ಮೈಸೂರು: ಗೊಂಬೆ ಹೇಳುತೈತೆ.. ಮತ್ತೆ ಹೇಳುತೈತೆ ನೀನೆ ರಾಜಕುಮಾರ..ಹಾಡನ್ನು ಮೈಸೂರಿನ ಶಕ್ತಿಧಾಮದಲ್ಲಿನ ಮಕ್ಕಳು ಹಾಡುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು. ಶೋಕ ಸಾಗರದಲ್ಲಿ ಮುಳುಗಿ ರುವ ಶಕ್ತಿಧಾಮದದಲ್ಲಿ ಶನಿವಾರ ಬೆಳಗ್ಗೆ ಶ್ರದ್ಧಾಂಜಲಿ ಸಭೆ ನಡೆಯಿತು. ಈ ವೇಳೆ ಸಂಸ್ಥೆಯಲ್ಲಿ ಆಶ್ರಯ ಪಡೆ ದಿರುವ 150 ಮಕ್ಕಳು ಕಣ್ಣಾಲಿ ಯಿಂದ ಒತ್ತರಿಸಿ ಬರುತ್ತಿರುವ ದುಃಖವನ್ನು ತಡೆದು ಕೊಂಡು ಗೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೆ ರಾಜ ಕುಮಾರ… ಗೀತೆಯನ್ನು ಹಾಡಿ ತಮ್ಮ ಪ್ರೀತಿಯ ಅಣ್ಣನಿಗೆ ಶ್ರದ್ಧಾಂಜಲಿ ಅರ್ಪಿಸಿದರು.
ಮೈಸೂರು ಭಾಗಕ್ಕೆ ಬಂದಾಗಲೆಲ್ಲಾ ಶಕ್ತಿಧಾಮಕ್ಕೆ ಭೇಟಿ ನೀಡಿ, ಶಕ್ತಿಧಾಮ ದಲ್ಲಿರುವ ಮಕ್ಕಳ ಕ್ಷೇಮ ವಿಚಾರಿಸಿ, ಏನಾದರೂ ಕೊಟ್ಟು ಹೋಗುತ್ತಿದ್ದರು. ನಮಗೆಲ್ಲ ಅಣ್ಣನ ಪ್ರೀತಿ ತೋರುತ್ತಿ ದ್ದರು. ಸೂಪರ್ ಸ್ಟಾರ್ ಆಗಿದ್ದರೂ ಸಮಯ ಕೊಟ್ಟಿದ್ದರು. ಎಲ್ಲರೊಂದಿಗೆ ಪ್ರೀತಿಯಿಂದ ಬೆರೆಯುತ್ತಿದ್ದರು ಎಂದು ಮಕ್ಕಳು ಸ್ಮರಿಸಿಕೊಂಡರು. ಶಕ್ತಿಧಾಮದ ಸಂಚಾಲಕ ಜಿ.ಎಸ್. ಜಯದೇವ್ ಮಾತನಾಡಿ, ಈ ವರ್ಷ ಕೋವಿಡ್‌ಗೆ ಮುನ್ನ ಶಕ್ತಿ ಧಾಮಕ್ಕೆ ಬಂದು ಬಹಳ ಹೊತ್ತು ಮಕ್ಕ ಳೊಂದಿಗೆ ಸಮಯ ಕಳೆದಿದ್ದರು.
ಇದನ್ನೂ ಓದಿ:- ತ್ವರಿತಗತಿಯಲ್ಲಿ ಯೋಜನೆ ಪೂರ್ಣಗೊಳಿಸಲು ಕಾರ್ಯಪ್ರವೃತ: ಚಂದ್ರಹಾಸ್ ಕೆ. ಶೆಟ್ಟಿ
ಇತ್ತೀಚಿನ ದಿನಗಳಲ್ಲಿ ಪುನೀತ್ ಶಿಕ್ಷ ಣದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು. ಶಕ್ತಿಧಾಮಕ್ಕೆ ಬಂದು ಮಕ್ಕಳ ಜೊತೆ ಊಟ ಮಾಡೋದಂದ್ರೆ ಅವರಿಗೆ ಬಲು ಇಷ್ಟ. ಮಕ್ಕಳಿಗೆ ಒಳ್ಳೆಯ ಕಡೆ ಊಟ ತರಿಸಿ ಅವರೂ ಊಟ ಮಾಡು ತ್ತಿದ್ದರು. ಶಿವಣ್ಣ ಅವರೂ ಕೂಡ ಪುನೀತ್ ಅವರ ಯೋಜನೆಗಳಿಗೆ ಕೈಜೋಡಿಸಿದ್ದರು. ಶಕ್ತಿಧಾಮದ ಸಲುವಾಗಿ ವಿದೇಶಕ್ಕೆ ಹೋಗಿ ಬರಲು ತಯಾರಿ ಮಾಡುತ್ತಿದ್ದರು. ಕನ್ನಡದ ಬೇರೆ ಬೇರೆ ನಟರ ಸಹಕಾರ ಪಡೆದು ಶಕ್ತಿಧಾಮಕ್ಕೆ ನೆರವಾಗಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದರು. ಪುನೀತ್‌ರ ಅಗಲಿಕೆ ಶಕ್ತಿಧಾಮ ಹಾಗೂ ಇಡೀ ಕನ್ನಡ ನಾಡಿಗೆ ತುಂಬಲಾರದ ನಷ್ಟ ಎಂದು ಸ್ಮರಿಸಿದರು.
