ಮುಂಬಯಿ : ನಟಿ ಪೂನಂ ಪಾಂಡೆ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಆಕೆಯ ಪತಿ ಸ್ಯಾಮ್ ಪಾಂಡೆಯನ್ನು ಮುಂಬಯಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಪತಿ ನಡೆಸಿದ ದೈಹಿಕ ಹಲ್ಲೆಯಿಂದ ಪೂನಂ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಲ್ಲೆಯಿಂದ ಪೂನಂ ತಲೆ, ಕಣ್ಣು ಮತ್ತು ಮುಖಕ್ಕೆ ಗಂಭೀರ ಸ್ವರೂಪದ ಗಾಯಗಳಾಗಿವೆ ಎಂದು ಮುಂಬಯಿ ಪೊಲೀಸರು ತಿಳಿಸಿದ್ದಾರೆ.
ಕಳೆದ ವರ್ಷ ಮದುವೆಯಾದ ಕೆಲವೇ ದಿನಗಳಲ್ಲಿ ಪೂನಂ ಪಾಂಡೆ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಸ್ಯಾಮ್ ಬಾಂಬೆಯನ್ನು ಬಂಧಿಸಲಾಗಿತ್ತು. ಪೂನಂ ಪಾಂಡೆ ಅವರು ಗೋವಾದಲ್ಲಿ ಹನಿಮೂನ್ನಲ್ಲಿದ್ದಾಗ ಅವರ ವಿರುದ್ಧ ಕೌಟುಂಬಿಕ ದೌರ್ಜನ್ಯದ ದೂರು ದಾಖಲಿಸಿದ್ದರು.
ಸ್ಯಾಮ್ ಬಾಂಬೆ ಜಾಮೀನು ಪಡೆದ ಕೂಡಲೇ ಪೂನಂ ಪಾಂಡೆ ಅವರೊಂದಿಗೆ ಮತ್ತೆ ಸೇರಿಕೊಂಡಿದ್ದರು . ಆಗ ಪೂನಂ, ಯಾವ ಮದುವೆಯಲ್ಲಿ ಏರಿಳಿತ ಇರುವುದಿಲ್ಲ ಹೇಳಿ ಎಂದು ಪ್ರತಿಕ್ರಿಯಿಸಿದ್ದರು.