Advertisement

Politics ಬಂಗಾರದ ಮನುಷ್ಯ ಡಿ.ಬಿ.ಚಂದ್ರೇಗೌಡ

12:05 AM Nov 08, 2023 | Team Udayavani |

“ಪ್ರಜಾತಂತ್ರದಲ್ಲಿ ಮುಖ್ಯಮಂತ್ರಿ ಸ್ಥಾನ ಎಷ್ಟು ಮುಖ್ಯವೋ ಜನಸೇವೆಯಲ್ಲಿ ನಿರತನಾದ ಪ್ರಬುದ್ಧ ಮತ್ತು ಪ್ರಾಮಾಣಿಕ ರಾಜಕಾರಣಿಗೆ ವಿಪಕ್ಷದ ನಾಯಕನ ಸ್ಥಾನ, ವಿಧಾನಸಭೆಯ ಅಧ್ಯಕ್ಷ ಸ್ಥಾನ, ಅಷ್ಟೇ ಏಕೆ ಸಾಮಾನ್ಯ ಶಾಸಕನ ಸ್ಥಾನವೂ ಅಷ್ಟೇ ಮುಖ್ಯ’ -ಹೀಗೆಂದು ಖ್ಯಾತ ಚಿಂತಕ ದೇ.ಜ.ಗೌಡರು ಒಮ್ಮೆ ಹೇಳಿದ್ದುಂಟು. ಈ ಮಾತನ್ನು ಮಾಡಿ ತೋರಿಸಿದವರು ದಾರದ ಹಳ್ಳಿಯ ಬೈರೇಗೌಡ ಚಂದ್ರೇಗೌಡ (ಡಿ.ಬಿ.ಚಂದ್ರೇಗೌಡ).
ಕರ್ನಾಟಕ ವಿಧಾನ ಸಭೆಯ ಅಧ್ಯಕ್ಷರಾಗಿ ಚಂದ್ರೇ ಗೌಡರು ನಾಡಿನ ಸಂಸದೀಯ ಕ್ಷೇತ್ರಕ್ಕೆ ಸಲ್ಲಿಸಿದ ಅನುಪಮ ಸೇವೆ, ಅವರು ನಿರ್ವಹಿಸಿದ ಜವಾಬ್ದಾರಿ ಮತ್ತು ಕರ್ತವ್ಯ ಇದಕ್ಕೆ ಸಾಕ್ಷಿ. ಇಂದಿಗೂ ಸಂಸತ್ತು ಮತ್ತು ರಾಜ್ಯ ವಿಧಾನ ಮಂಡಲಕ್ಕೆ ಅವರು ನೀಡಿದ ಕೊಡುಗೆ ಅಸಾಧಾರಣ. ಅವರ ಸಂಯಮಶೀಲ ಕಾರ್ಯಾ ವಿಧಾನ, ವಿದ್ವತ್ತು, ಲೋಕಾನುಭವ ಮತ್ತು ಸಭ್ಯತೆಯ ನಡೆನುಡಿ ನಾಡಿನ ಇತಿಹಾಸದಲ್ಲಿ ಒಂದು ಅಧ್ಯಾಯದಂತಿದೆ.
ಸುಮಾರು 50 ವರ್ಷಗಳಿಗೂ ಹೆಚ್ಚಿನ ರಾಜ ಕೀಯ ಬದುಕು ಇವರದು. ಕರ್ನಾಟಕದ ಎಲ್ಲ ರಾಜಕೀಯ ಪಕ್ಷಗಳಲ್ಲಿ ಇದ್ದು ಬಂದ ಹೆಗ್ಗಳಿಕೆ ಚಂದ್ರೇಗೌಡರದ್ದು. ಎಲ್ಲ ಪಕ್ಷಗಳ ಮುಂಚೂಣಿ ನಾಯಕರಾಗಿದ್ದವರು ಇವರು. ದೇಶದ ಸಂಸ ದೀಯ ಇತಿಹಾಸದಲ್ಲಿ ಲೋಕಸಭೆ, ರಾಜ್ಯಸಭೆ, ವಿಧಾನಸಭೆ ಮತ್ತು ವಿಧಾನ ಪರಿಷತ್ತು ಹೀಗೆ ನಾಲ್ಕೂ ಸದನಗಳಲ್ಲಿ ಸೇವೆ ಸಲ್ಲಿಸಿದ ಅನುಭವಿ ಜನನಾ ಯಕರಲ್ಲಿ ಚಂದ್ರೇಗೌಡರು ಮೊದಲಿಗರಾಗಿದ್ದಲ್ಲಿ ಅಚ್ಚರಿಯೇನಿಲ್ಲ.

