Advertisement

ಪಾಂಡಿಚೇರಿ ಪಾಗಲ್‌ ಪ್ರೇಮಿ ಅಂದರ್‌

10:43 AM Jan 12, 2020 | Team Udayavani |

ಹುಬ್ಬಳ್ಳಿ: ತನ್ನ ಪ್ರೇಯಸಿಯೊಂದಿಗೆ ಮದುವೆ ಮಾಡಿಸಲಿಲ್ಲವೆಂದು ಸಿಟ್ಟಾಗಿ ಖಾಸಗಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಪಾಂಡಿಚೇರಿಯ ಯುವಕನನ್ನು ನಗರದ ಸೈಬರ್‌ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಪಕ್ಷವೊಂದರ ಮುಖಂಡನಾದ ಪಾಂಡಿಚೇರಿಯ ರಾಕ್‌ ಪೆಡ್ರಿಕ್‌ ಬಂಧಿತನಾಗಿದ್ದಾನೆ. ಈತ ಸಂಬಂಧಿಕರೊಬ್ಬರ ಪುತ್ರಿಯನ್ನು ಪ್ರೀತಿಸುತ್ತಿದ್ದ. ಮನೆಯವರು ಮದುವೆ ಮಾಡಿಕೊಡಲಿಲ್ಲವೆಂದು ಸಿಟ್ಟಾಗಿ ಯುವತಿ ಜೊತೆಗಿನ ಖಾಸಗಿ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬ್ಲ್ಯಾಕ್‌ವೆುàಲ್‌ ಮಾಡುತ್ತಿದ್ದ. ಆದರೆ ತನ್ನ ಮಾತಿಗೆ ಬೆಲೆ ಕೊಡದಿದ್ದಾಗ ಒಂದಿಷ್ಟು ವಿಡಿಯೋ ಹರಿಬಿಟ್ಟಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತ ಯುವತಿ ಕಡೆಯವರು ಹುಬ್ಬಳ್ಳಿಯ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ದೂರು ಕೊಟ್ಟಿದ್ದರು.

ತಾಯಿ ಕಡೆಯಿಂದ ದೂರದ ಸಂಬಂಧವೆಂಬ ಕಾರಣಕ್ಕೆ ರಾಕ್‌ ಪೆಡ್ರಿಕ್‌ ಯುವತಿ ಜೊತೆ ಒಡನಾಟ ಹೊಂದಿದ್ದ. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಮದುವೆ ಮಾಡುವಂತೆ ಅನೇಕ ಸಲ ಕೇಳಿದ್ದ. ಆದರೆ, ಸಹೋದರ ಸಂಬಂಧವಾಗುತ್ತದೆ ಎಂದು ಯುವತಿ ಮನೆಯವರು ನಿರಾಕರಿಸಿದ್ದರು ಎನ್ನಲಾಗಿದೆ. ಇದರಿಂದ ಕೋಪಗೊಂಡ ರಾಕ್‌ನು ಏಕಾಂತದ ಪೋಟೋ, ವಿಡಿಯೋಗಳನ್ನು ಹರಿಬಿಟ್ಟಿದ್ದ ಎಂದು ತಿಳಿದುಬಂದಿದೆ. ಯುವತಿಯ ತಂದೆ ಪಾಂಡಿಚೇರಿ ಮೂಲದವರಾಗಿದ್ದು, ಕೆಲಸ ನಿಮಿತ್ತ ನಗರಕ್ಕೆ ಬಂದಿದ್ದರು. ಇವರ ಬಹುತೇಕ ಕುಟುಂಬ ಪಾಂಡಿಚೇರಿಯಲ್ಲಿ ವಾಸವಾಗಿದೆ. ಆದರೆ, ಈ ಘಟನೆ ನಡೆದ ನಂತರ ಅವರು ಇಲ್ಲಿನ ಮಂಟೂರ ರಸ್ತೆಯಲ್ಲಿ ವಾಸವಾಗಿದ್ದಾರೆ ಎನ್ನಲಾಗಿದೆ.

ಸೈಬರ್‌ ಕ್ರೈಂ ಠಾಣೆ ಇನ್ಸಪೆಕ್ಟರ್‌ ಡಿ.ಕೆ. ಪ್ರಭುಗೌಡ ನೇತೃತ್ವದಲ್ಲಿ ಶುಕ್ರವಾರ ಪಾಂಡಿಚೇರಿಗೆ ತೆರಳಿ ರಾಕ್‌ ಪೆಡ್ರಿಕ್‌ನನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next