ಬಂಗಾರಪೇಟೆ: ಕೆ.ಸಿ.ವ್ಯಾಲಿ ನೀರಿನ ಯೋಜನೆ ಹೆಸರಲ್ಲಿ ಜನಪ್ರತಿನಿಧಿಗಳು ರಾಜಕೀಯ ಮಾಡುತ್ತಿ ದ್ದಾರೆಯೇ ವಿನಃ, ಸಮರ್ಪಕವಾಗಿ ಅನುಷ್ಠಾನ ಗೊಳಿಸುತ್ತಿಲ್ಲ. ಅಲ್ಲದೆ, ಕೆರೆ ಒತ್ತುವರಿ ತೆರವು ಮಾಡಬೇಕು ಎಂದು ರೈತ ಸಂಘದ ಕಾರ್ಯಕರ್ತರು ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್ ಮಾತನಾಡಿ, ತಾಲೂಕು ಬರಪೀಡಿತ ಪ್ರದೇಶ ವಾಗಿದ್ದು, ನೀರಿಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ತಾಲೂ ಕಲ್ಲಿ ಕೆರೆಗಳನ್ನು ಕೆಲ ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಹೀಗಾಗಿ ಮಳೆ ಬಂದರೂ ಕೆರೆಯಲ್ಲಿ ನೀರು ಶೇಖರಣೆ ಆಗುತ್ತಿಲ್ಲ. ಆದ್ದರಿಂದ ಒತ್ತುವರಿ ಮಾಡಬೇಕೆಂದು ಒತ್ತಾಯಿಸಿದರು.
ತನಿಖೆ ನಡೆಸಿ: ನೀರಾವರಿ ಸೌಲಭ್ಯ ವಿಲ್ಲದೆ, ರೈತರು ಕೃಷಿಯಿಂದ ವಿಮುಕ್ತಿ ಹೊಂದುತ್ತಿದ್ದಾರೆ. ಕೆ.ಸಿ.ವ್ಯಾಲಿ ನೀರನ್ನು ಬಂಗಾರಪೇಟೆ ಕೆರೆಗಳಿಗೆ ಹರಿಸಬೇಕು ಮತ್ತು ರೈತರ ಸಾಲ ಮನ್ನಾದಲ್ಲಿ ಆಗಿರುವ ಹಗರಣ ವನ್ನು ಉನ್ನತ ಮಟ್ಟದ ಅಧಿಕಾರಿಗಳಿಂದ ತನಿಖೆ ನಡೆಬೇಕೆಂದು ಒತ್ತಾಯಿಸಿದರು. ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ ಮಾತನಾಡಿ, ಪೂರ್ವ ಜರು ಕಟ್ಟಿ ಬೆಳೆಸಿದ್ದಂತಹ ಕೆರೆಗಳು ದಿನೇ ದಿನೆ ಕಣ್ಮರೆ ಯಾಗುತ್ತಿವೆ. ಅದನ್ನು ರಕ್ಷಣೆ ಮಾಡಬೇಕಾದ ಸರ್ಕಾರ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮೌನಕ್ಕೆ ಶರ ಣಾಗಿದ್ದಾರೆ ಎಂದು ಆರೋಪಿಸಿದರು. ಕೆರೆಗೆ ನೀರು ತುಂಬಿಸಿ: ಕೆ.ಸಿ. ವ್ಯಾಲಿ ನೀರನ್ನು ವಿಳಂಬ ಮಾಡದೆ ತಾಲೂಕಿನ ಕೆರೆಗಳಿಗೆ ತುಂಬಿಸಿ ರೈತನ್ನು ಮತ್ತೆ ಕೃಷಿಯತ್ತ ಆರ್ಕಷಿಸ ಬೇಕೆಂದು ಒತ್ತಾಯಿಸಿದರು. ರೈತ ಸಂಘದ ಮಹಿಳಾ ಘಟಕದ
ಜಿಲ್ಲಾಧ್ಯಕ್ಷೆ ಎ.ನಳಿನಿ, ಅನುಶ್ರೀ,ತಾ.ಅಧ್ಯಕ್ಷ ಅಂಬರೀಶ್, ಮಾಸ್ತಿ ವೆಂಕಟೇಶ್, ಹುಲ್ಕೂರ್ ಹರಿಕುಮಾರ್, ಮಂಜುನಾಥ್, ಪ್ರತಾಪ್, ವಡ್ಡ ಹಳ್ಳಿ ಮಂಜುನಾಥ್, ಮರಗಲ್ ನಯೀಮ್, ಐತಾಂಡಹಳ್ಳಿ ಮಂಜು ನಾಥ್, ಹರೀಶ್, ನಾರಾಯಣಸ್ವಾಮಿ, ಯಲ್ಲಪ್ಪ, ವೆಂಕ ಟೇಶ್, ಪ್ರಸಾದ್, ಕುಮಾರ್ ಇತರರಿದ್ದರು.