Advertisement

ಪೂನಚ್ಚಗೆ ಟೆನಿಸ್‌ ಪ್ರಶಸ್ತಿ

06:55 AM Aug 13, 2018 | Team Udayavani |

ಪುಣೆ: ಅರ್ಹತಾ ಆಟಗಾರ ನಿಕಿ ಕಲಿಯಂಡ ಪೂನಚ್ಚ ಅವರು ಜಕಾರ್ತಾದಲ್ಲಿ ನಡೆದ ಪುರುಷರ ಟೆನಿಸ್‌ ಕೂಟದಲ್ಲಿ ಪ್ರಶಸ್ತಿ ಜಯಿಸಿದ್ದಾರೆ. ಇದು ಅವರು ಗೆದ್ದ ಚೊಚ್ಚಲ ಪ್ರಶಸ್ತಿಯಾಗಿದೆ.

Advertisement

ಬೆಂಗಳೂರಿನ ರೋಹನ್‌ ಬೋಪಣ್ಣ ಟೆನಿಸ್‌ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ 23ರ ಹರೆಯದ ಪೂನಚ್ಚ ಅವರು 53 ನಿಮಿಷಗಳ ಫೈನಲ್‌ ಹೋರಾಟದಲ್ಲಿ 30ರ ಹರೆಯದ ಆಸ್ಟ್ರೇಲಿಯದ ಮೈಕಲ್‌ ಲುಕ್‌ ಅವರನ್ನು 6-3, 6-1 ಸೆಟ್‌ಗಳಿಂದ ಸೋಲಿಸಿ ಸಂಭ್ರಮಿಸಿದರು. ಈ ಗೆಲುವಿನಿಂದ ಅವರು 27 ರ್‍ಯಾಂಕಿಂಗ್‌ ಅಂಕ ಮತ್ತು 2.5 ಲಕ್ಷ ರೂ. ನಗದು ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next