Advertisement
ಅರುಣಾಚಲ ಪ್ರದೇಶದ ಚೀನಾ ಗಡಿ ಭಾಗದ ಸಮೀಪದಲ್ಲಿರುವ ಮಲಗೋಮ್ ಗ್ರಾಮದ ನಿವಾಸಿ 44 ರ ವಯಸ್ಸಿನ ಶೋಕೆಲಾ ತಯಾಂಗ್ ಎಂಬ ಮಹಿಳೆಯ 1 ವೋಟಿಗಾಗಿ ಬೆಟ್ಟ ಗುಡ್ಡ ಹತ್ತಿ ಚುನಾವಣಾಧಿಕಾರಿಗಳು ಬೂತ್ ನಿರ್ಮಿಸಲಿದ್ದಾರೆ. ಅಲ್ಲಿ ಇರುವ ಕೆಲವು ಕುಟುಂಬಗಳು ಈಗಾಗಲೇ ಬೇರೆ ಬೂತ್‌ಗಳಲ್ಲಿ ನೋಂದಾಯಿಸಿಕೊಂಡಿದ್ದಾರೆ. ಆದರೆ, ಶೋಕೆಲಾ ಮಾತ್ರ ತಾನು ಬೇರೆಡೆ ತೆರಳಿ ಮತ ಚಲಾಯಿಸಲು ನಿರಾಕರಿಸಿದ್ದಾರೆ. ಈ ಕಾರಣಕ್ಕಾಗಿ ಅಲ್ಲಿಗೆ ಚುನಾವಣಾಧಿಕಾರಿಗಳು ಅಲ್ಲಿಗೆ ತೆರಳಲಿದ್ದಾರೆ. ಏ.19ರಂದು ಅಲ್ಲಿ ಲೋಕಸಭೆ, ವಿಧಾನಸಭೆಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆಮತದಾರರು ಒಬ್ಬರೇ ಆಗಿದ್ದರೂ ಅವರು ಹಕ್ಕು ಚಲಾಯಿಸುವುದನ್ನು ಖಾತರಿಪಡಿಸಿಕೊಳ್ಳುವುದೇ ನಮ್ಮ ಕರ್ತವ್ಯ ಎಂದು ಮುಖ್ಯ ಚುನಾವಣೆ ಅಧಿಕಾರಿ ಪವನ್ ಕುಮಾರ್ ಸೈನ್ ಹೇಳಿದ್ದಾರೆ.