Advertisement

ಅಧ್ಯಯನ ಶೀಲತೆ: ಇಷ್ಟೆಲ್ಲ ಜವಾಬ್ದಾರಿಯ ಹಾಗೂ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದರೂ ಚಂದ್ರೇಗೌಡರು ಬದುಕಿನುದ್ದಕ್ಕೂ ರಾಜಕಾರಣದ ವಿದ್ಯಾರ್ಥಿಯಾಗಿ ಮುಂದುವರಿದಿದ್ದರು. ಮಲೆನಾಡಿನ ಮತ್ತೂಬ್ಬ ಸಭ್ಯ ರಾಜಕಾರಣಿ ಹೇಳುತ್ತಿದ್ದಂತೆ, ಸದನ ಮುಗಿದ ಬಳಿಕ ಸ್ವೀಕರ್‌ ಡಿಬಿಸಿಯವರು ವಿಧಾನಸಭೆಯ ರೆಫ‌ರೆನ್ಸ್‌ ಲೈಬ್ರರಿಗೆ ಹೋಗುತ್ತಿದ್ದರಂತೆ. ಸಕಲೇಶಪುರದ ಶಾಸಕ ಬಿ.ಬಿ.ಶಿವಪ್ಪ ಮತ್ತು ಚಂದ್ರೇಗೌಡರು ಪರಸ್ಪರ ಭೇಟಿಯಾಗುತ್ತಿದ್ದ ಖಾಯಂ ಜಾಗ ವಿಧಾನ ಮಂಡಲದ ಗ್ರಂಥಾಲಯ.

ಇವರ ಅಧ್ಯಯನಶೀಲತೆಗೆ ಮತ್ತೂಂದು ನಿದರ್ಶ ನವೆಂದರೆ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣರವರ ಅಧಿಕಾರ ಅವಧಿಯಲ್ಲಿ ಇವರು ನಿರ್ವಹಿಸಿದ ಕಾನೂನು ಮತ್ತು ಸಂಸದೀಯ ಖಾತೆ. ಕೆಲವು ವಿಶಿಷ್ಟ ಕೆಲಸ ಕಾರ್ಯಗಳಿಗೆ ಕೆಲವರೇ ಲಾಯಕ್ಕೂ ಎನ್ನುವ ಲೋಕರೂಢಿ ಮಾತಿನಂತೆ ಶೃಂಗೇರಿಯಿಂದ ಎರಡನೆ ಬಾರಿಗೆ ಆರಿಸಿ ಬಂದ ಚಂದ್ರೇಗೌಡರು ಅಧ್ಯಯನ ಸೆಲೆಯಾದ ಕಾನೂನು ಇಲಾಖೆಯನ್ನೇ ಆರಿಸಿಕೊಂಡರು.

