Advertisement

ಪೊಲ್ಲಾರು ಕಿಂಡಿ ಅಣೆಕಟ್ಟು ಬೇಡಿಕೆ, ಅನುದಾನ ಕೊರತೆ

09:19 PM Jan 27, 2021 | Team Udayavani |

ಕಾರ್ಕಳ: ಭೂ ಸಂರಕ್ಷಣೆ ಮತ್ತು ಅಂತರ್ಜಲ ವೃದ್ಧಿಯ ದೃಷ್ಟಿಯಿಂದ ಪೊಳ್ಳಾರು ನದಿಗೆ ಅಡ್ಡಲಾಗಿ ಸಣ್ಣ  ಕಿಂಡಿ ಅಣೆಕಟ್ಟು  ನಿರ್ಮಾಣ ಬೇಡಿಕೆಯಿದೆ. ಅನುದಾನ ಕೊರತೆಯಿಂದ ಬೇಡಿಕೆ ಈಡೇರುತಿಲ್ಲ.

Advertisement

ಹಳ್ಳ  ಹಿಡಿದಿದೆ ಯೋಜನೆ :

ಕಾರ್ಕಳ ತಾ|ನ ಕಸಬಾದ  ಕುಂಬ್ರಪದವು ಎಂಬಲ್ಲಿ  ಹರಿಯುವ ಪೊಲ್ಲಾರ್‌ ನದಿಗೆ ಅಡ್ಡಲಾಗಿ ಸಣ್ಣ ಕಿಂಡಿ ಅಣೆಕಟ್ಟು ನಿರ್ಮಿಸಬೇಕಿರುವುದು. ದಶಕಗಳಿಗೂ ಅಧಿಕ ವರ್ಷಗಳಿಂದ ಬೇಡಿಕೆಯಿದೆ. ಸಂಬಂಧಪಟ್ಟ  ಇಲಾಖೆ, ಜನಪ್ರತಿನಿಧಿಗಳಿಗೆ ಪತ್ರ ಮನವಿ ಮಾಡಿಕೊಳ್ಳುತ್ತ ಬಂದಿದ್ದರೂ ಸಾಧ್ಯವಾಗದೆ  ಯೋಜನೆ ಹಳ್ಳ ಹಿಡಿದಿದೆ

ಕಲ್ಲುಗಳ ತಡೆಗೋಡೆ ಈಗಲೂ ಇದೆ :

ಇಲ್ಲಿಯವರು ಪೂರ್ವದಿಂದಲೂ ಕೃಷಿ, ಬೇಸಾಯ, ತೋಟಗಾರಿಕೆ, ತರಕಾರಿ ಬೆಳೆಗಳನ್ನು ಬೆಳೆಯುತ್ತಿದ್ದವರು. ತೋಡಿಗೆ ಅಣೆಕಟ್ಟುಗಳನ್ನು  ಸಾಂಪ್ರದಾಯಿಕವಾಗಿ ನಿರ್ಮಿಸಿಕೊಳ್ಳುತ್ತಿದ್ದರು. ಬೇಸಗೆಯ ನೀರಿನ ಅಭಾವ ನೀಗುತ್ತಿತ್ತು. ಹರಿವಿಗೆ ಅಡ್ಡಲಾಗಿ ಕಲ್ಲಿನ ತಡೆಗೋಡೆಗಳನ್ನು ಕಟ್ಟಿ ನೀರು ಇಂಗಿಸುತ್ತಿದ್ದುದಕ್ಕೆ  ಆಧಾರವಾಗಿ ಕಲ್ಲಿನ ತಡೆಗೋಡೆಗಳು ಈಗಲೂ ಅಲ್ಲಿವೆ.

Advertisement

ಆರಣ್ಯವಾಗುವ ಪೂರ್ವದಲ್ಲೇ ಇತ್ತು :

ಮೀಸಲು ಅರಣ್ಯ ಆಗುವ ಪೂರ್ವದಲ್ಲೇ ಪೊಲ್ಲಾರು ತೋಡಿಗೆ ಕಲ್ಲು ಮತ್ತು ಮಣ್ಣಿನಿಂದ ಚೆಕ್‌ ಡ್ಯಾಮ್‌ ನಿರ್ಮಾಣ ಮಾಡುತ್ತಿದ್ದರು. 100ಕ್ಕೂ ಅಧಿಕ ವರ್ಷಗಳಿಮದ ನಡೆಯುತ್ತಿತ್ತು. ನೀರು ಸಂಗ್ರಹವಾಗಿ, ಅಂತರ್ಜಲ ಹೆಚ್ಚಳವಾಗುತ್ತಿತ್ತು. ಪ್ರಾಣಿ ಪಕ್ಷಿಗಳಿಗೆ  ಕುಡಿಯಲು ನೀರು ಸಿಗುತ್ತಿತ್ತು. ವ್ಯವಸಾಯಕ್ಕೆ  ಅನುಕೂಲವಾಗುತ್ತಿತ್ತು.

