Advertisement
ರವಿವಾರ ತಾಲೂಕಿನ ಅಥರ್ಗಾ ಗ್ರಾಮದಲ್ಲಿ ಮುಳವಾಡ ಏತ ನೀರಾವರಿ ಹಂತ-3ರ ಅಡಿಯಲ್ಲಿ ತಿಡಗುಂದಿ ಶಾಖಾ ಕಾಲುವೆಯ ಕಿ.ಮೀ 56ರಿಂದ 66ರವರೆಗೆ ಕಾಮಗಾರಿ ಮುಖಾಂತರ ರಾಜನಾಳ, ತಡವಲಗಾ, ಹಂಜಗಿ ಕೆರೆಗಳನ್ನು ತುಂಬುವ ಯೋಜನೆಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಜಿಲ್ಲೆಯ ಜನತೆ ಇಂದಿ ರಾ ಗಾಂಧಿ ಯವರನ್ನು ಬಂಗಾರದಲ್ಲಿ ಕೂಡಿಸಿ ತುಲಾಭಾರ ಮಾಡಿಸಿದ ಹೃದಯ ಶ್ರೀಮಂತಿಕೆಯವರು.
Related Articles
Advertisement
ಬರ ಎಂಬುದು ಬ್ರಿಟಿಷರ ಕಾಲದಿಂದಲೂ ಇದೆ. ಆ ಕಾಲದಲ್ಲಿಯೇ ವಿಜಯಪುರ ಜಿಲ್ಲೆಯಲ್ಲಿ ಬರಗಾಲ ಸಂಸ್ಥೆ ಹುಟ್ಟು ಹಾಕಿದ್ದಾರೆ. ಸ್ವಂತಂತ್ರ ಭಾರತದ ಆಡಳಿತ ಮಾಡಿದ ಸರಕಾರಗಳು ನೀರಾವರಿಗಾಗಿ ಅನೇಕ ಯೋಜನೆಗಳು ಮಾಡಿವೆ. ಆದರೆ ಇದರಿಂದ ಇನ್ನೂ ಮುಕ್ತವಾಗಿಲ್ಲ. ಈ ಭಾಗದ ಜನರು ಕೃಷಿ ಆಧಾರಿತ ಬದಕು ಸಾಗಿಸುವ ಜನರು. ಲಿಂಬೆ, ದಾಳಿಂಬೆ, ದ್ರಾಕ್ಷಿ ಬೆಳೆಯುವದರಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದಿದ್ದಾರೆ ಎಂದರು. ಮೇಘರಾಜನ ಅವಕೃಪೆಯಿಂದ ಈ ಭಾಗದ ರೈತರು ಸಾಕಷ್ಟು ಕಷ್ಟದ ದಿನಗಳನ್ನು ಕಳೆದಿದ್ದಾರೆ. ಅನೇಕ ರೈತಾಪಿ ವರ್ಗ ಸಾಲದ ಸುಳಿಯಲ್ಲಿ ಸಿಲುಕಿ ಅಧೈರ್ಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಭಗವಂತ ದಯೆಯಿಂದ ಈ ಭಾರಿ ಮೇಘರಾಜನ ಕೃಪೆಯಿಂದ ಮಳೆಯಾಗಿ ಭೂಮಿತಾಯಿ ಹಸಿರಾಗಿ ರೈತರು ಅಲ್ಪಸ್ವಲ್ಪ ಧೈರ್ಯದಿಂದ ಇರುವಂತಾಗಿದೆ. 2017ರಲ್ಲಿ ಅಣಚಿ, ಬುಯ್ನಾರ, ಹತ್ತಿರ ಭೀಮಾನದಿಯಿಂದ ನೀರು ಲಿಫ್ಟ್ ಮಾಡಿ ಕೆರೆ ತುಂಬಲಾಗಿದೆ. ಆದರೆ ಈ ಯೋಜನೆ ಕೂಡಾ ಅಷ್ಟೊಂದು ಯಶಸ್ವಿ ಕಂಡಿಲ್ಲ. ಸಮ್ಮಿಶ್ರ ಸರಕಾರದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಹಾಗೂ ನೀರಾವರಿ ಸಚಿವರಾದ ಡಿ.ಕೆ. ಶಿವಕುಮಾರ ಅವರು ಕೆರೆಗಳನ್ನು ಗ್ರಾÂವಿಟಿ ಆಧಾರದಲ್ಲಿ ತುಂಬಲು ಸಹಾಯ ಮಾಡಿದ್ದಾರೆ ಎಂದರು. ದಯಾಸಾಗರ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು.
ವೇದಿಕೆಯಲ್ಲಿ ಸಂಸದ ರಮೇಶ ಜಿಗಜಿಣಗಿ, ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ, ಜಿಪಂ ಸದಸ್ಯ ಭೀಮು ಬಿರಾದಾರ, ನವೀನ ಅರಕೇರಿ, ತಾಪಂ ಅಧ್ಯಕ್ಷ ಅಣ್ಣಪ್ಪ ಬಿದರಕೋಟಿ, ಗ್ರಾಪಂ ಅಧ್ಯಕ್ಷೆ ಸುವರ್ಣಾ ಶಿವೂರ, ಉಪ ವಿಭಾಗಾ ಧಿಕಾರಿ ರಾಹುಲ್ ಸಿಂಧೆ, ಕಾಸುಗೌಡ ಬಿರಾದಾರ, ಅಣ್ಣಪ್ಪ ಖೈನೂರ, ಶ್ರೀಶೈಲ ಪೂಜಾರಿ, ಸಾಂಬಾಜಿರಾವ್ ಮಿಸಾಳೆ, ಡಿವೈಎಸ್‌ಪಿ ಶ್ರೀಧರ ದಡ್ಡಿ, ಅಶೋಕಗೌಡ ಬಿರಾದಾರ, ಗಣಪತಿ ಬಾಣಿಕೋಲ, ಮಲ್ಲಪ್ಪ ಪತಂಗೆ, ಶಿವಾನಂದ ಬಿರಾದಾರ,ರಮೇಶ ರಾಠೊಡ, ಬಸು ಸಾಹುಕಾರ, ಇಲಿಯಾಸ್ ಬೋರಾಮಣಿ, ವಿದ್ಯಾಧರ ಜೇವೂರ, ಗೋವಿಂದ ರಾಠೊಡ, ಪ್ರಭಾಕರ ಎಚ್. ಚಿಣಿ, ಜಗದೀಶ ರಾಠೊಡ ಇದ್ದರು.