Advertisement

ಓಟಿಟಿಗೆ ಬಂತು ಬಾಕ್ಸಾಫೀಸ್ ನಲ್ಲಿ 500 ಕೋಟಿ ಗಳಿಸಿದ ‘ಪೊನ್ನಿಯನ್ ಸೆಲ್ವನ್-1’ಸಿನಿಮಾ

12:54 PM Oct 28, 2022 | Team Udayavani |

ಐತಿಹಾಸಿಕ ಕಥಾಹಂದರ ಹೊಂದಿರುವ, ಖ್ಯಾತ ನಿರ್ದೇಶಕ ಮಣಿರತ್ನಂ ಅವರ ‘ಪೊನ್ನಿಯನ್ ಸೆಲ್ವನ್ -1’ ಚಿತ್ರ ನಿರೀಕ್ಷೆಯಂತೆಯೇ ಭರ್ಜರಿ ಯಶಸ್ಸು ಗಳಿಸಿದೆ. ಬಿಡುಗಡೆಯಾಗಿ ಒಂದು ತಿಂಗಳ ಅವಧಿಯಲ್ಲಿ ಚಿತ್ರ ವಿಶ್ವದಾದ್ಯಂತ 500 ಕೋಟಿ ರೂ ಕಲೆಕ್ಷನ್ ಮಾಡಿದೆ.

Advertisement

ಪೊನ್ನಿಯಿನ್ ಸೆಲ್ವನ್ -1 ಎರಡು ಭಾಗಗಳ ಸಿನಿಮಾವಾಗಿದ್ದು, ಮೊದಲ ಭಾಗ ಸೆ.30ರಂದು ತೆರೆಕಂಡಿದೆ. ಇದನ್ನು ಲೈಕಾ ಪ್ರೊಡಕ್ಷನ್ಸ್ ಅಡಿಯಲ್ಲಿ ಮಣಿರತ್ನಂ ಮತ್ತು ಅಲ್ಲಿರಾಜ ಸುಭಾಸ್ಕರನ್ ಸಹ-ನಿರ್ಮಾಣ ಮಾಡಿದ್ದಾರೆ. ಮಣಿರತ್ನಂ ಅವರೊಂದಿಗೆ ಎಲಂಗೋ ಕುಮಾರವೇಲ್ ಮತ್ತು ಬಿ ಜಯಮೋಹನ್ ಚಿತ್ರಕ್ಕೆ ಕಥೆ ಬರೆದಿದ್ದಾರೆ.

ಇದನ್ನೂ ಓದಿ:ಮತ್ತೆ ಮಳೆ ಕಾಟ: ಒಂದೂ ಎಸೆತ ಕಾಣದೆ ರದ್ದಾದ ಐರ್ಲೆಂಡ್- ಅಫ್ಘಾನ್ ಪಂದ್ಯ

ವಿಶ್ವದೆಲ್ಲೆಡೆ ಉತ್ತಮ ಪ್ರಶಂಸೆ ಪಡೆದ ಚಿತ್ರವು ಇದೀಗ ಡಿಜಿಟಲ್ ವೇದಿಕೆಯಲ್ಲಿ ಲಭ್ಯವಾಗುತ್ತಿದೆ. ವಿಕ್ರಮ್ ಅಭಿನಯದ ಚಿತ್ರವು ಅಮೇಜಾನ್ ಪ್ರೈಮ್ ವೇದಿಕೆಯಲ್ಲಿ ಸದ್ಯ ಲಭ್ಯವಿದೆ. ಆದರೆ ಸದ್ಯಕ್ಕೆ ಸಿನಿಮಾ ಬಾಡಿಗೆಗೆ ಲಭ್ಯವಿದೆ. 199 ರೂ. ನೀಡಿ ಸಿನಿಮಾವನ್ನು ನೀವು ಪ್ರೈಮ್ ನಲ್ಲಿ ಸದ್ಯ ನೋಡಬಹುದಾಗಿದೆ.

ಪೊನ್ನಿಯನ್ ಸೆಲ್ವನ್ ಚಿತ್ರದಲ್ಲಿ ಐಶ್ವರ್ಯ ರೈ ಬಚ್ಚನ್, ವಿಕ್ರಮ್, ಕಾರ್ತಿ, ತ್ರಿಶಾ, ಜಯಂ ರವಿ ಮತ್ತು ಪ್ರಕಾಶ್ ರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವು ತಮಿಳು, ಹಿಂದಿ, ಕನ್ನಡ, ತೆಲುಗು ಮತ್ತು ಮಳಯಾಲಂ ಭಾಷೆಗಳಲ್ಲಿ ತೆರೆಕಂಡಿದೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next