Advertisement

6ನೇ ಹಂತ: ಬಂಗಾಲದಲ್ಲಿ ಮತ್ತೆ ಹಿಂಸೆ

02:54 AM May 13, 2019 | Team Udayavani |

ಹೊಸದಿಲ್ಲಿ: ಪ್ರತಿ ಹಂತದಂತೆ ಆರನೇ ಹಂತದ ಚುನಾವಣೆಯಲ್ಲೂ ಪಶ್ಚಿಮ ಬಂಗಾಲದಲ್ಲಿ ಹಿಂಸೆ ಮುಂದುವರಿದಿದ್ದು, ತೃಣಮೂಲ ಕಾಂಗ್ರೆಸ್‌ ಬೆಂಬಲಿಗರು ಬಿಜೆಪಿ ಅಭ್ಯರ್ಥಿ ಮೇಲೆ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ.

Advertisement

ಕೇಶ್‌ಪುರದಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಸಿಬಂದಿ ಮೇಲೆ ಟಿಎಂಸಿ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದರೆ, ಬಂಕುರಾದಲ್ಲಿ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರು ಕೈಕೈ ಮಿಲಾಯಿಸಿದ್ದಾರೆ. ಬಿಹಾರದಲ್ಲಿ ಗೃಹರಕ್ಷಕ ಸಿಬಂದಿಯೊಬ್ಬರ ಬಂದೂಕಿನಿಂದ ಅಚಾತುರ್ಯವಾಗಿ ಗುಂಡು ಹಾರಿದ ಪರಿಣಾಮ, ಮತಗಟ್ಟೆ ಸಿಬಂದಿ ಅಸುನೀಗಿದ ಘಟನೆ ಸಂಭವಿಸಿದೆ.

ಒಟ್ಟು 7 ಹಂತಗಳ ಪೈಕಿ 6ನೇ ಹಂತದ ಮತದಾನವು ರವಿವಾರ ಮುಕ್ತಾಯಗೊಂಡಿದ್ದು, ದಿಲ್ಲಿ ಸಹಿತ 7 ರಾಜ್ಯಗಳ 59 ಕ್ಷೇತ್ರಗಳಿಗೆ ಮತದಾನ ನಡೆದಿದೆ. ಈ ಹಂತದಲ್ಲಿ ಒಟ್ಟಾರೆ ಶೇ.63.3ರಷ್ಟು ಮತದಾನ ದಾಖಲಾಗಿದೆ.

ಪಶ್ಚಿಮ ಬಂಗಾಲದ ಬಿಜೆಪಿ ಅಭ್ಯರ್ಥಿ, ಮಾಜಿ ಐಪಿಎಸ್‌ ಅಧಿಕಾರಿ ಭಾರ್ತಿ ಘೋಷ್‌ ಮೇಲೆ ತೃಣಮೂಲ ಕಾಂಗ್ರೆಸ್‌ನ ಬೆಂಬಲಿಗರಿಂದ ಹಲ್ಲೆ ನಡೆದಿದೆ. ಕೇಶ್‌ಪುರ ಮತಗಟ್ಟೆಯಲ್ಲಿ ಚುನಾವಣ ಅಕ್ರಮ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ಭಾರ್ತಿ ಘೋಷ್‌ ಅಲ್ಲಿಗೆ ಧಾವಿಸಿದಾಗ, ಟಿಎಂಸಿ ಕಾರ್ಯಕರ್ತರು ಏಕಾಏಕಿ ಘೋಷ್‌ ಅವರ ಬೆಂಗಾವಲು ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿ, ಬಾಂಬ್‌ ಎಸೆದಿದ್ದಾರೆ. ಜತೆಗೆ ಘೋಷ್‌ ಮೇಲೆ ಹಲ್ಲೆಯನ್ನೂ ನಡೆಸಿ, ಅಟ್ಟಾಡಿಸಲಾಗಿದೆ. ಕೊನೆಗೆ ತಾನು ದೇವಸ್ಥಾನವೊಂದರಲ್ಲಿ ಆಶ್ರಯ ಪಡೆದಿದ್ದಾಗಿ ಘೋಷ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next