ಅರಸು-ಇಂದಿರಾ ವಿರಸ: ರಾಜಕಾರಣ ಬಂಧುತ್ವ ದಲ್ಲಿ ಸಮಾಜವಾದಿ ಪಾಳಯದ ರಾಮಕೃಷ್ಣ ಹೆಗಡೆಯವರು ಚಂದ್ರೇಗೌಡರಿಗೆ ಆಸಕ್ತರಲ್ಲಿ ಆಸಕ್ತರು ಎನ್ನುವುದೇನೋ ನಿಜ. ಆದರೆ ಮಲೆ ನಾಡಿನ ಮಣ್ಣಿನ ನಂಟು ಭದ್ರವಾಗಿದ್ದ ಚಂದ್ರೇ ಗೌಡರಿಗೆ ಮುತ್ಸದ್ಧಿ ಜನನಾಯಕ ದೇವರಾಜ ಅರಸರೆಂದರೇ ಇನ್ನಿಲ್ಲದ ಗೌರವ, ಭಕ್ತಿ ಮತ್ತು ಪ್ರೀತಿ. ಇವರಿಗೆ ಅರಸು, ಇಂದಿರಾಗಾಂಧಿಗಿಂತಲೂ ಒಂದು ತೂಕ ಹೆಚ್ಚೆಂದು ಕಾಣಲು ಕಾರಣವೆಂದರೆ ಹಿಂದುಳಿದ ವರ್ಗ ಮತ್ತು ಗೇಣಿದಾರರ ಬಗ್ಗೆ ಅರಸರಿಗೆ ಇದ್ದ ಕಾಳಜಿ. ನಾನು ಅರಸರನ್ನು ಅವರ ನ್ಯಾಯ ನಿಷ್ಠುರತೆ, ಸ್ಫಟಿಕದಂತಹ ಬಡಜನರ ಬಗೆಗಿನ ಪ್ರೀತಿ ಮತ್ತು ದಿಟ್ಟ ಹೆಜ್ಜೆಗಾಗಿ ಜೀವನ ಪರ್ಯಂತ ಗೌರವಿಸುತ್ತೇನೆ. ಹೀಗೆಂದು ಹೇಳಿದ ಮಾತನ್ನೂ ಅವರ ಆತ್ಮಕಥೆಯ ನಿರೂಪಣೆಯಲ್ಲಿ ನಾನು ನಮೂದಿಸಿದ್ದೇನೆ. ಹೀಗಾಗಿ ಮುಂದಿನ ದಿನಗಳಲ್ಲಿ ಅಂದರೆ ಇಂದಿರಾಜಿಯವರ 1978ರ ಚಿಕ್ಕಮಗಳೂರು ಲೋಕಸಭೆ ಚುನಾವಣೆಯ ದಿಗ್ವಿಜಯದ ಅನಂತರ ತೋರಿದ ಅರಸು-ಇಂದಿರಾ ವಿರಸದಿಂದ ಬಹುವಾಗಿ ನೊಂದವರು ಚಂದ್ರೇ ಗೌಡರು. ಇವರಿಬ್ಬರ ವೈಮನಸ್ಸು ನಿವಾರಿಸಲು ಚಂದ್ರೇಗೌಡರು ಮತ್ತು ಕೆ.ಎಚ್‌.ರಂಗನಾಥ್‌ರು ಇನ್ನಿಲ್ಲದೆ ಶ್ರಮಿಸಿದ್ದರೂ ಪ್ರಯೋಜನವಾಗಲಿಲ್ಲ. ನನ್ನ ರಾಜಕೀಯ ಜೀವನದ ಅತ್ಯಂತ ನೋವು ಮತ್ತು ಹತಾಶೆಯ ದಿನಗಳು 1978 ಮತ್ತು 1979ರ ಅವಧಿ- ಹೀಗೆನ್ನುತ್ತಾರೆ ತಮ್ಮ ಆತ್ಮಕಥೆಯಲ್ಲಿ ಡಿ.ಬಿ.ಸಿ.ಅರಸು ಇಂದಿರಾಜಿಯವರ ಭಿನ್ನಾಭಿಪ್ರಾಯ ತಾರಕಕ್ಕೇರಿದಾಗಲೂ ಚಂದ್ರೇಗೌಡರು ಈ ಇಬ್ಬರು ನಾಯಕರ ನಡುವೆ ಮೊದಲನೇ ಬಾಂಧವ್ಯ ತರಲು ಇನ್ನಿಲ್ಲದಂತೆ ಪ್ರಯತ್ನಿಸಿದರು. ದಿಲ್ಲಿ-ಬೆಂಗಳೂರು ನಡುವೆ ಲೆಕ್ಕವಿಲ್ಲದಷ್ಟು ಬಾರಿ ಓಡಾಡಿದೆ… ಪ್ರಯೋಜ ನವಾಗಿಲ್ಲ ಎಂದು ಆತ್ಮಕಥೆಯಲ್ಲಿ ದುಃಖಿ ಸುತ್ತಾರೆ ಚಂದ್ರೇಗೌಡರು. ಅಂತಿಮವಾಗಿ 1979ರ ಜೂನ್‌ 24ರಂದು ಇಂದಿರಾಜಿ ದೇವರಾಜ ಅರಸರನ್ನು ಕಾಂಗ್ರೆಸ್‌ನಿಂದ ಹೊರಹಾಕಿದ್ದಾಯಿತು, ಅನಂತರವೂ ಚಂದ್ರೇಗೌಡರು ಪುನರ್‌ ಅನು ಬಂಧಕ್ಕೆ ಪ್ರಯತ್ನ ಬಿಡಲಿಲ್ಲ. ಆದರೆ 1980ರಲ್ಲಿ ಇಂದಿರಾಜಿ ಹಿಂದೆ ಮುಂದೆ ನೋಡದೆ ದೇವರಾಜ ಅರಸರನ್ನು ಹೀನಾಯವಾಗಿ ಟೀಕಿಸಿದ್ದು ಚಂದ್ರೇಗೌಡರ ತಾಳ್ಮೆ ಕೊನೆಯಾಯಿತು.

