Advertisement

ಮರಳು ಲಾರಿಗಳಿಂದ ಮಾಲಿನ್ಯ: ಅಪಘಾತ

06:11 PM Dec 14, 2020 | Suhan S |

ತಿಪಟೂರು: ನಗರದ ಬಿ.ಎಚ್‌. ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ದೊಡ್ಡ ಲಾರಿಗಳು ಜಲ್ಲಿ ಮತ್ತು ಮರಳನ್ನು ಅಕ್ರಮವಾಗಿ ತುಂಬಿಕೊಂಡು ಹೋಗುವಾಗ ಲಾರಿಯಲ್ಲಿರುವ ಮರಳು, ಜಲ್ಲಿ ಎಲ್ಲೆಂದರಲ್ಲಿ ಚಲ್ಲಾಡಿ ಬೀಳುತ್ತಿರುವುದರಿಂದ ಹಿಂಬದಿ ವಾಹನ ಸವಾರರ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದ್ದು, ಪೊಲೀಸರು ಹಾಗೂ ಆರ್‌ಟಿಒ ಜಾಣ ಕುರುಡು ವ್ಯಕ್ತಪಡಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆಕಾರಣವಾಗಿದೆ.

Advertisement

ನಗರದ ಪ್ರಮುಖ ಬಿ.ಎಚ್‌. ರಸ್ತೆ, ಹಾಲ್ಕುರಿಕೆ, ಹಾಸನ, ತುರುವೇಕೆರೆ ರಸ್ತೆಗಳಲ್ಲಿ ಪ್ರತಿದಿನ ದೊಡ್ಡ ದೊಡ್ಡ ಟಿಪ್ಪರ್‌ ಲಾರಿ, ಟ್ರಕ್‌ಗಳಲ್ಲಿ ಅಕ್ರಮವಾಗಿ ನಾನಾಕಾಮಗಾರಿಗಳಿಗಾಗಿಜಲ್ಲಿ,ಮರಳನ್ನುಓವರ್‌ಲೋಡ್‌ಮಾಡಿಕೊಂಡು ಸಾಗಾಟ ನಡೆಸುತ್ತಿವೆ. ಆದರೆ, ಸಂಚಾರದ ವೇಳೆ ಲಾರಿಗಳಿಂದ ಮರಳು ಜಲ್ಲಿ ಚೆಲ್ಲಾಡುತ್ತಿರುವ ಕಾರಣ ರಸ್ತೆಯಲ್ಲಿ ಸಂಚರಿಸುವ ಇತರ ವಾಹನ ಸವಾರರಿಗೆ ತೊಂದರೆ ಯಾಗುತ್ತಿದೆ.

ಇಂತಹ ಲಾರಿಗಳು ಬಂದ ತಕ್ಷಣ ಬದಿಯಲ್ಲಿ ನಿಂತುನಂತರ ಸವಾರರು ಹೋಗುವಂತಾಗಿದೆ. ಇದರಿಂದ ವಾಹನ ಚಲಾಯಿಸಲಾಗದೆ ಎಷ್ಟೋ ಅಪಘಾತಗಳು ನಡೆಯುತ್ತಿವೆ. ಅಲ್ಲದೆ ಲಾರಿಗಳಲ್ಲಿರುವ ಜಲ್ಲಿ ಕಲ್ಲು ರಸ್ತೆಯುದ್ದಕ್ಕೂ ಚೆಲ್ಲುವುದರಿಂದ ವಾಹನಗಳು ಆಯಾತಪ್ಪಿ ಬಿದ್ದಿರುವ ನಿದರ್ಶನಗಳೂ ಹೆಚ್ಚಿವೆ.

ಕಿತ್ತು ಬರುತ್ತಿರುವ ಡಾಂಬರು :  ನಿಗದಿತ ಪ್ರಮಾಣಕ್ಕಿಂತ ಹೆಚ್ಚು ತೂಕದ ಮರಳು, ಜಲ್ಲಿಹಾಕಿಕೊಂಡು ಓಡಾಡುತ್ತಿರುವ ಲಾರಿಗಳಿಂದ ಚನ್ನಾಗಿರುವ ರಸ್ತೆಗಳೆಲ್ಲಾ ಕಿತ್ತು ಹಾಳಾಗುತ್ತಿವೆ. ಡಾಂಬರು ಹಾಳಾದ ತಕ್ಷಣವೇ ರಸ್ತೆಗಳೆಲ್ಲಾ ಗುಂಡಿ ಬೀಳಿತ್ತಿದ್ದರೂ ಪೊಲೀಸರು ಹಾಗೂ ಆರ್‌ಟಿಒ ಮತ್ತು ನ್ಯಾಷನಲ್‌ ಹೈವೇ ಪ್ರಾಧಿಕಾರ ಯಾವುದೇಕ್ರಮ ಜರುಗಿಸದೆ ಲಾರಿಯವರಿಗೇ ಸಹಕಾರ ನೀಡುತ್ತಿದ್ದಾರೆಂಬುದು ಸವಾರರ ಹಾಗೂ ಸಾರ್ವಜನಿಕರ ಆಕ್ರೋಶಕ್ಕೆಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next