ಪತ್ರಗಳ ಮೇಲೆ ಪತ್ರಗಳ ರವಾನೆ :

ಅಣೆಕಟ್ಟು ನಿರ್ಮಿಸುವಂತೆ  ಸ್ಥಳಿಯ ನಿವಾಸಿ  ಮೈಪಾಲ ಸಂತೋಷ್‌ ವಿ. ಕೋಟ್ಯಾನ್‌ ಅವರು ಪ್ರಧಾನ ಮಂತ್ರಿ, ಮಖ್ಯ ಮಂತ್ರಿ, ಅರಣ್ಯ ಮಂತ್ರಿ, ಜಿಲ್ಲಾಧಿಕಾರಿ, ಪುರಸಭೆ, ಸಂಸದೆ,  ಸಹಿತ ಎಲ್ಲ ಸಂಬಂಧಪಟ್ಟ ಇಲಾಖೆ, ಜನಪ್ರತಿನಿಧಿಗಳಿಗೆ  ಸಾಕಷ್ಟು ಮನವಿಗಳನ್ನು ಸಲ್ಲಿಸಿದ್ದರು. ಅವರು ಮಾಡಿರುವ ಮನವಿಗೆ ಲೆಕ್ಕವೇ ಇಲ್ಲ.  2017ರಲ್ಲಿ ಬರೆದ ಪತ್ರಕ್ಕೆ ಪ್ರಧಾನಿ ಕಚೇರಿಯಿಂದ ಸರಕಾರದ ಮುಖ್ಯ ಕಾರ್ಯ ದ ರ್ಶಿಗೆ ಕೂಡಲೇ ಕ್ರಮಕ್ಕೆ  ಸೂಚನೆಯು ಬಂದಿತ್ತು. ಅರಣ್ಯ ಇಲಾಖೆ, ನೀರಾವರಿ  ಇಲಾಖೆ ಅಧಿಕಾರಿಗಳು  ಸ್ಥಳ  ಪರಿಶೀಲಿಸಿದ್ದರು. ಆದರೆ ಯಾವ ಪ್ರಯೋಜನವೂ ಆಗಿಲ್ಲ.  ಜನಪ್ರತಿನಿಧಿಗಳ  ಇಚ್ಚಾಶಕ್ತಿ ಕೊರತೆಯೇ  ಇದಕ್ಕೆ ಕಾರಣ ಎನ್ನುತ್ತಾರೆ ಮನವಿದಾರರು.

ಒಪ್ಪಿಗೆ ಇದೆ ಅನುದಾನವಿಲ್ಲ :

ಪ್ರಸ್ತಾವಿತ ಜಾಗವು  ಕುಂಬ್ರ ಪದವು ಬ್ಲಾಕಿನ ಮೀಸಲು ಅರಣ್ಯ ವ್ಯಾಪ್ತಿಯಲ್ಲಿದೆ. ಕರಾವಳಿ ಪ್ರಾಧಿ ಕಾರದ ಕ್ರಿಯಾ ಯೋಜನೆ ಸಹಿತ ಇತರೆ ಯಾವುದೇ ಯೋಜನೆಯಡಿ  ಪ್ರಸ್ತಾವಿತ ಕಿಂಡಿ ಅಣೆಕಟ್ಟು ಸೇರ್ಪಡೆಗೊಂಡಿಲ್ಲ. ಅರಣ್ಯ ಇಲಾಖೆಯಿಂದ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಒಪ್ಪಿಗೆಯಿದೆ. ಆದರೇ  ಅನುದಾನವಿಲ್ಲ. 2019-20ರಲ್ಲಿ  ಕುಂದಾಪುರ  ಉಪ ಅರಣ್ಯ  ಸಂರಕ್ಷಣಾಧಿಕಾರಿ ಸ್ಥಳ ತನಿಖೆ ನಡೆಸಿ  ವರದಿ  ಸಲ್ಲಿಸಿದ್ದಾರೆ. ವರದಿಯಲ್ಲಿ   ಸದ್ರಿ ಸ್ಥಳದಲ್ಲಿ  ಡ್ಯಾಂ ನಿರ್ಮಾಣ ಮಾಡುವುದರಿಂದ  ಅರಣ್ಯಕ್ಕೆ  ಯಾವುದೇ ಹಾನಿ ಇಲ್ಲ  ಎನ್ನುವ   ಅಂಶವನ್ನು ಸ್ಪಷ್ಟ  ಪಡಿಸಿದ್ದಾರೆ. ಅರಣ್ಯಾ ಇಲಾಖೆಗೆ 6.25 ಲಕ್ಷ  ರೂ. ಅನುದಾನವನ್ನು ಯಾವುದಾದರೂ ಯೋಜನೆಯಲ್ಲಿ ನೀಡಿದಲ್ಲಿ  ಅಣೆಕಟ್ಟು  ನಿರ್ಮಿಸಲು  ಅದು ಸಿದ್ಧವಿದೆ.

