Advertisement

Politics: ರಾಜಕೀಯ ಪಕ್ಷಗಳು,ರಾಜಕಾರಣಿಗಳು ಯಾವುದೇ ಧರ್ಮದ ವಕ್ತಾರರಲ್ಲ- ಡಾ.H.C. ಮಹಾದೇವಪ್ಪ

08:07 PM Feb 04, 2024 | Pranav MS |

ಕುಷ್ಟಗಿ: ರಾಜಕೀಯ ಪಕ್ಷಗಳು ಹಾಗೂ ರಾಜಕಾರಣಿಗಳು ಯಾವೂದೇ ಧರ್ಮದ ವಕ್ತಾರ ಅಲ್ಲ ಸಂವಿಧಾನದ ಅಡಿಯಲ್ಲಿ ಕೆಲಸ ಮಾಡಬೇಕು ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹಾದೇವಪ್ಪ ಹೇಳಿದರು.

Advertisement

ತಾಲೂಕಿನ ಹೂಲಗೇರಾ ಗ್ರಾಮದಲ್ಲಿ ಪ್ರಭುತ್ವ ಶಿಕ್ಷಣ ಸಂಸ್ಥೆ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಕುಷ್ಟಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಧರ್ಮ ಹಾಗೂ ಧರ್ಮಾಚರಣೆಗೆ ಜನರ ವಿವೇಚನೆಯ ಅಧಿಕಾರವನ್ನು ಸಂವಿಧಾನ ಕೊಟ್ಟಿರುವಾಗ ಇದನ್ನು ಬಿಟ್ಟು ರಾಜಕೀಯ ಪಕ್ಷಗಳು ಹಾಗೂ ರಾಜಕಾರಣಿಗಳು ಧರ್ಮದ ಪರ ನಿಲುವು ವ್ಯಕ್ತಪಡಿಸಿದರೆ ಏನರ್ಥ ಎಂದು ಪ್ರಶ್ನಿಸಿದರು.

ಅವರ ಧರ್ಮ ಅವರಿಗೆ ಇವರ ಧರ್ಮ ಅವರಿಗೆ. ಭಾರತದ ಚರಿತ್ರೆ ಅವಲೋಕಿಸಿದಾಗ ಜಾತಿ ವ್ಯವಸ್ಥೆಯನ್ನು ಒಪ್ಪಿಕೊಂಡಿವೆ. ಮುಂದುವರಿದ ಸಮುದಾಯಗಳು ಜಾತಿಯನ್ನು ರಾಜಕೀಯ ಅಸ್ತ್ರವನ್ನಾಗಿಸಿವೆ. ತಳ ಸಮುದಾಯಗಳು ತಮ್ಮ ಹಕ್ಕುಗಳಿಗೋಸ್ಕರ ಸಂವಿಧಾನದ ಅಡಿಯಲ್ಲಿ ಹೋರಾಟದಲ್ಲಿ ನಿರತವಾಗಿವೆ. ವೈದಿಕ ವ್ಯವಸ್ಥೆಯು ಇನ್ನೂ ಕೂಡ ಅನಾಗರಿಕವಾಗಿ ಕಾಣುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು. ವೈದಿಕ ವ್ಯವಸ್ಥೆಯ ವಿರುದ್ದವಾಗಿ ಬಸವಣ್ಣ, ಅಂಬೇಡ್ಕರ್‌ ಹೋರಾಟ ಮಾಡಿದರು.

