ತರುವ ಕೆಲಸ ಮಾಡಿದ್ದಾರೆ. ಆದರೆ ಸಮರ್ಪಕ ಅನುಷ್ಠಾನ ಕೊರತೆಯಿಂದ ಅನುಕೂಲಕ್ಕಿಂತ ಹೊಸ ಸಮಸ್ಯೆಗಳನ್ನು ತಂದೊಡ್ಡುತ್ತಿವೆ. ಗುತ್ತಿಗೆದಾರರು, ಅಧಿಕಾರಿಗಳ ಬೇಜಬ್ದಾರಿ ನಡೆಯಿಂದ ಇಡೀ ಯೋಜನೆಗೆ ಜನರು ಶಾಪ ಹಾಕುವಂತಾಗಿದೆ.

ರಸ್ತೆಗೆ ಕಾಂಕ್ರೀಟ್‌ ಸುರಿಯುವಾಗಿನ ಕಾಳಜಿ ಯೋಜನೆಗೆ ಅಂತಿಮ ಸ್ಪರ್ಶ ನೀಡುವಲ್ಲಿಎಡವುತ್ತಿದ್ದಾರೆ. ಗುತ್ತಿಗೆದಾರರ, ಅಧಿ ಕಾರಿಗಳ ಈ ಮನಸ್ಥಿತಿ ಜನರ ಪ್ರಾಣಕ್ಕೆ ಕುತ್ತುತಂದೊಡ್ಡಿದ್ದು, ನಗರದಲ್ಲಿ ಪ್ರಗತಿಯಲ್ಲಿರುವಹಾಗೂ ಪೂರ್ಣಗೊಂಡ ಸಿಆರ್‌ಎಫ್‌ರಸ್ತೆಗಳ ಬಗ್ಗೆ ಸಾಮಾನ್ಯ ಜನರಲ್ಲಿ ಖುಷಿಗಿಂತ ಆಕ್ರೋಶವೇ ಹೆಚ್ಚಾಗಿದೆ.

ಒಂದೆರಡಲ್ಲಾ ಎಡವಟ್ಟುಗಳು: ಇಡೀ ರಸ್ತೆ ಕಾಂಕ್ರೀಟೀಕರಣಗೊಂಡಿರುತ್ತದೆ.ಆದರೆ ಮಧ್ಯದಲ್ಲಿ ಒಂದಿಷ್ಟು ಜಾಗ ಬಿಟ್ಟುದ್ವಿಚಕ್ರ ವಾಹನ ಸವಾರರ ಜೀವಕ್ಕೆ ಕುತ್ತುತಂದಿಟ್ಟಿದ್ದಾರೆ. ಕಿತ್ತೂರು ಚನ್ನಮ್ಮ ವೃತ್ತದಿಂದನ್ಯೂ ಇಂಗ್ಲಿಷ್‌ ಶಾಲೆಯವರೆಗೆ ಇಂತಹಅವಾಂತರ ನೋಡಬಹುದಾಗಿದೆ. ಇತ್ತೀಚೆಗೆಒಂದಿಷ್ಟು ಕಾಂಕ್ರೀಟ್‌ ಸುರಿದಿದ್ದರೂ ವಾಹನಸಂಚಾರಿಗಳಿಗೆ ಇದೊಂದು ಅಪಘಾತದರಸ್ತೆಯಾಗಿದೆ. ಇನ್ನು ಬಹುತೇಕ ಕಡೆ ಮಿಡನ್‌ಗಾಗಿ ಬಿಟ್ಟಿರುವ ಜಾಗ ಸದ್ಭಳಕೆಯಾಗದೆ ಅಪಘಾತದ ವಲಯವಾಗಿವೆ. ಅಧಿಕಾರಿಗಳಅಸಹಕಾರವೋ ಏನೋ ಈ ರಸ್ತೆ ಸೇರಿದಂತೆಬಹುತೇಕ ಕಡೆ ಎರಡು ಭಾಗಗಳಲ್ಲಿ ಕಾಂಕ್ರೀಟ್‌ ರಸ್ತೆ ಕಡಿದಾಗಿದ್ದು, ಕೊಂಚ ಯಾಮಾರಿದರೂ ವಾಹನಗಳು ಪಲ್ಟಿಯಾಗಿ ಜೀವಕ್ಕೆ ಕುತ್ತುತರುವಂತಿದೆ. ಇಲ್ಲಿರುವ ಬಹುತೇಕ ಗ್ಯಾರೇಜ್‌,ಅಂಗಡಿಗಳ ವ್ಯವಹಾರಗಳು ಕಾಂಕ್ರೀಟ್‌ ರಸ್ತೆಗೆ ಬಂದಿದ್ದು, ಮೊದಲಿನಂತೆಯೇ ಸಂಚಾರದ ದಟ್ಟಣೆ ಇರುತ್ತದೆ.