ರಾಜಕೀಯ ವಿಪರ್ಯಾಸ: ಪಕ್ಷದಿಂದ ಉಚ್ಚಾ ಟನೆಗೆ ಪೂರ್ವದಲ್ಲಿ ದೇವರಾಜ ಅರಸರು ಕಾಂಗ್ರೆಸ್‌ನ ಯಶಸ್ವಿಗೆ ಪಟ್ಟ ಶ್ರಮವನ್ನು ತೆಗಳಿದ ಬಳಿಕವಂತೂ ಚಂದ್ರೇಗೌಡರಿಗೆ ರಾಜಕಾರಣವೇ ಬೇಡವೆನ್ನಿಸಿತು. ನಮ್ಮ ರಾಜಕಾರಣಿಗಳು ವೈಯಕ್ತಿಕ ಲಾಭಕ್ಕಾಗಿ ಹೇಗೆ ಗೆದ್ದ ಎತ್ತಿನ ಬಾಲ ಹಿಡಿಯುತ್ತಾರೆ ಎನ್ನು ವುದನ್ನು ಚಂದ್ರೇಗೌಡರು ಹೀಗೆ ವರ್ಣಿಸುತ್ತಾರೆ “…. 1980ರ ಲೋಕಸಭೆ ಚುನಾವಣೆ ಫ‌ಲಿತಾಂಶ ಪ್ರಕಟವಾದ ಕೆಲವೇ ಗಂಟೆಗಳಲ್ಲಿ ಪಕ್ಷದ ಶಾಸಕರ ನಿಷ್ಠೆ-ನಿಯತ್ತು ಗಾಳಿಯಲ್ಲಿ ತೂರಿ ಹೋಯಿತು. ನಾನೇ ಕಣ್ಣಾರೆ ಕಂಡ ದೃಶ್ಯವಿದು, ಹಿಂಡು -ಹಿಂಡಾಗಿ ಅರಸರು ಮತ್ತು ನನ್ನ ಹಿಂದೆ ಇದ್ದ ಸಹೋದ್ಯೋಗಿ ಮಿತ್ರರು ದಿಲ್ಲಿಯತ್ತ ದೌಡಾಯಿಸಿ ಇಂದಿರಾಜಿ ಮನೆಯ ಮುಂದೆ ನಿಂತರು. ಇದು ತಪ್ಪಲ್ಲ: ಪಕ್ಷಾಂತರವೂ ಅಲ್ಲ. ಅಧಿಕಾರದ ವ್ಯಾಮೋಹ…’

Advertisement

ಚಿಕ್ಕಮಗಳೂರು ಉಪಚುನಾವಣೆಯ ಅನಂತರ ದಿನಗಳಲ್ಲಿ ಇಂದಿರಾಜಿ ಮತ್ತು ಅರಸರ ಪೈಕಿ ಯಾರಾ ದರೊಬ್ಬರನ್ನು ಆರಿಸಿಕೊಳ್ಳುವುದು ಚಂದ್ರೇಗೌಡರಿಗೆ ಅನಿವಾರ್ಯವಾಯಿತು. “ಇಂದಿರಾಜಿ ಜತೆ ಕೈ ಜೋಡಿಸಿ ರಾಷ್ಟ್ರ ಅಥವಾ ರಾಜ್ಯ ರಾಜಕಾರಣದಲ್ಲಿ ನಾನು ಸ್ಥಾನ ಪ್ರತಿಷ್ಠೆಗಳನ್ನು ಹೆಚ್ಚಿಸಿಕೊಳ್ಳಬಹುದಾಗಿತ್ತು. ಆದರೆ ಹಿಂದುಳಿದ ವರ್ಗಗಳ ದೇವರಾಜ ಅರಸರು ಅಸಹಾಯಕರಾಗಿ ಒಂಟಿಯಾಗಿ ಬೀದಿಗೆ ಬಿದ್ದಾಗ ಅವರೊಂದಿಗೆ ನಿಲ್ಲುವುದು ನನ್ನ ವೈಚಾರಿಕ ಧರ್ಮ. ನಾನು ಅರಸರೊಂದಿಗೇ ಗಟ್ಟಿಯಾಗಿ ನಿಂತೆ…’ಇದು ಸಭ್ಯ ರಾಜಕಾರಣ ದಾರದಹಳ್ಳಿ ಬಿ. ಚಂದ್ರೇಗೌಡರು ಅಂದು ಆಡಿದ ಮಾತು. ಇಂದು ಚಂದ್ರೇಗೌಡರು ನಮ್ಮನ್ನು ಅಗಲಿದ್ದಾರೆ. ನೀತಿವಂತ ರಾಜಕಾರಣ ನಿಜವಾಗಿಯೂ ತಬ್ಬಲಿಯಾಗಿದೆ.

  ಶೇಷಣ್ಣ, ಹಿರಿಯ ಪತ್ರಕರ್ತ ಹಾಗೂ ಚಂದ್ರೇಗೌಡರ ಆತ್ಮಚರಿತ್ರೆಯ ನಿರೂಪಕ

Advertisement

Udayavani is now on Telegram. Click here to join our channel and stay updated with the latest news.

Next