Advertisement

Shivamogga; ಪಾಲಿಟಿಕ್ಸ್‌ ಮೈಂಡ್‌ ಗೇಮ್‌ ಅಲ್ಲ,ಹಾರ್ಟ್‌ ಗೇಮ್‌: ಶಿವರಾಜ್‌ ಕುಮಾರ್‌

06:16 PM Mar 24, 2024 | Team Udayavani |

ಶಿವಮೊಗ್ಗ:ಚುನಾವಣೆ ಪ್ರಚಾರಕ್ಕೆ ಬಂದಾಗ ಪಾಸಿಟಿವ್‌ ಶೈನ್‌ ಇತ್ತು. ಕಳೆದ ಬಾರಿಗೂ ಈ ಬಾರಿಗೂ ಬದಲಾವಣೆ ಇದೆ. ಬದಲಾವಣೆ ಬೇಕು ಎಂದು ಜನ ಬಯಸಿದ್ದಾರೆ ಎಂದು ನನಗೆ ಅನಿಸಿದೆ ಎಂದು ನಟ ಶಿವರಾಜ್‌ ಕುಮಾರ್‌ ತಿಳಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಚಾರದ ವೇಳೆ ನೂರಾರು ಪ್ರಶ್ನೆ ಬರುತ್ತವೆ. ಆದರೆ ಈಗ ಉತ್ತರ ಕೊಡುವ ಅವಶ್ಯಕತೆ ಇಲ್ಲ. ಜನರಿಗೆ ಮಾತನಾಡಿ ಅರ್ಥ ಮಾಡಿಸೋದು ಬೇಡ. ಅದು ಜನರಿಗೇ ಅರ್ಥ ಆಗಬೇಕು ಅಷ್ಟೆ. ಮೊದಲು ನಂಬಿಕೆ ಮುಖ್ಯ. ನಮಗೆ ಎಷ್ಟು ನಂಬಿಕೆ ಇದೆಯೋ ಅದು ಜನರಿಗೂ ಇರಬೇಕು. ಬೇರೆ ರೀತಿ ಮಾತನಾಡುವ ಮನುಷ್ಯ ನಾನಲ್ಲ. ನಮ್‌ ಫ್ಯಾಮಿಲಿ ಆ ರೀತಿ ಅಲ್ಲ. ಹೃದಯದಲ್ಲಿ ಏನು ಬರುತ್ತದೆ ಅದನ್ನು ಬಾಯಲ್ಲಿ ನುಡಿಯುತ್ತೇದೆ. ನಾವು ಹೃದಯದಿಂದ ಮಾತನಾಡೋರು. ಯಾವ ಪಾಲಿಟಿಕ್ಸ್‌ ಡಿಫ್ರೆಂಟ್‌ ಅಲ್ಲ. ಪಾಲಿಟಿಕ್ಸ್‌ ಇಸ್‌ ನಾಟ್‌ ಎ ಮೈಂಡ್‌ ಗೇಮ್‌. ಇಟ್ಸ್‌ ಎ ಹಾರ್ಟ್‌ ಗೇಮ್‌. ರಾಜಕೀಯಕ್ಕೆ ಹೃದಯ ಬೇಕು. ಹೃದಯವಂತಿಕೆ ಬೇಕು. ನಾವು ಜನರಿಗಾಗಿ ಏನು ಮಾಡಬೇಕು ಎಂಬುದರ ಬಗ್ಗೆ ನಾನು ಗೀತಾ ಜತೆ ಮಾತಾನಾಡಿದ್ದೇನೆ.

ಜನರ ಸಮಸ್ಯೆ ಈಗ ಗೊತ್ತಾಗುತ್ತಿದೆ. ನಟನೆ ಮಾಡೋರಿಗೆ ರಾಜಕೀಯ ಗೊತ್ತಿಲ್ಲ ಎಂದೇನಿಲ್ಲ. 40 ವರ್ಷದಿಂದ ಮತ ಹಾಕುತ್ತಿದ್ದೇನೆ. ರಾಜಕೀಯ ಗೊತ್ತಿದೆ. ಅದಕ್ಕಾಗಿ ರಾಜಕೀಯಕ್ಕೆ ಬರಬೇಕು ಎಂದೇನಿಲ್ಲ. ಗೀತಾ ಬಂದಿದ್ದಾರೆ. ಅವರಿಗೆ ನನ್ನ ಸಪೋರ್ಟ್‌ ಅಷ್ಟೆ. ಒಳ್ಳೆಯ ರೀತಿಯಲ್ಲಿ ರಾಜಕೀಯ ಇರಲಿ ಎಂದು ಸಹಕಾರ ಮಾಡಿದ್ದೀನಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next