Advertisement

ಬಿಗ್‌ ಬಾಶ್‌: ಬ್ರಿಸ್ಬೇನ್‌ ಹೀಟ್‌ ತಂಡಕ್ಕೆ ಪೂನಂ ಯಾದವ್‌

10:50 PM Oct 08, 2021 | Team Udayavani |

ಹೊಸದಿಲ್ಲಿ: ಲೆಗ್‌ಸ್ಪಿನ್ನರ್‌ ಪೂನಂ ಯಾದವ್‌ ಆಸ್ಟ್ರೇಲಿಯದ ಬಿಗ್‌ ಬಾಶ್‌ ಲೀಗ್‌ ಸರಣಿಯಲ್ಲಿ ಬ್ರಿಸ್ಬೇನ್‌ ಹೀಟ್‌ ತಂಡವನ್ನು ಪ್ರತಿನಿಧಿಸಲಿದ್ದಾರೆ. ಕೂಟದಿಂದ ಹಿಂದೆ ಸರಿದ ನ್ಯೂಜಿಲ್ಯಾಂಡಿನ ಆಲ್‌ರೌಂಡರ್‌ ಅಮೇಲಿ ಕೆರ್‌ ಜಾಗವನ್ನು ಪೂನಂ ತುಂಬುವರು.

Advertisement

2020ರ ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಘಾತಕ ಪ್ರದರ್ಶನ ನೀಡಿದ ಪೂನಂ ಯಾದವ್‌ ಅವರನ್ನು ಸೆಳೆಯಲು ಬಹಳಷ್ಟು ತಂಡಗಳು ಪ್ರಯತ್ನಿಸಿದ್ದವು. ಇದರಲ್ಲಿ ಬ್ರಿಸ್ಬೇನ್‌ ಹೀಟ್‌ ಯಶಸ್ವಿಯಾಗಿದೆ. ಇದರೊಂದಿಗೆ ಪೂನಂ ಯಾದವ್‌ ಮೊದಲ ಸಲ ಬಿಗ್‌ ಬಾಶ್‌ ಲೀಗ್‌ನಲ್ಲಿ ಆಡಲಿದ್ದಾರೆ.

ಪೂನಂ ಸೇರ್ಪಡೆಯೊಂದಿಗೆ ಮುಂದಿನ ಬಿಗ್‌ ಬಾಶ್‌ ಲೀಗ್‌ನಲ್ಲಿ ಆಡಲಿರುವ ಭಾರತೀಯ ಆಟಗಾರರ ಸಂಖ್ಯೆ 8ಕ್ಕೆ ಏರಿದೆ. ಉಳಿದವರೆಂದರೆ ಶಫಾಲಿ ವರ್ಮ, ರಾಧಾ ಯಾದವ್‌, ಹರ್ಮನ್‌ಪ್ರೀತ್‌ ಕೌರ್‌, ಸ್ಮತಿ ಮಂಧನಾ, ದೀಪ್ತಿ ಶರ್ಮ, ರಿಚಾ ಘೋಷ್‌ ಮತ್ತು ಜೆಮಿಮಾ ರೋಡ್ರಿಗಸ್‌.

ಇದನ್ನೂ ಓದಿ:ಐಟಿ ದಾಳಿಗೆ ಮುಖ್ಯಮಂತ್ರಿ ಉತ್ತರದಾಯಿ: ಕಾಂಗ್ರೆಸ್‌ ಟ್ವೀಟ್‌

Advertisement

Udayavani is now on Telegram. Click here to join our channel and stay updated with the latest news.

Next