Advertisement
ದಿಲ್ಲಿ ನಿವಾಸಿ ಮಹಮ್ಮದ್ ಪರ್ವೀಝ್ ಅವರ ಪುತ್ರಿ ರೇಷ್ಮಾ(17) ಮೃತಪಟ್ಟವಳು. ಈಕೆ 9 ತಿಂಗಳಿನಿಂದ ಪೂಮಣ್ಣು ನಿವಾಸಿ ಮಹಮ್ಮದ್ ಅವರ ಮನೆಯಲ್ಲಿ ಕೆಲಸಕ್ಕಿದ್ದಳು. ಈ ಹಿಂದೆ ಈಬಾಲಕಿಯ ಸಹೋದರಿ ಇದೇ ಮನೆಯಲ್ಲಿ ಕೆಲಸಕ್ಕಿದ್ದು,ಮದುವೆಯ ಬಳಿಕ ತೆರಳಿದ್ದಳುಎನ್ನಲಾಗಿದೆ.
ಮನೆಯ ಯಜಮಾನ ಮಹಮ್ಮದ್ ದುಬಾೖಯಲ್ಲಿ ನೆಲೆಸಿದ್ದು, ಇಲ್ಲಿ ಅವರ ಸಹೋದರ ಸಂಬಂಧಿ ಹಮೀದ್ ಅವರ ಕುಟುಂಬ ನೆಲೆಸಿದೆ. ಅವರು ಬೆಳಗ್ಗೆ 11 ಗಂಟೆಗೆ ಕುಟುಂಬ ಸಮೇತ ಸಂಬಂಧಿಕರ ಮನೆಗೆ ತೆರಳಿದ್ದು, ಈ ಸಂದರ್ಭ ಬಾಲಕಿ ಮನೆಯಲ್ಲೇ ಉಳಿದಿದ್ದಳು. ಸಂಜೆ ಆಗಮಿಸಿದಾಗ ಮನೆ ಬಾಗಿಲು ತೆರೆದಿದ್ದು, ಮನೆಯೊಳಗೆ ಮೊದಲ ಮಹಡಿಗೆ ಹತ್ತುವ ಸ್ಟೇರ್‌ಗೆàಸ್‌ನ ಸ್ಟೀಲ್ ರಾಡ್‌ಗೆ ಚೂಡಿದಾರ್ ಶಾಲ್ ಬಳಸಿ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಕಂಡು ಬಂದಿದ್ದಳು. ಸುದ್ದಿ ತಿಳಿದು ಜಮಾಯಿಸಿದ ಸ್ಥಳೀಯರು ಇದು ಆತ್ಮಹತ್ಯೆ ಅಲ್ಲ ಎಂದು ಶಂಕಿಸಿದರು. ಪೊಲೀಸರು ಮತ್ತು ಮಾಧ್ಯಮದವರು ಬಂದ ಬಳಿಕ ತನಿಖೆ ಮಾಡಿ ಮೃತದೇಹ ತೆಗೆಯ ಬೇಕು ಎಂದು ಪಟ್ಟು ಹಿಡಿದರು.
Related Articles
Advertisement
ಉಳ್ಳಾಲ ಇನ್‌ಸ್ಪೆಕ್ಟರ್ ಗೋಪಿಕೃಷ್ಣ ಅವರ ಮಾರ್ಗದರ್ಶನದಲ್ಲಿ ತನಿಖೆ ನಡೆಸಲಾಗುತ್ತಿದೆ.