 ನಿರ್ಮಾಣವಾದರೆ ಏನೆಲ್ಲ ಲಾಭ? :

ಅಣೆಕಟ್ಟು  ನಿರ್ಮಾಣಗೊಂಡಲ್ಲಿ  ಪರಿಸರದಲ್ಲಿ ಅಂತರ್ಜಲ ಮಟ್ಟ ಏರಿಕೆಯಾಗುತ್ತದೆ. ಪರಿಸರದ 60-70 ಮನೆಗಳ ಬಾವಿಗಳಲ್ಲಿ ನೀರಿನ ಮಟ್ಟ ಏರುತ್ತದೆ. ಬೇಸಗೆಯಲ್ಲಿ ಬಟ್ಟೆ ಒಗೆಯಲು,  ಜಾನುವಾರು ಮತ್ತು ಕಾಡು ಪ್ರಾಣಿಗಳಿಗೆ ನೀರಿನ ಆಶ್ರಯವಾಗಿ ಬಹು ಉಪಯೋಗವಿದೆ. ಕೃಷಿ,  ಚಟುವಟಿಕೆಗಳಿಗೆ ಅನುಕೂಲವಾಗಲಿದೆ. ಅಣೆಕಟ್ಟು ನಿರ್ಮಾಣಗೊಂಡಲ್ಲಿ ನೀರಿನ ತಾಪತ್ರಯಕ್ಕೂ ಪರಿಹಾರ ಸಿಗುತ್ತದೆ.

ವಾರ್ಷಿಕವಾಗಿ ಎರಡು ವ್ಯವಸಾಯಕ್ಕೆ  ಸಾಕಾಗುವಷ್ಟು ನೀರು  ಸಿಗುತ್ತಿತ್ತು. ನಮ್ಮ ಹಿರಿಯರು ಇಲ್ಲಿ ಕಟ್ಟ ಕಟ್ಟಿ ನೀರು ಇಂಗಿಸುತ್ತಿದ್ದರು. ಇಲ್ಲಿ ಅಣೆಕಟ್ಟು ನಿರ್ಮಾಣವಾದಲ್ಲಿ 60ಕ್ಕೂ ಅಧಿಕ ಮನೆಗಳಿಗೆ ಲಾಭವಿದೆ. -ವಿಟ್ಠಲ ಶೆಟ್ಟಿ  ಪೊಳ್ಳಾರು,  ಸ್ಥಳೀಯ ಕೃಷಿಕ

ವಾರ್ಷಿಕವಾಗಿ ಎರಡು ವ್ಯವಸಾಯಕ್ಕೆ  ಸಾಕಾಗುವಷ್ಟು ನೀರು  ಸಿಗುತ್ತಿತ್ತು. ನಮ್ಮ ಹಿರಿಯರು ಇಲ್ಲಿ ಕಟ್ಟ ಕಟ್ಟಿ ನೀರು ಇಂಗಿಸುತ್ತಿದ್ದರು. ಇಲ್ಲಿ ಅಣೆಕಟ್ಟು ನಿರ್ಮಾಣವಾದಲ್ಲಿ 60ಕ್ಕೂ ಅಧಿಕ ಮನೆಗಳಿಗೆ ಲಾಭವಿದೆ. -ವಿಟuಲ ಶೆಟ್ಟಿ  ಪೊಳ್ಳಾರು,  ಸ್ಥಳಿಯ ಕೃಷಿಕ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಅರಣ್ಯ ಇಲಾಖೆ ಸಿದ್ಧವಿದೆ. ಯಾವುದೇ ಯೋಜನೆಯಲ್ಲಿ ಹಣ ನೀಡಿದರೂ ನಿರ್ಮಿಸಿ ಕೊಡುತ್ತೇವೆ. -ದಿನೇಶ್‌ ಆರ್‌ಎಫ್ಒ, ಕಾರ್ಕಳ

 

 ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next