ಪಾದಚಾರಿಗಳ ಸಾವಿನ ಮಾರ್ಗಗಳು: ಹೊಸದಾಗಿ ಆಗಿರುವ ಬಹುತೇಕ ಕಾಂಕ್ರೀಟ್‌ರಸ್ತೆಯ ಪಾದಚಾರಿ ಮಾರ್ಗಗಳನ್ನುನೋಡಿದರೆ ಅವು ಸಾವಿನ ಮಾರ್ಗಗಳಾಗಿವೆ.ಗಟಾರು ಮೇಲೆ ಕಾಂಕ್ರೀಟ್‌ ಸಿಮೆಂಟ್‌ ಬ್ಲಾಕ್‌ಗಳನ್ನು ಹಾಕಿ ಪಾದಚಾರಿ ಮಾರ್ಗಗಳನ್ನುಮಾಡಲಾಗಿದೆ. ಅಲ್ಲಲ್ಲಿ ಈ ಬ್ಲಾಕ್‌ಗಳನ್ನು ಹಾಕಿಲ್ಲ. ಇದರ ಹಿಂದಿರುವ ಅಧಿಕಾರಿಗಳ ವೈಜ್ಞಾನಿಕ ಕಾರಣವಂತೂ ಜನರಿಗೆ ಅರ್ಥವಾಗಿಲ್ಲ.

Advertisement

ಕೊಂಚ ಯಾಮಾರಿದರೂ ಸಾವು ಕಟ್ಟಿಟ್ಟ ಬುತ್ತಿ. ವಾಹನಗಳು ಸಂಚರಿಸುವ ರಸ್ತೆಗಿಂತಪಾದಚಾರಿ ಮಾರ್ಗಗಳೇ ಪ್ರಾಣ ತೆಗೆಯುವರಸ್ತೆಗಳಾಗಿವೆ. ಇಂತಹ ಅವಾಂತರಗಳಿಂದಜನರು ಪಾದಚಾರಿ ಮಾರ್ಗಗಳಿಂದ ರಸ್ತೆಯಲ್ಲಿ ಓಡಾಟ ಹೆಚ್ಚಾಗಿದೆ.

ತುಂಬುತ್ತಿದೆ ತ್ಯಾಜ್ಯ: ಗಟಾರು ಕಾರ್ಯಪೂರ್ಣಗೊಳಿಸದ ಪರಿಣಾಮ ಕಟ್ಟಡ ತ್ಯಾಜ್ಯ,ಪ್ಲಾಸ್ಟಿಕ್‌ ಬಾಟಲಿಗಳು, ಸುತ್ತಮುತ್ತಲಿನವರಿಗೆಕಸ ಹಾಕುವ ತೊಟ್ಟಿಗಳಾಗಿವೆ. ಇದರಿಂದಮಳೆಗಾಲದಲ್ಲಿ ನೀರು ಸರಾಗವಾಗಿಹರಿಯದೆ ಇಡೀ ನೀರು ರಸ್ತೆಯಲ್ಲಿಸಂಗ್ರಹವಾಗುತ್ತಿದೆ. ಸಕಾಲಕ್ಕೆ ಗಟಾರು ಕಾರ್ಯಪೂರ್ಣಗೊಳಿಸಿದರೆ ಸ್ವತ್ಛವಾಗಿರುತ್ತವೆ. ಈಕುರಿತು ದೂರು ಬಂದ ಕಡೆಗಳಲ್ಲಿ ಬ್ಲಾಕ್‌ಗಳನ್ನು ಅಳವಡಿಸಿ ಕೈ ತೊಳೆದುಕೊಳ್ಳಲಾಗುತ್ತಿದೆ. ಆದರೆ ಒಳ ಸೇರಿದ ಕಸ ಅಲ್ಲಿಯೇ ಉಳಿಯುತ್ತಿದೆ.

