Advertisement

Poor air quality: 53 ನಗರಗಳ ವರದಿ ಕೇಳಿದ ಎನ್‌ಜಿಟಿ

12:22 AM Feb 27, 2024 | Team Udayavani |

ಹೊಸದಿಲ್ಲಿ: ಕಳಪೆ ವಾಯುಗುಣಮಟ್ಟ ಹೊಂದಿರುವ ದೇಶದ 53 ನಗರಗಳಿಗೆ ವಾಯು ಗುಣಮಟ್ಟ ಹಾಳಾಗಲು ಕಾರಣವಾಗಿರುವ ಮಾಲಿನ್ಯಕಾರಕಗಳ ಮೂಲ ಯಾವುದು, ಮಾಲಿನ್ಯ ತಡೆಗಟ್ಟಲು ಆಡಳಿತ ಕೈಗೊಂಡಿರುವ ಕ್ರಮಗಳೇನು ಎನ್ನುವಂಥ ಸಂಪೂರ್ಣ ವಿವರಗಳನ್ನು ಸಲ್ಲಿಸುವಂತೆ ರಾಷ್ಟ್ರೀಯ ಹಸುರು ನ್ಯಾಯ ಮಂಡಳಿ ಆದೇಶಿಸಿದೆ.

Advertisement

ಭಾರತದ ವಿವಿಧ ನಗರಗಳಲ್ಲಿ ವಾಯು ಗುಣಮಟ್ಟ ಕ್ಷೀಣಿಸುತ್ತಿರುವ ಕುರಿತು ರಾಷ್ಟ್ರೀಯ ಹಸುರು ನ್ಯಾಯಮಂಡಳಿ ವಿಚಾರಣೆ ನಡೆಸಿದೆ. ಈ ವೇಳೆ ಕಳಪೆ ಗುಣಮಟ್ಟದ 53 ನಗರಗಳು ಹಂಚಿಕೆಯಾಗಿರುವ ದಿಲ್ಲಿ, ಮೇಘಾಲಯ, ಪಂಜಾಬ್‌, ರಾಜಸ್ಥಾನ, ಗುಜರಾತ್‌, ಉತ್ತರ ಪ್ರದೇಶ, ಝಾರ್ಖಂಡ್‌, ಮಧ್ಯಪ್ರದೇಶ, ಹರಿಯಾಣ ಆಡಳಿತಗಳಿಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದೆ. ವಿಸ್ತೃತ ವರದಿಯನ್ನು ಸಲ್ಲಿಸುವಂತೆ ಈ ಎಲ್ಲ ನಗರಗಳಿಗೂ ಆದೇಶಿಸಿ ವಿಚಾರಣೆಯನ್ನು ಮೇ 3ಕ್ಕೆ ಮುಂದೂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next