Advertisement

ಚಿತ್ರೀಕರಣಕ್ಕೆ ಅವಕಾಶ ನೀಡದಿರಲು ಪಾಲಿಕೆ ಚಿಂತನೆ

11:48 AM Nov 10, 2018 | Team Udayavani |

ಬೆಂಗಳೂರು: ತಮಿಳಿನ ಇಮೈಕ ನೋಡಿಗಳ್‌ ಸಿನೆಮಾ ಚಿತ್ರೀಕರಣಕ್ಕೆ ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಅವಕಾಶ ನೀಡಿರುವುದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆ ಮುಂದಿನ ದಿನಗಳಲ್ಲಿ ಸಿನಿಮಾ ಶೂಟಿಂಗ್‌ಗೆ ಅವಕಾಶ ನೀಡದಿರಲು ಪಾಲಿಕೆ ಚಿಂತನೆ ನಡೆಸಿದೆ. 

Advertisement

ಇಮೈಕ್‌ ನೋಡಿಗಳ್‌ ಚಿತ್ರಕ್ಕೆ ಪಾಲಿಕೆ ಕಚೇರಿ ಮತ್ತು ಮೆಟ್ರೋ ನಿಲ್ದಾಣಗಳಲ್ಲಿ ಅನುಮತಿ ಇಲ್ಲದೆ ಅವಕಾಶ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ವಿಚಾರವನ್ನು ಶಾಸಕ ಸುರೇಶ್‌ಕುಮಾರ್‌ ಟ್ವಿಟ್ಟರ್‌ನಲ್ಲಿಯೂ ಪ್ರಸ್ತಾಪಿಸಿದ್ದರು. 

ಈ ಕುರಿತು ಪ್ರತಿಕ್ರಿಯಿಸಿದ ಮೇಯರ್‌ ಗಂಗಾಬಿಕೆ, ಪಾಲಿಕೆ ಕಚೇರಿಯನ್ನು ಚಿತ್ರೀಕರಣಕ್ಕೆ ಅವಕಾಶ ನೀಡಿರುವುದು ವಿವಾದಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಬಿಬಿಎಂಪಿ ಕೇಂದ್ರ ಕಚೇರಿಯನ್ನು ಯಾವುದೇ ಸಿನಿಮಾ ಚಿತ್ರೀಕರಣಕ್ಕೂ ಅವಕಾಶ ನೀಡದಿರುವ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದಿದ್ದಾರೆ. 

ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್‌ ಮಾತನಾಡಿ, ಸಿನಿಮಾ ಬೆಳವಣಿಗೆ ದೃಷ್ಟಿಯಿಂದ ಶುಲ್ಕ ಪಡೆದು ಅವಕಾಶ ನೀಡಲಾಗಿತ್ತು. ಜತೆಗೆ ನಗರದ ಪ್ರಮುಖ ರಸ್ತೆ, ಮೇಲ್ಸೇತುವೆ, ಪಾದಾಚಾರಿ ಸುರಂಗ ಮಾರ್ಗಗಳು, ಪುರಭವನ, ಸ್ಮಶಾನ, ಪಾಲಿಕೆ ಕಟ್ಟಡಗಳಲ್ಲಿ ಚಿತ್ರೀಕರಣಕ್ಕೂ ಅನುಮತಿ ನೀಡಲಾಗುತ್ತಿದೆ.

ಇನ್ನು ಅದೇ ರೀತಿ ಇಮೈಕ ನೋಡಿಗಳ್‌ ಚಿತ್ರಕ್ಕೂ ವಾರ್ತಾ ಇಲಾಖೆಯ ಪತ್ರ ಹಾಗೂ ಬಿಬಿಎಂಪಿಯ ಎಂಪಿಇಡಿ ಶಾಖೆಯಿಂದ ಅನುಮತಿ ನೀಡಲಾಗಿತ್ತು. ಆದರೆ, ಸಾಮಾಜಿಕ ಜಾಲತಾಣ ಅನಧಿಕೃತವಾಗಿ ಶೂಟಿಂಗ್‌ ಎಂದು ತಪ್ಪು ಮಾಹಿತಿ ಪ್ರಸಾರವಾಗಿದೆ ಎಂದು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next