3 ಎಕರೆಯಲ್ಲಿ ದೊಡ್ಡ ಶಿಕ್ಷಣ ಸಂಸ್ಥೆ ತೆರೆಯಲು ಚಿಂತನೆ
ಪುನೀತ್ ಶಕ್ತಿಧಾಮಕ್ಕೆ ಬೆನ್ನೆಲುಬಾಗಿದ್ದರು. ಶಕ್ತಿಧಾಮ ಡಾ.ರಾಜ್ ಕುಟುಂಬದ ಕನಸಾಗಿದ್ದು, ಅನಾಥ ಹೆಣ್ಣು ಮಕ್ಕಳ ಪುನರ್ವಸತಿಗಾಗಿ ಈ ಸಂಸ್ಥೆ ಸ್ಥಾಪಿಸಿದ್ದರು. ಶಕ್ತಿಧಾಮಕ್ಕೆ ಅಪ್ಪು ಸಂಪೂರ್ಣ ಸಹಕಾರ ನೀಡುತ್ತಿದ್ದರು.
ಕಳೆದ ವರ್ಷ ಕನ್ನಡದ ಕೋಟ್ಯಧಿಪತಿಯಿಂದ ತಮಗೆ ಬಂದಿದ್ದ 18 ಲಕ್ಷ ರೂ. ಸಂಭಾವನೆಯನ್ನು ಶಕ್ತಿಧಾಮಕ್ಕೆ ನೀಡಿದ್ದರು. ಪ್ರತಿ ವರ್ಷ ಮಕ್ಕಳಿಗೆ ಪುಸ್ತಕ ಹಾಗೂ ಇತರ ಅಗತ್ಯತೆಗಳನ್ನು ಪೂರೈಸುತ್ತಿದ್ದರು. ಶಕ್ತಿಧಾಮಕ್ಕೆ ಸೇರಿದ 3 ಎಕರೆ ಜಾಗದಲ್ಲಿ ಹೆಣ್ಣು ಮಕ್ಕಳಿಗಾಗಿ ದೊಡ್ಡ ಶಿಕ್ಷಣ ಸಂಸ್ಥೆ ಆರಂಭಿಸಲು ಯೋಚಿಸಿದ್ದರು. ಸುಮಾರು 8 ಕೋಟಿ ವೆಚ್ಚದ ಯೋಜನೆ ಕೂಡ ರೂಪಿಸಿದ್ದರು ಎಂದು ಶಕ್ತಿಧಾಮದ ಸಂಚಾಲಕ ಜಿ.ಎಸ್.ಜಯದೇವ್ ಹೇಳಿದರು.
ನಾವು ಏನ್ ಕೇಳಿದರೂ ಇಲ್ಲ ಅನ್ನುತ್ತಿರಲಿಲ್ಲ ಅಣ್ಣ
ಅಣ್ಣನ್ನು ಕಳೆದುಕೊಂಡ ದುಃ ಖದಲ್ಲಿದ್ದೇವೆ. ಶಕ್ತಿಧಾಮದಲ್ಲಿರುವ ನೊಂದ ಮಕ್ಕಳ ಕಷ್ಟಗಳನ್ನು ಕೇಳುತ್ತಿದ್ದರು. ನಂಜನಗೂಡು, ಊಟಿಗೆ ಹೋಗುವಾಗ ಮೈಸೂರಿಗೆ ಬಂದಾಗಲೆಲ್ಲಾ ಶಕ್ತಿಧಾಮಕ್ಕೆ ಬಂದೇ ಹೋಗುತ್ತಿದ್ದರು. ರಾಜಕುಮಾರ ಸಿನಿಮಾಕ್ಕೆ ಕರೆದುಕೊಂಡು ಹೋಗಿದ್ದರು. ಅಣ್ಣ ನಮ್ಮನ್ನು ಬಿಟ್ಟು ಹೋಗಿಲ್ಲ ಎಂದು ಶಕ್ತಿಧಾಮದ ಶ್ಯಾಮಲಾ ದುಖದಿಂದ ಹೇಳಿದರು. ಪುನೀತ್ ಅವರನ್ನು ನಾವು ಏನ್ ಕೇಳಿದರೂ ಇಲ್ಲ ಅನ್ನುತ್ತಿರಲಿಲ್ಲ. ಕುಟುಂಬ ಸಮೇತ ಬಂದು ಸಮಯ ಕಲೆಯುತ್ತಿದ್ದರು. ಪಾರ್ವತಮ್ಮನ ಹುಟ್ಟುಹಬ್ಬದಲ್ಲಿ ನಮಗೆಲ್ಲಾ ಉಡುಗೊರೆ ನೀಡುತ್ತಿದ್ದರು. ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಶಕ್ತಿಧಾಮದ ಮಕ್ಕಳು ಭಾಗವಹಿಸಬೇ ಕೆಂದು ಕನಸು ಕಟ್ಟಿದ್ದೇವು. ಅವರೇ ಇಲ್ಲದ ಕಾರ್ಯಕ್ರಮಕ್ಕೆ ಹೋಗಬೇಕೆ ಎಂದು ಶಕ್ತಿಧಾಮದ ಸುಷ್ಮಾ ಬೇಸರದ ನುಡಿಗಳನ್ನಾಡಿದರು.