ರಸ್ತೆ, ಅಕ್ಕಪಕ್ಕದಲ್ಲಿ ತ್ಯಾಜ್ಯ: ಇನ್ನು ಬಹುತೇಕ ಕಡೆ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು, ನಿರ್ಮಾಣ ತ್ಯಾಜ್ಯ ಅಲ್ಲಿಂದ ತೆಗೆಯುವ ಕನಿಷ್ಠಪ್ರಜ್ಞೆ ಗುತ್ತಿಗೆದಾರರಲ್ಲಿ ಇಲ್ಲದಂತಾಗಿದೆ. ಇಂತಹದೃಶ್ಯಗಳು ಅನೇಕ ಕಡೆ ಕಾಣ ಸಿಗುತ್ತವೆ. ಇಂತಹಸಣ್ಣ ಪುಟ್ಟ ಕೆಲಸಗಳನ್ನು ಬಾಕಿ ಉಳಿಸಿರುವಕಾರಣದಿಂದ ಇಡೀ ರಸ್ತೆ ಅವ್ಯವಸ್ಥೆಯಆಗರವಾಗಿದೆ. ಹೊಸ ಕೋರ್ಟ್‌ ರಸ್ತೆ ಸಿಆರ್‌ಎಫ್‌ ರಸ್ತೆ ಎರಡೂ ಬದಿಯ ಅವ್ಯವಸ್ಥೆ ಇದಕ್ಕೆಉದಾಹರಣೆಯಾಗಿದೆ. ಒಂದು ಬದಿಯಲ್ಲಿಗಟಾರು ನಿರ್ಮಾಣವಾಗಿದ್ದು, ಅದರಕೆಲವಡೆ ಈ ಕಾಂಕ್ರೀಟ್‌ ರಸ್ತೆಯಿಂದ ಒಳರಸ್ತೆಗಳಿಗೆ ಸಂಪರ್ಕ ಕಲ್ಪಿಸಿಲ್ಲ. ಸ್ಥಳೀಯರೇಅದಕ್ಕೊಂದಿಷ್ಟು ಕಲ್ಲು ಮಣ್ಣು ಹಾಕಿಕೊಂಡು ಓಡಾಡುವಂತಾಗಿದೆ.

ಯಾಕೆ ಇಂತಹ ನಿರ್ಲಕ್ಷ್ಯ :

ಕೋಟ್ಯಂತರ ರೂಪಾಯಿ ಯೋಜನೆಗಳಲ್ಲಿ ಇಂತಹ ಅವಾಂತರಗಳು ನಡೆಯುತ್ತಿದ್ದರೂ ಸಂಬಂಧಿ ಸಿದ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆಯೇ ಎನ್ನುವುದು ಸಾರ್ವಜನಿಕರಆಕ್ರೋಶವಾಗಿದೆ. ಕಾಮಗಾರಿ ಪರಿಶೀಲನೆ ಮಾಡದೆ ಬಿಲ್‌ ಪಾಸ್‌ ಮಾಡುತ್ತಿರುವುದರಿಂದ ನಗರದಲ್ಲಿ ಇಂತಹ ಬೇಜವಾಬ್ದಾರಿ ಕೆಲಸಗಳು ಹೆಚ್ಚಾಗುತ್ತಿವೆ. ಕೊನೆಯ ಹಂತಕಾಮಗಾರಿಗಳ ಬಗ್ಗೆ ಸ್ಥಳೀಯ ಜನಪ್ರತಿನಿ ಗಳು ಗುತ್ತಿಗೆದಾರರಿಗೆ, ಅ ಧಿಕಾರಿಗಳಿಗೆ ಖಾರವಾಗಿಹೇಳಿದರೂ ಅವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲದಂತಾಗಿದೆ. ಈಗಲಾದರೂ ಎಚ್ಚೆತ್ತುಕೊಳ್ಳಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

