Advertisement
ತುಂಗಭದ್ರಾ ಜಲಾಶಯ ಬಹುಪಾಲು ಭರ್ತಿಯಾದ ಹಿನ್ನೆಲೆಯಲ್ಲಿ ಈ ಹಿಂದೆ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಣಯಿಸಿ ದಂತೆ ರವಿವಾರ ಎಡದಂಡೆ ಮುಖ್ಯ ಕಾಲುವೆಗೆ ನೀರು ಬಿಡುಗಡೆಯ ಕಾರ್ಯ ನೆರವೇರಿತು.
Related Articles
Advertisement
ಅಧಿಕೃತವಾಗಿ 9:30ಕ್ಕೆ ನೀರು ಬಿಡುಗಡೆಗೆ ಕಾರ್ಯಕ್ರಮ ನಿಗದಿ ಮಾಡಲಾಗಿತ್ತು. ಆದರೆ ಶಾಸಕರು ಬೇಗ ಆಗಮಿಸಿ ನೀರು ಬಿಡುಗಡೆ ಮಾಡಿ ತೆರಳಿರುವ ಹಿಂದೆ ರಾಜಕೀಯ ನಡೆದಿದೆ ಎನ್ನುವ ಮಾತು ಕೇಳಿ ಬಂದವು. ನೀರು ಬಿಡುಗಡೆಯ ವಿಚಾರದಲ್ಲೂ ಶಾಸಕ, ಸಂಸದರ ಮಧ್ಯೆ ರಾಜಕೀಯ ನಡೆದಿದ್ದು ಚರ್ಚೆಗೆ ಎಡೆ ಮಾಡಿ ಕೊಟ್ಟಿತು.
ಅಧಿಕಾರಿಗಳ ವಿರುದ್ಧ ತಿಪ್ಪೇರುದ್ರಸ್ವಾಮಿ ಕೆಂಡಾಮಂಡಲ
ಶಾಸಕ ರಾಘವೇಂದ್ರ ಹಿಟ್ನಾಳ ಅವರು ನಿಯಮ ಮೀರಿ ಕಾಲುವೆಗೆ ನೀರು ಬಿಡುಗಡೆ ಮಾಡಿದ್ದಕ್ಕೆ ತುಂಗಭದ್ರಾ ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ಅವರು ಅಧಿಕಾರಿಗಳ ಮೇಲೆ ಕೆಂಡಾಮಂಡಲರಾದ ಘಟನೆ ನಡೆಯಿತು. ಶಾಸಕ ಹಿಟ್ನಾಳ ಅವರು ನೀತಿ ನಿಯಮ ಉಲ್ಲಂಘಿಸಿ ಸಮಯಕ್ಕೆ ಮುನ್ನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ಕಾಡಾ ಅಧ್ಯಕ್ಷರು, ನೀರಾವರಿ ಇಲಾಖೆ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ನಿಗದಿತ ಸಮಯಕ್ಕೂ ಮುನ್ನ ತಮ್ಮ ಬೆಂಬಲಿಗರೊಂದಿಗೆ ಬಂದು ಕಾಲುವೆಗೆ ನೀರು ಬಿಟ್ಟಿದ್ದಾರೆ. ಇದರಲ್ಲಿ ಕೆಲ ಅಧಿಕಾರಿಗಳು ಕಾಂಗ್ರೆಸ್ ಪರ ಕೆಲಸ ಮಾಡುತ್ತಿದ್ದಾರೆ. ಮೊದಲು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ತರಾಟೆ ತೆಗೆದುಕೊಂಡರು.
