Advertisement

Politics: ಬುಧವಾರ ಕಾಂಗ್ರೆಸ್‌ ಶಾಸಕಾಂಗ ಪಕ್ಷ ಸಭೆ

12:25 AM Dec 11, 2023 | Team Udayavani |

ಬೆಳಗಾವಿ: ಕೇವಲ ಒಂದು ವಾರದ ಅಂತರದಲ್ಲಿ ಕಾಂಗ್ರೆಸ್‌ ಮತ್ತೂಂದು ಬಾರಿ ತನ್ನ ಶಾಸಕಾಂಗ ಪಕ್ಷದ ಸಭೆ ಕರೆದಿದೆ. ಈ ಬಾರಿಯೂ ಅನು ದಾನ, ಸಚಿವರ ವಿರುದ್ಧದ ದೂರುಗಳು ಪುನರಾವರ್ತನೆ ಆಗುವ ಸಾಧ್ಯತೆ ಇದೆ.

Advertisement

ಡಿ. 13ರಂದು ಸಂಜೆ 7ಕ್ಕೆ ಬೆಂಗ ಳೂರಿನ ಶೂನ್ಯ ಫಾರಂ ರಿಟ್ರೀಟ್‌ನಲ್ಲಿ ಸಭೆ ಕರೆಯಲಾಗಿದ್ದು, ಕಳೆದ ವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಸಿಗದವರಿಗೆ ಈ ಸಭೆಯಲ್ಲಿ ಅಭಿಪ್ರಾಯ ಮಂಡನೆಗೆ ವೇದಿಕೆ ಸಿಗಲಿದೆ ಎಂದು ಮೂಲಗಳು ತಿಳಿಸಿವೆ.

ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡಬೇಕು. ಈಗಾಗಲೇ ತಲಾ 25 ಕೋಟಿ ರೂ. ನೀಡುವುದಾಗಿ ಹೇಳಿದ್ದೀರಿ. ಆದರೆ ಅದನ್ನು ಆದಷ್ಟು ಬೇಗ ಬಿಡುಗಡೆ ಮಾಡಬೇಕು. ಇದರ ಜತೆಗೆ ಶಾಸಕರ ಮಾತುಗಳಿಗೆ ಸಚಿವರ ಅವಗಣನೆ ಮುಂದುವರಿದಿದ್ದು, ಈ ಬಗ್ಗೆ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸುವ ಸಾಧ್ಯತೆ ಇದೆ ಎಂದು ಕೆಲವು ಶಾಸಕರು ಮಾಹಿತಿ ನೀಡಿದ್ದಾರೆ.
ಇದಲ್ಲದೆ ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌ ಚುನಾವಣೆ ವಿಷಯವೂ ಸಭೆಯಲ್ಲಿ ಚರ್ಚೆಗೆ ಬರಲಿದೆ ಎನ್ನಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next