ಬಹುತೇಕ ಕಾಂಕ್ರೀಟ್‌ ರಸ್ತೆಗಳು ಅವೈಜ್ಞಾನಿಕವಾಗಿವೆ. ಈಎಲ್ಲಾ ಅವ್ಯವಸ್ಥೆಗಳನ್ನು ನೋಡಿದರೆ ಅಧಿಕಾರಿಗಳು ಗುತ್ತಿಗೆದಾರರಿಗೆ ಲಾಭ ಮಾಡಿಕೊಟ್ಟಂತಿದೆ.ಎಲ್ಲಾ ಕಡೆ ಅರ್ಧಬಂರ್ಧ ಕೆಲಸಮಾಡಿ ಕೈತೊಳೆದುಕೊಂಡಿದ್ದಾರೆ.ಸಾರ್ವಜನಿಕರ ಜೀವದೊಂದಿಗೆ ಚಲ್ಲಾಟವಾಡುತ್ತಿದ್ದಾರೆ.ಇಂತಹವರ ಮೇಲೆ ಕ್ರಿಮಿನಲ್‌ಮೊಕದ್ದಮೆ ಹಾಕಿ ಕಾನೂನು ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನಯೋಜನೆಗಳು ಇವುಗಳಂತೆ ನಿಷ್ಪ್ರಯೋಜಕವಾಗುವುದರಲ್ಲಿ ಎರಡು ಮಾತಿಲ್ಲ. ಅಶೋಕ ಅರ್ಣೆಕರ, ವಕೀಲರು.

ಯೋಜನೆಯ ಗುದ್ದಲಿ ಪೂಜೆಗಿದ್ದ ಕಾಳಜಿ ಅರ್ಧದಷ್ಟುಅನುಷ್ಠಾನಕ್ಕಿಲ್ಲ. ಗಟಾರಿಗೆಸರಿಯಾಗಿ ಬ್ಲಾಕ್‌ಗಳನ್ನು ಹಾಕದೆಜನರ ಪ್ರಾಣ ತೆಗೆಯುವುದಕ್ಕಾಗಿಬಿಟ್ಟದಂತಿದೆ. ಸ್ಥಳೀಯ ಆಡಳಿತವೈಫಲ್ಯವೇ ಇದಕ್ಕೆ ಕಾರಣವಾಗಿದೆ.ಇಂತಹ ಸಣ್ಣಪುಟ್ಟ ಕೆಲಸಗಳಿಗೆಸಾಮಾನ್ಯ ಪ್ರಜ್ಞೆ ಸಾಕು. ಈ ವೈಫಲ್ಯಸ್ಥಳೀಯ ಜನಪ್ರತಿನಿ ಗಳು ಹೊರಬೇಕು.ಥರ್ಡ್‌ ಪಾರ್ಟಿ ತನಿಖೆ ಮಾಡಿಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು. –ವಿಕಾಸ ಸೊಪ್ಪಿನ, ಹೋರಾಟಗಾರರು.

ಗುತ್ತಿಗೆದಾರರ ಹಿತಕಾಡುವ ನಿಟ್ಟಿನಲ್ಲಿ ಇಲ್ಲಿನಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕಾಂಕ್ರೀಟ್‌ ರಸ್ತೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿಲ್ಲ. ಅವರು ಮಾಡಿರುವ ರಸ್ತೆಗಳಿಂದ ನಮ್ಮ ಮನೆಗೇಟುಗಳೇ ಮುಚ್ಚಿ ಹೋಗಿ ಮಳೆನೀರು ಮನೆಯೊಳಗೆ ಹರಿಯುತ್ತಿವೆ.ಒಳ ರಸ್ತೆಗಳ ಗಟಾರು ಕೆಳಗಿವೆ. ಇವರುಮಾಡಿರುವ ರಸ್ತೆಗಳು ಮೇಲಾಗಿವೆ.ಸಂಪರ್ಕ ರಸ್ತೆಗಳ ಪಾಡಂತೂ ಹೇಳ ತೀರದು. ಅನುಕೂಲಕ್ಕಿಂತಅನಾನುಕೂಲಗಳೇ ಹೆಚ್ಚಾಗಿವೆ. ಶಶಿ ಪಾಟೀಲ, ಸಾರ್ವಜನಿಕ

 

ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next