Advertisement

PM ಮೋದಿಯಿಂದ ಚುನಾವಣ ಗಿಮಿಕ್‌: ವಿನಯ ಕುಮಾರ್‌ ಸೊರಕೆ

12:16 AM Apr 17, 2024 | Team Udayavani |

ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಚುನಾವಣೆ ಸಂದರ್ಭದಲ್ಲಿ ಮಂಗಳೂರಿಗೆ ಬಂದು ಬ್ರಹ್ಮಶ್ರೀ ನಾರಾಯಣಗುರುಗಳ ಪ್ರತಿಮೆಗೆ ಕೈ ಮುಗಿದು ಮಾಲಾರ್ಪಣೆ ಮಾಡುವ ಬದಲು ತಮ್ಮ ಆಡಳಿತದಲ್ಲಿ ಗುರುಗಳ ತಣ್ತೀ, ಸಿದ್ಧಾಂತಗಳನ್ನು ಪಾಲಿಸಿ ದ್ದರೆ ಅದಕ್ಕೊಂದು ಮಹತ್ವ ಬರುತ್ತಿತ್ತು. ಅವರ ಈ ನಡೆ ಚುನಾವಣ ಗಿಮಿಕ್‌ ಎಂದು ಎಲ್ಲರಿಗೂ ಅರ್ಥವಾಗುತ್ತದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ ಕುಮಾರ್‌ ಸೊರಕೆ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು.

Advertisement

ನಾರಾಯಣ ಗುರುಗಳು ಮೊದಲ ಬಾರಿಗೆ ಮಂಗಳೂರಿಗೆ ಬಂದಿಳಿದ ರೈಲು ನಿಲ್ದಾಣಕ್ಕೆ ಅವರ ಹೆಸರಿಟ್ಟಿರುತ್ತಿದ್ದರೆ ಗುರುಗಳಿಗೆ ಕೈ ಮುಗಿದಿರುವುದಕ್ಕೊಂದು ಅರ್ಥ ಬರುತ್ತಿತ್ತು. ಗಣರಾಜ್ಯೋತ್ಸವ ಸಂದರ್ಭ ನಾರಾಯಣ ಗುರುಗಳ ಟ್ಯಾಬ್ಲೋವನ್ನು ನಿರಾಕರಿಸಿರುವುದು, ಪಠ್ಯ ಪುಸ್ತಕದಿಂದ ಗುರುಗಳ ಪಠ್ಯವನ್ನು ತೆಗೆದು ಹಾಕಿರುವುದನ್ನು ನೋಡಿದಾಗ ಬಿಜೆಪಿಗೆ ನಾರಾಯಣ ಗುರುಗಳ ಬಗ್ಗೆ ಎಷ್ಟು ಗೌರವವಿದೆ ಎಂದು ತಿಳಿಯುತ್ತದೆ ಎಂದರು.

ಜಿಲ್ಲೆಗೆ ಶ್ರೀನಿವಾಸ ಮಲ್ಯ, ಜಾರ್ಜ್‌ಫರ್ನಾಂಡಿಸ್‌, ಜನಾರ್ದನ ಪೂಜಾರಿ ಮೊದಲಾದವರ ಕೊಡುಗೆ ಏನು ಎಂದು ಎಲ್ಲರಿಗೂ ಗೊತ್ತು. ಕಳೆದ 35 ವರ್ಷದಲ್ಲಿ ಬಿಜೆಪಿ ಲೋಕಸಭಾ ಸದಸ್ಯರು ಏನು ಕೊಡುಗೆ ನೀಡಿದ್ದಾರೆ ಎಂದು ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದರು.

ಶೇ. 80ರಷ್ಟು ಮಂದಿಗೆ ಗ್ಯಾರಂಟಿ ಯೋಜನೆಗಳು ತಲುಪಿವೆ. ಇದರಿಂದಾಗಿ ಶೇ. 10-15ರಷ್ಟು ಬಿಜೆಪಿಯ ಮತಗಳು ಕಾಂಗ್ರೆಸ್‌ ಮತಗಳಾಗಿ ಪರಿವರ್ತನೆ ಯಾಗಲಿದೆ. ಕೇಂದ್ರದ 5 ಗ್ಯಾರಂಟಿಗಳ ಕಾರ್ಡನ್ನು ಮನೆ ಮನೆಗೆ ತಲುಪಿಸುವ ಕೆಲಸ ಕಾಂಗ್ರೆಸ್‌ ಕಾರ್ಯಕರ್ತರು ಮಾಡುತ್ತಿದ್ದು, ಈ ಬಾರಿ ರಾಜ್ಯದಲ್ಲಿ 20ಕ್ಕೂ ಅಧಿಕ ಸ್ಥಾನಗಳಲ್ಲಿ ಕಾಂಗ್ರೆಸ್‌ ಜಯಗಳಿಸಲಿದೆ ಎಂದರು.

ಪ್ರಶ್ನೆಗಳಿಗೆ ಮೋದಿ ಉತ್ತರಿಸಿಲ್ಲ
ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌ ಮಾತನಾಡಿ, ಮಂಗಳೂರಿಗೆ ಮೋದಿ ಬಂದು ಜಿಲ್ಲೆಯ ಜನರಿಗೆ ಸಂದೇಶ ಕೊಡುತ್ತಾರೆ ಎನ್ನುವ ವಿಶ್ವಾಸ ಜನರಲ್ಲಿತ್ತು. ಆದರೆ ಮೋದಿಯವರು ಒಂದೂ ಮಾತನಾಡದೆ ತೆರಳಿದ್ದಾರೆ. ಎಐಸಿಸಿ-ಕೆಪಿಸಿಸಿ ನಿರ್ದೇಶನದಂತೆ ಕೆಲವೊಂದು ಪ್ರಶ್ನೆಗಳನ್ನು ಕೇಳಲಾಗಿತ್ತು. ಯಾವುದಕ್ಕೂ ಉತ್ತರ ಕೊಟ್ಟಿಲ್ಲ. ಜಿಲ್ಲೆಗೆ ಅವರ ಕೊಡುಗೆ ಏನು ಎಂದಾದರೂ ಹೇಳಬೇಕಿತ್ತು. ಆದರೆ ಅದನ್ನೂ ಹೇಳದೆ ಹೋಗಿದ್ದಾರೆ ಎಂದು ಆರೋಪಿಸಿದರು.
ಮುಖಂಡರಾದ ಟಿ.ಕೆ. ಸುಧೀರ್‌, ಶೈಲೇಂದ್ರ, ಕೃಷ್ಣಪ್ಪ, ಟಿ.ಎಂ. ಶಹೀದ್‌, ಶಾಲೆಟ್‌ ಪಿಂಟೋ, ಸಲೀಂ, ಯೋಗೀಶ್‌ ಕುಮಾರ್‌, ನೀರಜ್‌ ಪಾಲ್‌ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next