Advertisement

ಬೆಂಗಳೂರು, ಮಂಗಳೂರಿಗೆ ಮಾಲಿನ್ಯದ ಮಸಿ

10:42 PM Jan 27, 2022 | Team Udayavani |

ಬೆಂಗಳೂರು:  ಕೊರೊನಾ ನಡುವೆಯೂ ದಕ್ಷಿಣ ಭಾರತದ ಬೆಂಗಳೂರು, ಮಂಗಳೂರು ಮತ್ತು ಮೈಸೂರು ಸಹಿತ 10 ನಗರಗಳಲ್ಲಿ ಹೆಚ್ಚಿನ ಮಾಲಿನ್ಯ ಕಂಡುಬಂದಿದೆ ಎಂದು ವರದಿಯೊಂದು ಆತಂಕಕಾರಿ ಮಾಹಿತಿ ನೀಡಿದೆ.

Advertisement

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ 2020ರ ನವೆಂಬರ್‌ 20ರಿಂದ 2021ರ ನವೆಂಬರ್‌ 20ರ ವರೆಗಿನ ದತ್ತಾಂಶಗಳ ಬಗ್ಗೆ ಅಧ್ಯಯನ ನಡೆಸಿರುವ ಗ್ರೀನ್‌ಪೀಸ್‌ ಇಂಡಿಯಾ ಈ ವರದಿ ನೀಡಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ನಿಗದಿಪಡಿಸಿರುವ ಗುಣಮಟ್ಟಕ್ಕಿಂತಲೂ ಈ ನಗರಗಳಲ್ಲಿ ಹೆಚ್ಚಿನ ಮಾಲಿನ್ಯವಿದೆ ಎಂದು ಗ್ರೀನ್‌ಪೀಸ್‌ ಇಂಡಿಯಾ ಹೇಳಿದೆ.

ಕೊಯಮತ್ತೂರು, ಬೆಂಗಳೂರು, ಮಂಗಳೂರು ಮತ್ತು ಅಮರಾವತಿಯ ಪಿಎಂ 2.5 ಮಟ್ಟ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಯಲ್ಲಿ ತಿಳಿಸಿರುವ ಮಟ್ಟಕ್ಕಿಂತ 6ರಿಂದ 7 ಪಟ್ಟು ಹೆಚ್ಚಾಗಿದೆ. ಮೈಸೂರು, ಕೊಚ್ಚಿ, ಚೆನ್ನೈ ಮತ್ತು ಪುದುಚೇರಿಯ ಪಿಎಂ 2.5 ಮಟ್ಟ  4ರಿಂದ 5 ಪಟ್ಟು ಹೆಚ್ಚಿದೆ ಎಂದು ಗ್ರೀನ್‌ಪೀಸ್‌ ವರದಿ ಹೇಳಿದೆ. ಈ ಮೂಲಕ ವಾಯುಮಾಲಿನ್ಯ ಮಟ್ಟ ಕೇವಲ ಉತ್ತರ ಭಾರತವಷ್ಟೇ ಅಲ್ಲ, ದಕ್ಷಿಣ ಭಾರತದಲ್ಲೂ ಹೆಚ್ಚಾಗಿದೆ ಎಂಬುದನ್ನು ಮನದಟ್ಟು ಮಾಡಿದೆ ಎಂದು “ಇಂಡಿಯನ್‌ ಎಕ್ಸ್‌ಪ್ರಸ್‌’ ಉಲ್ಲೇಖೀಸಿದೆ.

ಲಾಕ್‌ಡೌನ್‌ನಲ್ಲೂ ಹೆಚ್ಚು :

ವಿಚಿತ್ರವೆಂದರೆ, ಲಾಕ್‌ಡೌನ್‌ ಘೋಷಣೆ ಮಾಡಿದ್ದ ಅವಧಿಯಲ್ಲೂ 10 ನಗರಗಳಲ್ಲಿ ಪಿಎಂ 2.5 ಮತ್ತು ಪಿಎಂ 10 ವಾರ್ಷಿಕ ಮೌಲ್ಯ ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿರುವ ಮಾರ್ಗಸೂಚಿಗಿಂತ ಹೆಚ್ಚಾಗಿದೆ ಎಂದು ಈ ವರದಿ ತಿಳಿಸಿದೆ. ವಿಶಾಖಪಟ್ಟಣ, ಹೈದರಾಬಾದ್‌ಗಳಲ್ಲಿ ಮಾಲಿನ್ಯ ಆರು ಪಟ್ಟು ಹೆಚ್ಚಿದ್ದರೆ ಬೆಂಗಳೂರು, ಮಂಗಳೂರು, ಅಮರಾವತಿ, ಚೆನ್ನೈ, ಕೊಚ್ಚಿಯಲ್ಲಿ 3ರಿಂದ 4 ಪಟ್ಟು ಹೆಚ್ಚಿತ್ತು ಎಂದು ಗ್ರೀನ್‌ಪೀಸ್‌ ವರದಿ ಹೇಳಿದೆ. ಮೈಸೂರು, ಕೊಯಮತ್ತೂರು, ಪುದುಚೇರಿಯ ಮಾಲಿನ್ಯ ಪ್ರಮಾಣ ಎರಡರಿಂದ ಮೂರು ಪಟ್ಟು ಹೆಚ್ಚಾಗಿತ್ತು ಎಂದಿದೆ.

Advertisement

ಮೊದಲ 10 ಮಲಿನ ನಗರಗಳು :

  1. ಬೆಂಗಳೂರು, 2. ಹೈದರಾಬಾದ್‌,
  2. ಚೆನ್ನೈ, 4. ಅಮರಾವತಿ,
  3. ವಿಶಾಖಪಟ್ಟಣಂ, 6. ಕೊಚ್ಚಿ,
  4. ಮಂಗಳೂರು, 8. ಪುದುಚೇರಿ,
  5. ಕೊಯಮತ್ತೂರು, 10. ಮೈಸೂರು.

ಮಾಲಿನ್ಯಕ್ಕೆ ಕಾರಣವೇನು? :

ಮೂಲಸೌಕರ್ಯ ಅಭಿವೃದ್ಧಿ, ಕೈಗಾರಿಕೆಗಳು, ಸಾರಿಗೆ, ಕಸವನ್ನು ಸುಡುವುದು, ನಿರ್ಮಾಣ ಕಾಮಗಾರಿ ಅತಿಯಾದ ಮಾಲಿನ್ಯಕ್ಕೆ ಕಾರಣವಾಗಿವೆ. ಇದರಿಂದ ಅಸ್ತಮಾ, ಹುಟ್ಟುವಾಗ ಮಗುವಿನ ತೂಕ ಕಡಿಮೆ, ಖನ್ನತೆ, ಸ್ಕಿಝೋಫ್ರೀನಿಯಾ, ಸಕ್ಕರೆ ಕಾಯಿಲೆ, ಪಾರ್ಶ್ವವಾಯು, ಶ್ವಾಸಕೋಶದ ಕ್ಯಾನ್ಸರ್‌, ಅವಧಿಗಿಂತ ಮುಂಚೆಯೇ ಮಗು ಹುಟ್ಟುವ ಸಮಸ್ಯೆಗಳು ಕಾಡಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next