ಮೈಸೂರು: ಯುಪಿಎಸ್ಸಿ ಫಲಿತಾಂಶ ಪ್ರಕಟಗೊಂಡಿದು ಮೈಸೂರಿನ ಪೂಜಾ ಮುಕುಂದ್ 390 ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.
ಈಕೆ ಓದಿದ್ದು ಎಂಜಿನಿಯರಿಂಗ್ ಆದ್ರೇ ಯುಪಿಎಸ್ಸಿಯಲ್ಲಿ ಸಮಾಜಶಾಸ್ತ್ರ ವಿಷಯ ಆಯ್ಕೆ ಮಾಡಿಕೊಂಡು ತೇರ್ಗಡೆ ಯಾಗಿದ್ದಾರೆ.
ಈ ಕುರಿತು ತಮ್ಮ ಮನದಾಳದ ಮಾತನ್ನು ಬಿಚ್ಚಿಟ್ಟ ಪೂಜಾ ತಾನು ಪಟ್ಟ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ, ಸತತ ಮೂರು ವರ್ಷಗಳಿಂದ ಪರೀಕ್ಷೆ ತಯಾರಿ ನಡೆಸಿಕೊಂಡು ಬಂದಿದ್ದೇನೆ ಇದರ ಫಲವಾಗಿ ಎರಡನೇ ಪ್ರಯತ್ನದಲ್ಲೇ ರ‍್ಯಾಂಕ್ ಪಡೆಯುವಂತಾಯಿತು ಎಂದು ಹೇಳಿಕೊಂಡಿದ್ದಾರೆ.
ಮನೆಯಲ್ಲೇ ತಯಾರಿ:
ಪೂಜಾ ಪರೀಕ್ಷೆ ತಯಾರಿಗೆ ಯಾವುದೇ ಕೋಚಿಂಗ್ ಸೆಂಟರ್ ಗೆ ಹೋಗಿಲ್ಲ ಬದಲಾಗಿ ಎಲ್ಲವನ್ನೂ ಮನೆಯಲ್ಲೇ ತಯಾರಿ ನಡೆಸಲಾಗಿತ್ತು ಕುಟುಂಬದವರ ಸಹಕಾರ ನಾನು ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಸಹಕಾರಿಯಾಯಿತು ಎಂದು ಹೇಳಿಕೊಂಡಿದ್ದಾರೆ.
Related Articles
ಈಗ ನನ್ನ ಮುಂದೆ ಸಾಕಷ್ಟು ಆಯ್ಕೆಗಳು ಇವೆ ಎಂದು ಪೂಜಾ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಬೆಳ್ತಂಗಡಿ ತಾಲೂಕಿನಲ್ಲಿ ಭಾರಿ ಮಳೆ: ಐತಿಹಾಸಿಕ ಗಡಾಯಿಕಲ್ಲಿಗೆ ಬಡಿದ ಸಿಡಿಲು