Advertisement

6ರ ಪೋರ ಚುನಾವಣಾ ರಾಯಭಾರಿ

07:00 AM Apr 11, 2018 | Team Udayavani |

ಶಿವಮೊಗ್ಗ: ಇಲ್ಲಿನ ವಿನೋಬ ನಗರ ನಿವಾಸಿ, ಒಂದನೇ ತರಗತಿ ಓದುತ್ತಿರುವ ಆರು ವರ್ಷದ ಪೋರ, ಇಂದ್ರಜಿತ್‌ ಒಂದೇ ಉಸಿರಿನಲ್ಲಿ ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳ ಹೆಸರನ್ನು ಕ್ರಮಬದ್ಧವಾಗಿ ಹೇಳುತ್ತಾ ಎಲ್ಲರನ್ನು ನಿಬ್ಬೆರಗಾಗಿಸುತ್ತಾನೆ. ಈ ಕಾರಣಕ್ಕಾಗಿಯೇ ಬಾಲಕ ಚುನಾವಣಾ ರಾಯಭಾರಿಯಾಗಿ ನೇಮಕಗೊಂಡಿದ್ದಾನೆ.

Advertisement

ರಾಜ್ಯದ ಎಲ್ಲಾ 224 ಕ್ಷೇತ್ರಗಳನ್ನು ಯಾವುದೇ ತಪ್ಪಿಲ್ಲದಂತೆ ಹೇಳುವ ಈತನ ಬುದ್ಧಿಮತ್ತೆ ಕಂಡು ಜಿಲ್ಲಾಡಳಿತ ಬಾಲಕನನ್ನು 
ಚುನಾವಣಾ ರಾಯಭಾರಿಯಾಗಿ ನೇಮಿಸಿದೆ. ಮಂಗಳವಾರ ಜಿಲ್ಲಾಧಿಕಾರಿ ಡಾ| ಎಂ.ಲೋಕೇಶ್‌, ಜಿಲ್ಲೆಯ ಚುನಾವಣಾ
ಜಾಗೃತಿ ಅಭಿಯಾನದ ಐಕಾನ್‌ ಆಗಿ ಬಾಲಕ ಇಂದ್ರಜಿತ್‌ನನ್ನು ಘೋಷಿಸಿದರು. ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಹೆಸರನ್ನು ನೆನಪಿಟ್ಟುಕೊಂಡು ತಪ್ಪಿಲ್ಲದಂತೆ ಹೇಳುವ ಪುಟ್ಟ ಬಾಲಕ ಪ್ರತಿಯೊಬ್ಬರಿಗೂ ಮಾದರಿಯಾಗಿದ್ದಾನೆ. ಮತದಾರರ ಜಾಗೃತಿ ಐಕಾನ್‌ ಆಗಿ ಈ ಬಾಲಕನನ್ನು ಆಯ್ಕೆ ಮಾಡಲಾಗಿದೆ. ಪ್ರತಿಯೊಬ್ಬರೂ ಮತಗಟ್ಟೆಗೆ ಬಂದು ತಪ್ಪದೇ ಮತ ಚಲಾಯಿಸಲು ಬಾಲಕ ಸ್ಫೂರ್ತಿಯಾಗಲಿ ಎಂದು ಹೇಳಿದರು. ಬಾಲಕನ ಕುರಿತಾದ ವಿಡಿಯೋ ಚಿತ್ರೀಕರಣ ಮಾಡಲಾಗಿದ್ದು, ಅದನ್ನು ಡೆಪ್ಯುಟಿ ಕಮಿಷನರ್‌ ಶಿವಮೊಗ್ಗ ಫೇಸ್‌ಬುಕ್‌ ಪೇಜ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಕೇಶ್‌ ಕುಮಾರ್‌ ತಿಳಿಸಿದರು.

ಕಳೆದ ಕೆಲ ತಿಂಗಳಿಂದ ನನ್ನ ಮಗನಿಗೆ ವಿಧಾನಸಭಾ ಕ್ಷೇತ್ರಗಳ ಹೆಸರನ್ನು ಕಲಿಸಲು ಆರಂಭಿಸಿದೆ. ಆತ ಉತ್ಸಾಹದಿಂದ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಹೆಸರನ್ನು ಕಂಠಪಾಠ ಮಾಡಿದ್ದಾನೆ. ಈತ ಎಲ್ಲರಿಗೂ ಸ್ಫೂರ್ತಿಯಾಗಿ ಪ್ರತಿಯೊಬ್ಬರು ಮತದಾನದಲ್ಲಿ ಭಾಗವಹಿಸು ವಂತಾಗಬೇಕು ಎಂಬುದು ನಮ್ಮ ಅಭಿಲಾಷೆ.
● ಶಿವಕುಮಾರ್‌, ಬಾಲಕನ ತಂದೆ, ಕೋಣೆಹೊಸೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ.

Advertisement

Udayavani is now on Telegram. Click here to join our channel and stay updated with the latest news.

Next