ಅಂಬೇಡ್ಕರ್‌, ಕನಕದಾಸರಿಗೆ ದೇವಸ್ಥಾನ ಪ್ರವೇಶಿಸಲು ಬಿಡಲಿಲ್ಲ. ಕಲ್ಲು ದೇವರು ದೇವರಲ್ಲ, ಮಣ್ಣು ದೇವರು ದೇವರು ದೇವರಲ್ಲ ಎನ್ನ ಕಾಲೇ ಕಂಬ ದೇಹವೇ ದೇಗುಲ ಶಿರವೇ ಹೊನ್ನ ಕಳಶವಯ್ಯ ಹೇಳಿರುವ ಬಸವಣ್ಣನವರ ವಚನ ಉಲ್ಲೇಖಿಸಿದ ಅವರು ಇದು ಅರಿವಿಗೆ ಬರಬೇಕಿದೆ ಎಂದರು. ಸಂವಿಧಾನದಲ್ಲಿ ಎಲ್ಲರಿಗೂ ಬದುಕಲು ಸಮಾನ ಅವಕಾಶ ಕಲ್ಪಿಸಲಾಗಿದ್ದರೂ ಕೂಡ ವೈದಿಕ ವ್ಯವಸ್ಥೆಯಲ್ಲಿ ಇನ್ನೂ ಜಾತಿ ಪದ್ದತಿ ಜೀವಂತವಾಗಿದೆ. ದೇವಸ್ಥಾನವೊಂದರಲ್ಲಿ ಕುರುಬ ಸ್ವಾಮೀಜಿ ದೇವಸ್ಥಾನಕ್ಕೆ ಬಂದು ಹೋದ ಬಳಿಕ ಸಮಿತಿಯವರು ದೇವಸ್ಥಾನ ಶುಚಿಗೊಳಿಸಿರುವ ಪ್ರಕರಣ ಯಾರೇ ಮಾಡಿದರೂ ಸಂವಿಧಾನದ ಆಶಯಗಳಿಗೆ ವಿರುದ್ದವಾಗಿದ್ದಾರೆ. ಅದು ಖಂಡನೀಯ ಎಂದರು.

ಮುಸ್ಲಿಮರು ಕೂಡ ಭಾರತೀಯರೇ ಆಗಿದ್ದು, ಭಾರತೀಯ ಪ್ರಜೆಗಳಿರುವಾಗ ಓಲೈಕೆಯ ಪ್ರಶ್ನೆ ಎಲ್ಲಿ ಬಂತು? ಅವರಿಗೂ ಸಂವಿಧಾನದ ಸಮಾನ ಹಕ್ಕುಗಳಿಲ್ವ? ಎಂದು ಪ್ರಶ್ನಿಸಿದ ಅವರಿಗೆ ಆರ್ಥಿಕ, ಸಾಮಾಜಿಕ ಸಮಾನ ಹಕ್ಕುಗಳಿವೆ ಎಂದು ಮಾಜಿ‌‌ ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೆ ಟಾಂಗ್ ನೀಡಿದರು.

Advertisement

ಸಂಸದ ಡಿ.ಕೆ. ಸುರೇಶ ಅವರು ಪ್ರತ್ಯೇಕ ರಾಷ್ಟ್ರದ ಪ್ರಸ್ತಾಪದ ಹಿನ್ನೆಲೆಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಸಚಿವ ಡಾ. ಎಚ್.ಸಿ. ಮಹಾದೇವಪ್ಪ ಅವರು ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ ನ್ಯಾಯ ಸಮ್ಮತವಾಗಿ ಸಿಗಬೇಕಾದ ಬರ ಪರಿಹಾರ, ಅನುದಾನಗಳ ತಾರತಮ್ಯ ನೀತಿಯ ವಾಸ್ತವ ಸಂಗತಿಗಳ ಮಂಡಿಸುವ ವೇಳೆ ಆ ರೀತಿಯಾಗಿ ಅಸಮಾಧಾನವಾಗಿ ವ್ಯಾಖ್ಯಾನಿಸಿರಬಹುದು ಎಂದರು. ಈ ಹಿಂದೆ ಪೆರಿಯರ್ ಅವರು ದ್ರಾವಿಡ ರಾಷ್ಟ್ರ ಕಟ್ಟುವ ಬಗ್ಗೆ ಅದು ಅವರ ಹೋರಾಟವಾಗಿತ್ತು ಎಂದರು.

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವ ಸಂಭಾವ್ಯ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು ಎಂದ ಅವರು ಪ್ರತಿಯೊಂದು ಲೋಕಸಭಾ ಕ್ಷೇತ್ರಕ್ಕೆ ಸಚಿವರೊಬ್ಬರನ್ನು ವೀಕ್ಷಕರಾಗಿ ನೇಮಿಸಲಾಗಿದೆ. ಅವರು ಆಯಾ ಲೋಕಸಭೆ ಕ್ಷೇತ್ರ ನಮ್ಮ ಪಕ್ಷದ ಶಾಸಕರನ್ನು ಹಾಗೂ ಮುಖಂಡರನ್ನು ಭೇಟಿಯಾಗಿ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಸದರಿ ವೀಕ್ಷಕರು ಮೂವರು ಹೆಸರುಗಳನ್ನು ಕಳುಹಿಸಲು ಸೂಚಿಸಲಾಗಿದೆ ಎಂದರು.

ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪೂರ, ಮುಕುಂದರಾವ್ ಭವಾನಿಮಠ, ಮಾಲತಿ ನಾಯಕ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next