ಶಾಸಕ ಹಿಟ್ನಾಳ ಗೂಂಡಾಗಿರಿ ಮಾಡ್ತಿದ್ದಾರೆ: ಕರಡಿ
ಕೊಪ್ಪಳ: ಶಾಸಕ ರಾಘವೇಂದ್ರ ಹಿಟ್ನಾಳ ಅವರು ನೀರು ಬಿಡುವ ವಿಚಾರದಲ್ಲೂ ರಾಜಕೀಯ ಮಾಡ್ತಿದ್ದಾರೆ. ಕಾನೂನು ಮಾಡಬೇಕಾದವರೆ ಕಾನೂನು ಉಲ್ಲಂಘಿ ಸಿದರೆ ಹೇಗೆ? ಇವರು ಅಧಿಕಾರಿಗಳ ಮೇಲೆ ದಬ್ಟಾಳಿಕೆ ಮಾಡ್ತಿದ್ದಾರೆ. ಗೂಂಡಾಗಿರಿ ಮಾಡ್ತಿದ್ದಾರೆ. ಅವರ ವಿರುದ್ಧ ಸಭಾಪತಿಗಳಿಗೆ ಪತ್ರ ಬರೆಯಲಾಗುವುದು ಎಂದು ಸಂಸದ ಸಂಗಣ್ಣ ಕರಡಿ ಅವರು ಹಿಟ್ನಾಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಮ್ಮದೇ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದೆ. ಈ ವೇಳೆ ಅವರು ಗೂಂಡಾಗಿರಿ ಮಾಡ್ತಿದ್ದಾರೆ. ಇನ್ನು ಅವರ ಸರ್ಕಾರ ಅಧಿಕಾರದಲ್ಲಿದ್ದರೆ ಇನ್ನೆಷ್ಟು ಗೂಂಡಾಗಿರಿ ಆಗ್ತಿತ್ತು. ಇಲ್ಲಿ ನಿಯಮ ಉಲ್ಲಂಘಿಸಿದ ಶಾಸಕ ವೈಖರಿ ಕುರಿತು ಜಲಸಂಪನ್ಮೂಲ ಸಚಿವರು, ಜಿಲ್ಲಾ ಸಚಿವರು, ಸಿಎಂ ಅವರ ಗಮನಕ್ಕೆ ತರಲಿದ್ದೇವೆ. ಅಶಿಸ್ತು ತೋರಿಸುವ ಶಾಸಕರ ಮೇಲೆ ಸ್ಪೀಕರಿಗೆ ನಾವೆಲ್ಲರೂ ಸೇರಿ ಪತ್ರ ಕೊಡಲಿದ್ದೇವೆ ಎಂದರು.
ಕಾಡಾ ಅಧ್ಯಕ್ಷ ತಿಪ್ಪೇರುದ್ರ ಸ್ವಾಮಿ ಅವರು 9:30 ಗಂಟೆಗೆ ಕಾಲುವೆಗೆ ನೀರು ಬಿಡುಗಡೆ ಕಾರ್ಯಕ್ರಮವಿದೆ ಎಂದು ನನ್ನ ಗಮನಕ್ಕೆ ತಂದಿದ್ದರು. ನಾನು ಸರಿಯಾದ ಸಮಯಕ್ಕೆ ಬಂದಿದ್ದೇನೆ. ಆದರೆ ಕಾನೂನು ಮಾಡುವ ಶಾಸಕರೇ ಕಾನೂನು ಉಲ್ಲಂಘಿಸಿ ನೀರು ಬಿಡುಗಡೆ ಮಾಡಿದ್ದಾರೆ. ಅವರ ವರ್ತನೆ ಸರಿಯಿಲ್ಲ. ರಾಷ್ಟ್ರಪತಿ ಅಭ್ಯರ್ಥಿಗಳು ಬರುವ ಹಿನ್ನೆಲೆಯಲ್ಲಿ ನಾನು ತೆರಳಬೇಕಿತ್ತು. ಅಷ್ಟರೊಳಗೆ ನೀರು ಬಿಡುಗಡೆ ಮಾಡಿ ಹೋಗುವ ಕಾರಣಕ್ಕೆ ಡ್ಯಾಂಗೆ ಬಂದಿದ್ದೇವೆ. ಶಾಸಕರಿಗೆ ಕಾನೂನಿನ ಪರಿಜ್ಞಾನ ಇಲ್ಲವೆಂಬಂತೆ ಕಾಣುತ್ತದೆ. ಪ್ರೋಟೋಕಾಲ್ ಪಾಲನೆ ಮಾಡಬೇಕಾದ ಶಾಸಕರು ಈ ರೀತಿ ವರ್ತಿಸಿದ್ದಾರೆ. ಅವರಿಗೆ ಜವಾಬ್ದಾರಿ ಬೇಕು. ನಾನು ಸರಿಯಾದ ಸಮಯಕ್ಕೆ ಬರದಿದ್ದರೆ ನನ್ನ ತಪ್ಪಾಗುತ್ತದೆ. ಆದರೆ ನಾನು ಸರಿಯಾದ ಸಮಯಕ್ಕೆ ಬಂದಿದ್ದೇನೆ. ಶಾಸಕರು 9 ಗಂಟೆಗೆ ಆಗಮಿಸಿ ಅಧಿ ಕಾರಿಗಳ ಮೇಲೆ ದಬ್ಟಾಳಿಕೆ ಮಾಡಿ ನೀರು ಬಿಡುಗಡೆ ಮಾಡಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದರು.