Advertisement
ರಾಮನಗರದಲ್ಲಿ ರಾಜಕೀಯ ವೈರಾಗ್ಯದ ಮಾತನಾಡಿದ ಸಂಸದ ಡಿ.ಕೆ.ಸುರೇಶ್, ಲೋಕಸಭಾ ಚುನಾವಣೆಗೆ ನಿಲ್ಲುವ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಕಾರ್ಯಕರ್ತರು, ಮುಖಂಡರ ಸಲಹೆ ಪಡೆಯಬೇಕು. ಯಾರೂ ಸೂಕ್ತವೆಂದು ಅವರು ತೀರ್ಮಾನ ಮಾಡಿದರೆ ಅವರಿಗೆ ಬೆಂಬಲ ಕೊಡುತ್ತೇನೆ. ರಾಜಕಾರಣ ಅಷ್ಟೊಂದು ಚೆನ್ನಾಗಿಲ್ಲ, ರಾಜಕೀಯ ಸಾಕಾಗಿದೆ. ಹಾಗಾಗಿ ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು ಎನ್ನುವುದು ನನ್ನ ಉದ್ದೇಶ ಎಂದರು.
Related Articles
Advertisement
ಉಚಿತವಾಗಿ ಅಕ್ಕಿ ಕೇಳುತ್ತಿಲ್ಲ: ಕೇಂದ್ರ ಸರ್ಕಾರದಲ್ಲಿ ಸಾಕಷ್ಟು ಅಕ್ಕಿ ದಾಸ್ತಾನಿದೆ. ಅಕ್ಕಿ ಇರುವುದು ಸಾರ್ವಜನಿಕರ ವಿತರಣೆಗೆ. ಆದರೆ ಕೇಂದ್ರ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚುಕೊಳ್ಳುತ್ತಿದೆ. ಎಷ್ಟೋ ಸಾರಿ ಅಕ್ಕಿ ಹಾಳಾಗಿ ನಷ್ಟವಾಗಿದೆ. ರಾಜ್ಯ ಸರ್ಕಾರ ಉಚಿತವಾಗಿ ಏನೂ ಅಕ್ಕಿ ಕೇಳುತ್ತಿಲ್ಲ. ಕೇಂದ್ರ ಸರ್ಕಾರದ ಮಾರ್ಗಸೂಚಿಯಲ್ಲೇ ಕೊಡಿಯೆಂದು ಕೇಳುತ್ತಿದ್ದೇವೆ. ನಾವು ಅಕ್ಕಿ ಕೇಳುತ್ತಿರುವುದು ಬಡವರು, ಹಸಿದವರ ದೃಷ್ಟಿಯಿಂದ ಅನ್ನ ಕೊಡಿ ಅಂತಿದ್ದೇವೆ. ಇದು ಕೇಂದ್ರದ ಕಾರ್ಯಕ್ರಮವೂ ಇರಬಹುದು, ರಾಜ್ಯದ ಕಾರ್ಯಕ್ರಮವೂ ಇರಬಹುದು ಎಂದರು.
ಆಹಾರ ಭದ್ರತಾ ಕಾಯ್ದೆ ತಂದಿದ್ದೆ ಯುಪಿಎ ಸರ್ಕಾರ. ಆ ಕಾಯ್ದೆ ತರದಿದ್ದರೆ ದೇಶದ ಜನರಿಗೆ ಇವರು 5ಕೆಜಿ ಅಕ್ಕಿ ಕೊಡಲು ಆಗುತ್ತಿತ್ತಾ? ಹಿಂದೆ ಸಿದ್ದರಾಮಯ್ಯನವರು ಉಚಿತ ಅಕ್ಕಿ ಕೊಟ್ಟಿದ್ದರು. ಆಗಲೂ ಬಡವರ ಹಸಿವನ್ನ ನೀಗಿಸಿದ್ದೆವು. ಈಗಲೂ 10ಕೆ.ಜಿ ಉಚಿತ ಅಕ್ಕಿ ಘೋಷಣೆ ಮಾಡಿದ್ದೇವೆ. ಇದರಿಂದ ಎಲ್ಲರಿಗೂ ಅನುಕೂಲ ಆಗುತ್ತದೆ ಎಂದರು.
ಬಿಜೆಪಿ ಗೆ ಮತಹಾಕಿದರೂ ಅಕ್ಕಿ, ಜೆಡಿಎಸ್ ಗೆ ಮತ ಹಾಕಿದವರಿಗೂ ಅಕ್ಕಿ ಸಿಗುತ್ತದೆ. ಆದರೆ ಹಸಿದ ವರ್ಗಕ್ಕೆ ಕೇಂದ್ರ ಅನ್ಯಾಯ ಮಾಡುತ್ತಿದೆ. ಇದರಲ್ಲಿ ರಾಜಕೀಯ ಮಾಡುವುದು ಬೇಡ. ಬಡವರಿಗೆ ಅಕ್ಕಿಕೊಡಿ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು.