ಇಲ್ಲಿ ಕಲಿಯುವ ಮಕ್ಕಳೆಲ್ಲ ಬಡವರೇ. ಬೆಳಗ್ಗೆ ಬೇಗ ಏಳ್ಳೋದು, ಸಾಮೂಹಿಕ ಪ್ರಾರ್ಥನೆ, ಕಟ್ಟುನಿಟ್ಟಿನ ಓದು… ಇವೆಲ್ಲವಕ್ಕೂ ಒಂದು ಸೌಂದರ್ಯ ಕಳೆಗಟ್ಟಿರುವ ತಾಣ, ತುಮಕೂರಿನ ಶ್ರೀ ಸಿದ್ಧಗಂಗಾ ಮಠ. ಜಾತಿ, ಧರ್ಮ ಎನ್ನದೇ ಇಲ್ಲಿ ಬಡ ವಿದ್ಯಾರ್ಥಿಗಳಿಗೆ ಪ್ರವೇಶವಿದೆ. ಶ್ರೀ ಗುರು ಉದ್ಧಾನ ಶಿವಯೋಗಿ ಸ್ವಾಮಿಗಳು 1917ರಲ್ಲಿ ವಿದ್ಯಾರ್ಥಿ ನಿಲಯವನ್ನು ಸ್ಥಾಪಿಸಿದರಂತೆ.
ಆಗ ಇದ್ದಿದ್ದು ಕೇವಲ 53 ವಿದ್ಯಾರ್ಥಿಗಳು. ಈಗ 10 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉಚಿತ ಆಶ್ರಯ, ಅನ್ನ, ಜ್ಞಾನ ನೀಡಲಾಗುತ್ತಿದೆ.ಡಾ. ಶಿವಕುಮಾರ ಸ್ವಾಮಿಗಳ ಕಾಲದಲ್ಲಿ ಸಿದ್ಧಗಂಗಾ ಮಠದ ಖ್ಯಾತಿ ನಾಡಿನುದ್ದಕ್ಕೂ ಹರಡಿತು. ಕಳೆದ ವರ್ಷದವರೆಗೂ ಡಾ. ಶಿವಕುಮಾರ ಸ್ವಾಮೀಜಿಯವರೇ ಎಲ್ಲಾ ಮಕ್ಕಳ ಸಂದರ್ಶನ ನಡೆಸಿ, ಶಾಲೆಗೆ ಸೇರಿಸಿಕೊಳ್ಳುತ್ತಿದ್ದರು. ಈಗ, ಸಿದ್ಧಲಿಂಗ ಶ್ರೀಗಳೂ ಹಿರಿಯ ಶ್ರೀಗಳ ಹಾದಿಯಲ್ಲೇ ನಡೆದಿದ್ದಾರೆ. ಎಸ್ಸೆಸ್ಸೆಲ್ಸಿಯವರೆಗೆ ಇಲ್ಲಿ ಉಚಿತ ಶಿಕ್ಷಣ. ಕಾಲೇಜು ವಿದ್ಯಾರ್ಥಿಗಳು ಉಚಿತ ಊಟ- ಆಶ್ರಯ ಪಡೆದು, ತುಮಕೂರಿನ ಕಾಲೇಜುಗಳಲ್ಲಿ ಓದಬಹುದು.
ಏಕೆ ಇಲ್ಲಿ ಓದಬೇಕು?
– ಸಂಸ್ಕಾರಯುತ ವಾತಾವರಣ
– ಉತ್ತಮ ಮೂಲಭೂತ ಸೌಕರ್ಯ
– ಕ್ರೀಡಾ ಸೌಲಭ್ಯ, ಗ್ರಂಥಾಲಯ ವ್ಯವಸ್ಥೆ
ಏಕೆ ಇಲ್ಲಿ ಓದಬೇಕು?
– ನುರಿತ ಉಪನ್ಯಾಸಕರ ಪಾಠ.
– ಸುಸಜ್ಜಿತ ಹಾಸ್ಟೆಲ್ ವ್ಯವಸ್ಥೆ.
– ಹತ್ತಿರದಲ್ಲೆಲ್ಲೂ ಸಿನಿಮಾ ಥಿಯೇಟರ್‌ಗಳಿಲ್ಲ.
– ಚಿ.ನಿ. ಪುರುಷೋತ್ತಮ್