Advertisement

Politics: “ಕುಟುಂಬಕ್ಕೆ ಒತ್ತು ನೀಡಿದ್ದ UPA”: ಕಾಂಗ್ರೆಸ್‌ ವಿರುದ್ಧ ನಿರ್ಮಲಾ ಆಕ್ರೋಶ

11:53 PM Feb 09, 2024 | Team Udayavani |

ಹೊಸದಿಲ್ಲಿ: ಕಾಂಗ್ರೆಸ್‌ ನೇತೃತ್ವದ ಯುಪಿಎ ಸರಕಾರ ಕುಟುಂಬಕ್ಕೇ ಹೆಚ್ಚಿನ ಆದ್ಯತೆ ನೀಡಿತ್ತು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾ ರಾಮನ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲೋಕಸಭೆ ಯಲ್ಲಿ ಎನ್‌ಡಿಎ ಮತ್ತು ಯುಪಿಎ ಸರಕಾರದ ಅವಧಿಯ ಅರ್ಥ ವ್ಯವಸ್ಥೆಯ ಸಾಧನೆಗಳ ಬಗ್ಗೆ ಗುರುವಾರ ಮಂಡಿಸಲಾಗಿದ್ದ ಶ್ವೇತಪತ್ರದ ಬಗ್ಗೆ ಚರ್ಚೆಯನ್ನು ಆರಂಭಿಸಿ ಅವರು ಮಾತನಾಡಿದರು.

Advertisement

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ದೇಶವೇ ಮೊದಲು ಎಂಬ ನಿಲುವು ಅನುಸರಿಸಿತು. ಹೀಗಾಗಿಯೇ 10 ವರ್ಷಗಳಲ್ಲಿ ಅರ್ಥ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಕೈಗೊಂಡ ಕಠಿಣ ಕ್ರಮಗಳಿಂದಾಗಿ ಜಗತ್ತಿನ ಐದು ಬಲಿಷ್ಠ ಅರ್ಥ ವ್ಯವಸ್ಥೆಗಳಲ್ಲಿ ಒಂದಾಗಿ ಈಗ ಹೊರಹೊಮ್ಮಿದೆ. ಶೀಘ್ರದಲ್ಲಿಯೇ ನಮ್ಮ ದೇಶ 3ನೇ ಅತ್ಯಂತ ಬಲಿಷ್ಠ ಆರ್ಥಿಕ ಶಕ್ತಿ ಯಾಗಿ ಹೊರಹೊಮ್ಮಲಿದೆ ಎಂದರು.

ಕಾಂಗ್ರೆಸ್‌ ನೇತೃತ್ವದ ಪ್ರತಿಪಕ್ಷಗಳ ಸದಸ್ಯರ ಬಿರುಸಿನ ಆಕ್ರೋಶದ ಘೋಷ ಣೆಗಳ ನಡುವೆಯೇ ಮಾತನಾಡಿದ ಕೇಂದ್ರ ವಿತ್ತ ಸಚಿವೆ, “ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ದೇಶದ ಕಳೆದುಕೊಂಡಿದ್ದ ಘನತೆಯನ್ನು ಮತ್ತೆ ಪುನಃಸ್ಥಾಪಿಸಿದೆ ಎಂಬ ಅಂಶವನ್ನು ಯುವ ಜನತೆ ಅರಿಯಬೇಕು” ಎಂದರು. 10 ವರ್ಷಗಳ ಕಾಲ ಒಂದು ಪಕ್ಷದ ನೇತೃತ್ವದ ಸರಕಾರ ನಡೆಸಿದ ಹಗರಣಗಳು ಮತ್ತು 10 ವರ್ಷಗಳ ಕಾಲ ಪ್ರಧಾನಿ ಮೋದಿ ನೇತೃತ್ವದ ಸರಕಾರ ನಡೆಸಿದ ಸಾಧನೆಯ ಅಂಶ ಗಳನ್ನು ಶ್ವೇತಪತ್ರದ ಮೂಲಕ ದೇಶದ ಮುಂದೆ ಇರಿಸಲಾಗಿದೆ” ಎಂದು ಘೋಷಿಸಿದರು.

ಜತನದಿಂದ ನಿರ್ವಹಣೆ: ಕಾಂಗ್ರೆಸ್‌ ನೇತೃತ್ವದ ಯುಪಿಎ ಸರಕಾರಕ್ಕೆ ಕುಟುಂಬವೇ ಆದ್ಯತೆಯಾಗಿತ್ತು. ಆದರೆ, ನರೇಂದ್ರ ಮೋದಿ ನೇತೃತ್ವದ ಸರಕಾರಕ್ಕೆ ದೇಶವೇ ಆದ್ಯತೆಯಾಗಿತ್ತು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಘೋಷಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next