Advertisement

ಉತ್ತರ ಕೊರಿಯಾ ಆರ್ಥಿಕ ದಿಗ್ಬಂಧನಕ್ಕೆ ಚೀನಾ ಬೆಂಬಲ

11:33 AM Jun 15, 2018 | Team Udayavani |

ಬೀಜಿಂಗ್‌/ಸಿಯೋಲ್‌: ಉತ್ತರ ಕೊರಿಯಾ ಜತೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಾತುಕತೆ ಯಶಸ್ವಿಯಾದರೂ, ವಿಶ್ವಸಂಸ್ಥೆ ಆ ದೇಶದ ಮೇಲೆ ಹೇರಿರುವ ಆರ್ಥಿಕ ದಿಗ್ಬಂಧನ ಮೇಲೆ ಚೀನಾ ಬೆಂಬಲ ಅಬಾಧಿತ. ಹೀಗೆಂದು ಅಮೆರಿಕದ ವಿದೇಶಾಂಗ ಸಚಿವ ಮೈಕ್‌ ಪೊಂಪ್ಯೋ  ಹೇಳಿದ್ದಾರೆ. ಬೀಜಿಂಗ್‌ನಲ್ಲಿ ಚೀನಾ ಅಧಿಕಾರಿಗಳ ಜತೆಗೆ ಮಾತುಕತೆ ನಡೆಸಿದ ಬಳಿಕ ಅವರು ಮಾತನಾಡಿದ್ದಾರೆ. ಇದೇ ವೇಳೆ ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ಗೆ ಪರಮಾಣು ನಿಶ್ಶಸ್ತ್ರೀಕರಣವನ್ನು ತ್ವರಿತವಾಗಿ ಕೈಗೆತ್ತಿಕೊಳ್ಳಬೇಕು ಎಂಬ ವಿಚಾರವೂ ಗೊತ್ತಿದೆ ಎಂದಿದ್ದಾರೆ. ಅದು ಪೂರ್ತಿಯಾಗುವ ವರೆಗೆ ದಿಗ್ಬಂಧನದಿಂದ ಮುಕ್ತಿ ಇಲ್ಲ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next