ಗೋವಾ : ಮದುವೆಯಾದ ಕೆಲವೇ ದಿನಗಳಲ್ಲಿ ನಟಿ ಪೂನಂ ಪಾಂಡೆ ತನ್ನ ಪತಿಯ ವಿರುದ್ಧ ಕಿರುಕುಳ ಹಾಗೂ ಜೀವ ಬೆದರಿಕೆಯ ಆರೋಪದ ಮೇಲೆ ಪತಿ ಸ್ಯಾಮ್ ಬಾಂಬೆ ಅವರನ್ನು ದಕ್ಷಿಣ ಗೋವಾದ ಕಾನಕೋನ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಸದಾ ಒಂದಲ್ಲಾ ಒಂದು ವಿಚಾರದಲ್ಲಿ ಸುದ್ದಿಯಾಗುತ್ತಿದ್ದ ನಟಿ ಪೂನಂ ಪಾಂಡೆ ತನ್ನ ಪತಿಯ ವಿರುದ್ಧವೇ ದಕ್ಷಿಣ ಗೋವಾದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪೂನಂ ಪಾಂಡೆ ಹಾಗೂ ಸ್ಯಾಮ್ ಬಾಂಬೆ ಜೋಡಿ ಸೆಪ್ಟೆಂಬರ್ 1ರಂದು ಮದುವೆಯಾಗಿದ್ದರು ಆದರೆ ಮದುವೆಯಾದ ಹೊಸದರಲ್ಲಿ ಗೋವಾಕ್ಕೆ ಬಂದಿದ್ದ ಜೋಡಿ ಇಲ್ಲಿ ಪತಿ ಸ್ಯಾಮ್ ನಟಿ ಪೂನಂ ಪಾಂಡೆಗೆ ಕಿರುಕುಳ ಹಾಗೂ ಜೀವ ಬೆದರಿಕೆ ಒಡ್ಡಿದ ಹಿನ್ನೆಲೆಯಲ್ಲಿ ಪೂನಂ ಪಾಂಡೆ ಸೋಮವಾರ ರಾತ್ರಿ ದಕ್ಷಿಣ ಗೋವಾದ ಕಾನಕೋನ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಈ ಕುರಿತು ಇಲ್ಲಿನ ಪೊಲೀಸ್ ಅಧಿಕಾರಿ ತುಕಾರಾಮ್ ಚವಾಣ್ ಪೂನಂ ಪಾಂಡೆ ನಮ್ಮ ಠಾಣೆಯಲ್ಲಿ ಪತಿ ಸ್ಯಾಮ್ ನನಗೆ ಕಿರುಕುಳ ನೀಡುತ್ತಿದ್ದಾರೆ ಜೊತೆಗೆ ನನ್ನ ಜೀವಕ್ಕೆ ಅಪಾಯವಿದೆ ಇದೆ ಎಂದು ದೂರು ನೀಡಿದ್ದು ಇದರ ಪರಿಣಾಮ ಮಂಗಳವಾರ ಸ್ಯಾಮ್ ಬಾಂಬೆ ಅವರನ್ನು ವಶಕ್ಕೆ ಪಡೆದಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ :ಸರಕಾರಿ ಜಾಗದಲ್ಲಿ ಯೇಸು ಶಿಲುಬೆ : ವಿರೋಧದ ನಡುವೆ ಜಿಲ್ಲಾಡಳಿತದಿಂದ ತೆರವು ಕಾರ್ಯಾಚರಣೆ
ಪೂನಂ ಪಾಂಡೆ ಹಾಗೂ ಸ್ಯಾಮ್ ಬಾಂಬೆ ಜೋಡಿ ಕಳೆದ ಎರಡು ವರ್ಷಗಳಿಂದ ಲಿವ್ ಇನ್- ಸಂಬಂಧದಲ್ಲಿ ಬಾಂದ್ರಾದಲ್ಲಿ ವಾಸವಾಗಿದ್ದರು ಸೆಪ್ಟೆಂಬರ್ 1ರಂದು ಜೋಡಿ ಮದುವೆಯಾಗಿದ್ದು ಈ ಸಂದರ್ಭ ಕುಟುಂಬ ಸದಸ್ಯರು ಹಾಗೂ ಆಪ್ತರು ಭಾಗಿಯಾಗಿದ್ದರು ಎಂದು ಪೂನಂ ಪಾಂಡೆ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಮದುವೆಯ ಫೋಟೋಗಳನ್ನು ಹಂಚಿಕೊಂಡಿದ್ದರು.